ಧೋನಿಗೆ ಸಾವಿರಾರು ಕ್ರಿಕೆಟ್‌ ಅಭಿಮಾನಿಗಳು ಬೆಂಬಲ

0
17

ಸೌಥ್‌ಹ್ಯಾಮ್ಟನ್‌:- ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ಸೇನೆಗೆ ಗೌರವಾರ್ಥವಾಗಿ “ಕಠಾರಿ ಮುದ್ರೆ” ಕೈಗವಸಗಳನ್ನು ಧರಿಸಿ ವಿಕೆಟ್‌ ಕೀಪಿಂಗ್‌ ಮಾಡಿದ್ದರು. ಈ ಚಿಹ್ನೆಯಿರುವ ಗ್ಲೌಸ್ ಧರಿಸದಂತೆ ಬಿಸಿಸಿಐಗೆ ಐಸಿಸಿ ಸೂಚಿಸಿತ್ತು. ಆದರೆ, ಇದೀಗ ಧೋನಿ ಅದೇ ಕೈಗವಸಗಳನ್ನು ಧರಿಸುವಂತೆ ಕ್ರಿಕೆಟ್‌ ಅಭಿಮಾನಿಗಳು ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಬುಧವಾರ (ಜೂನ್ 5) ನಡೆದಿದ್ದ ದಕ್ಷಿಣ ಆಫ್ರಿಕಾ ಹಾಗೂ ಭಾರತ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಅವರು ಅರೆ ಸೇನೆಗೆ ಸಂಬಂಧಿಸಿದ “ಕಠಾರಿ ಮುದ್ರೆ” ಹೊಂದಿರುವ ಚಿಹ್ನೆ ವಿಶೇಷ ಗ್ಲೌಸ್ ಧರಿಸಿದ್ದರು. ವಿಶ್ವಕಪ್ ವೇಳೆ ಇಂಥ ಗ್ಲೌಸ್ ಧರಿಸಲು ಅವಕಾಶವಿಲ್ಲ. ಇದು ನಿಯಮ ಉಲ್ಲಂಘನೆಯಾಗುತ್ತದೆ. ಧೋನಿ ಗ್ಲೌಸ್‌ನಿಂದ ಈ ಮುದ್ರೆ ತೆಗೆಯಬೇಕು ಎಂದು ಐಸಿಸಿಯು ಬಿಸಿಸಿಐಗೆ ಸೂಚಿಸಿತ್ತು.

ಐಸಿಸಿ ಹೇಳಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸಿಲ್ಲ. ಬದಲಿಗೆ ಐಸಿಸಿಗೆ ಮತ್ತೆ ಪತ್ರ ಬರೆದು ಧೋನಿ ಕ್ರಮದ ಬಗ್ಗೆ ಸ್ಟಷ್ಟತೆ ನೀಡಿದೆ. ಜತೆಗೆ, ಧೋನಿ ಅದೇ ಕೈಗವಸಗಳನ್ನು ಹಾಕಿಕೊಂಡು ವಿಕೆಟ್‌ ಕೀಪಿಂಗ್‌ ಮಾಡಲು ಅವಕಾಶ ನೀಡಬೇಕೆಂದು ಕ್ರಿಕೆಟ್‌ ಆಡಳಿತ ಮಂಡಳಿ ಮುಖ್ಯಸ್ಥ ಐಸಿಸಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಸಾವಿರಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ತಮ್ಮ ನೆಚ್ಚಿನ ಆಟಗಾರ ಧೋನಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಗ್ಲೌಸ್ ತೆಗೆಯಬೇಡಿ ನೀವೊಬ್ಬರು ಪ್ಯಾರಾ ರೆಜಿಮೆಂಟ್ ಅಧಿಕಾರಿ. ಆ ಗ್ಲೌಸನ್ನು ತೆಗೆಯಬೇಡಿ. ‘ಬಲಿದಾನ’ ನಮ್ಮ ಗೌರವದ ಚಿಹ್ನೆ. ಅದು ನಮ್ಮ ಭಾರತೀಯ ಸೇನೆಯ ಹೆಮ್ಮೆಯ ದ್ಯೋತಕವೂ ಹೌದು. ದೇಶವೇ ನಿಮ್ಮ ಬೆಂಬಲಕ್ಕಿದೆ ಎಂದು ಧೋನಿ ಬೆಂಬಲಿಸಿ ನಿವೃತ್ತ ಮೇಜರ್ ಗೌರವ್ ಆರ್ಯ ಟ್ವೀಟ್ ಮಾಡಿದ್ದಾರೆ.

loading...