ದುಬೈ ರಸ್ತೆ ಅಪಘಾತದಲ್ಲಿ ಮೃತಪಟ್ಟ 17 ಮಂದಿ ಪೈಕಿ 10 ಭಾರತೀಯರು

0
17

ದುಬೈ- ಯುನೈಟೆಡ್ ಅರಬ್ ಅಮಿರೆಟ್ಸ್ ನ ದುಬೈನಲ್ಲಿ ಬಸ್ ಅಪಘಾತಕ್ಕೀಡಾಗಿ ಸಂಭವಿಸಿದ ದುರ್ಘಟನೆಯಲ್ಲಿ 10 ಭಾರತೀಯರು ಸೇರಿದಂತೆ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ದುಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಬಸ್ ನಲ್ಲಿ ಒಟ್ಟು 31 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ದುಬೈನ ಮೆಟ್ರೋ ನಿಲ್ದಾಣದ ಬಳಿ ಚಾಲಕ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಸಿಗ್ನಲ್ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಈ ವೇಳೆ ಹತ್ತು ಜನ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ನಸುಕಿನ ಜಾವ ಮಸ್ಕಟ್ ನಿಂದ ದುಬೈಗೆ ಹೋಗುತ್ತಿದ್ದ ಬಸ್ ಸೈನ್ ಬೋರ್ಡ್ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದ್ದು, ಪ್ರಯಾಣಿಕರನ್ನು ತೆಗೆದುಕೊಂಡು ಹೋಗುತ್ತಿದ್ದ ರಾಷ್ಟ್ರೀಯ ಸಾರಿಗೆ ಬಸ್ ಮ್ವಾಸಾಲಾತ್, ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಮಾರ್ಗದಲ್ಲಿನ ಮೆಟ್ರೋ ರೈಲು ನಿಲ್ದಾಣ ಬಳಿಯ ಸಿಗ್ನಲ್ ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಸ್ ನಲ್ಲಿ ವಿವಿಧ ದೇಶಗಳ 31 ಪ್ರಯಾಣಿಕರಿದ್ದರೆನ್ನಲಾಗಿದ್ದು, ಈದ್ ಉಲ್ ಫಿತ್ರ್ ಸಂಭ್ರಮಾಚರಣೆ ಮುಗಿಸಿಕೊಂಡು ಒಮನ್ ನಿಂದ ವಾಪಸ್ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

loading...