ನ್ಯಾಯವಾದಿಗಳ ಮೇಲೆ ಹಲ್ಲೆ ಖಂಡಿಸಿ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ

0
9

ವಿಜಯಪುರ : ನ್ಯಾಯವಾದಿಗಳ ಮೇಲೆ ಅನುಚಿತವಾಗಿ ವರ್ತನೆ ಮಾಡಿರುವ ನರಗುಂದ ಪೊಲೀಸ್ ಠಾಣೆಯ ಸಿಪಿಐ ಅವರ ಕ್ರಮ ಖಂಡಿಸಿ ವಿಜಯಪುರದಲ್ಲೂ ನ್ಯಾಯವಾದಿಗಳು ಶುಕ್ರವಾರ ನ್ಯಾಯಾಲಯದ ಕಾರ್ಯ-ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ವಿ.ಎಚ್. ಖಾಸನೀಸ ಮಾತನಾಡಿ, ಇತ್ತಿÃಚಿನ ದಿನಗಳಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆ, ಅನುಚಿತ ವರ್ತನೆಗಳು ನಡೆಯುತ್ತಿವೆ. ನ್ಯಾಯದಾನದ ಪವಿತ್ರ ಕರ್ತವ್ಯದಲ್ಲಿ ತೊಡಗಿರುವ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಇನ್ನಾದರೂ ಸಹ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಯುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
.ಜೂ.೧ ರಂದು ಹಿರಿಯ ನ್ಯಾಯವಾದಿಗಳಾದ ಸಿ.ಎಸ್. ಪಾಟೀಲ, ವ್ಹಿ.ಎಸ್. ದೇಶಪಾಂಡೆ ಅವರ ಮೇಲೆ ನರಗುಂದ ಪೊಲೀಸ್ ಠಾಣೆಯ ಸಿಪಿಐ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ಹಲ್ಲೆ ಮಾಡಿದ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ನ್ಯಾಯವಾದಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎನ್.ರುಣವಾಲ, ಕಾರ್ಯದರ್ಶಿ ಆರ್.ಎನ್.ಅಡ್ಡೊÃಡಗಿ, ಜಂಟಿ ಕಾರ್ಯದರ್ಶಿ ಸಿ.ಎ.ಇಂಚಗೇರಿ, ಎಸ್.ಎ.ಚೂರಿ, ವಿ.ವೈ.ಕಟ್ಟಿಮನಿ, ಎಸ್.ಎಸ್.ಹಿರೇಮಠ, ಬಿ.ವೈ.ದಾಲಿ, ಐ.ಬಿ.ಅಳ್ಳಿಗಿಡದ, ವಿ.ಎಸ್.ಪಾಟೀಲ, ಕೆ.ಸಿ.ರಾಠೋಡ, ಬಿ.ಬಿ. ಹಿಪ್ಪರಗಿ ಉಪಸ್ಥಿತರಿದ್ದರು.

loading...