ಸ್ವಚ್ಛ ಮೇವ ಜಯತೆ ಮಾಸಾಚರಣೆ

0
57

ಸವಣೂರು : ಮಾನವ ಸಂಕುಲ ಜೀವಿಗಳು ಎಂದಿನವರಗೂ ಅರಣ್ಯ ರೋದನ ನಿಲ್ಲಿಸುವದಿಲ್ಲವೂ ಅಲ್ಲಿಯವರಗೆ ತಾಪಮನ ಹೆಚ್ಚೆಳಗೊಳ್ಳುತ್ತ ಹೋಗುತ್ತದೆ. ಈ ದಿಶೆಯಲ್ಲಿ ಇಂದು ಪರಿಸರ ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲರ ಕೈಯಲ್ಲಿದೆ ಇನ್ನೂ ಮುಂದೆ ಪ್ರತಿಯೊಬ್ಬರಿಗೂ ಒಂದು ಸಸಿ ನೆಟ್ಟು ಅದರ ಪಾಲನೆ ಪೋಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಮಾಜಿ ತಾಪಂ ಅಧ್ಯಕ್ಷ ರಮೇಶ ಅರಗೋಳ ಹೇಳಿದರು.

ತಾಲೂಕಿನ ಮಂತ್ರೊÃಡಿ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಸ್ವಚ್ಚ ಭಾರತ ಮೀಷನ ಯೋಜನೆಡಿಯಲ್ಲಿ ಸ್ವಚ್ಚ ಮೇವ ಜಯತೆ ಮಾಸಾಚರಣೆ ಅಂಗವಾಗಿ ಗ್ರಾಪಂ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಪರಿಸರ ನಾಶ ಮಾಡುವ ಮಾನವ ಕುಲ ಇನ್ನಾದರೂ ಎಚ್ಚೆತುಕೊಂಡು ಪರಿಸರ ಸಂರಕ್ಷಣೆ ಮಾಡುವ ಮೂಲಕ ಗ್ರಾಮದಲ್ಲಿ ಪ್ರತಿಯೊಂದು ಬೀದಿಯಲ್ಲಿ ಖಾಲಿ ಜಾಗ ಉಳಿಯದಂತೆ ಪ್ರತಿಯೊಬ್ಬರು ಒಂದು ಒಂದು ಸಸಿ ನೆಟ್ಟು ಪರಿಸರ ಹಾಗೂ ಅರಣ್ಯ ಬೆಳೆಸುವ ಹೋಣೆಗಾರಿಕೆ ಪ್ರತಿಯೊಬ್ಬ ಪ್ರಜೆಗಳದಾಗಲ್ಲಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಪ್ರತಿಜ್ಞಾ ವಿಧಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಮಿಳಾ ಕೋಟಿ ಭೋಧಿಸಿದರು.

ಈ ಸಂದರ್ಭದಲ್ಲಿ ಪಿಡಿಓ ಎಂ.ಕೆ.ಬಡಿಗೇರ, ಗ್ರಾಪಂ ಸದಸ್ಯ ಫಕ್ಕಿÃರೇಶ ಶಿಗ್ಗಾಂವ, ಮಾಜಿ ಸದಸ್ಯರಾದ ಶಿವಬಸಯ್ಯ ಪ್ರಭಯ್ಯನವರಮಠ, ನಾಗಪ್ಪ ಮೇಟಿ, ಗ್ರಾಮಸ್ಥರಾದ ಶಂಕ್ರಪ್ಪ ಕಮ್ಮಾರ, ನಿಂಗಪ್ಪ ಹರಿಜನ, ನಾಗಪ್ಪ ಹರಿಜನ, ಮಾಬುಸಾಬ ಕೆಂಗಾಪೂರ, ಅಂಗನವಾಡಿ ಕಾರ್ಯಕರ್ತೆಯರಾದ ಟಿ.ಜಿ,ಪಾಟೀಲ, ಭಾರತಿ ಹಿರೇಮಠ, ದ್ಯಾಮಕ್ಕ ಮಾಗಡಿ, ಗ್ರಾಪಂ ಸಿಬ್ಬಂದಿಗಳಾದ ಬಸವಣೇಪ್ಪ ಬಾಣದ, ಏಳುಕೋಟಿ ಸಿಂಪಿ, ಮಂಜುನಾಥ ಓಲೇಕಾರ ಹಾಗೂ ಗ್ರಾಮಸ್ಥರು ಇದ್ದರು.

 

loading...