ಗಟಾರು ನಿರ್ಮಿಸುವಂತೆ ಮನವಿ

0
23

ಸವಣೂರು : ಪಟ್ಟಣದ ೧೫-೧೬ ವಾರ್ಡಿನ ಮಯಾನಿ ಓಣಿಯಲ್ಲಿ ಸುಮಾರು ವರ್ಷಗಳ ಹಳೇಯದಾದ ಗಟ್ಟಾರುಗಳು ಇದ್ದು, ತುಂಬಿ ತುಳುಕುತ್ತಿವೆ. ಆದ್ದರಿಂದ ಹೊಸದಾಗಿ ಗಟಾರನಿರ್ಮಾಣ ಮಾಡಬೇಕೆಂದು ಸ್ಥಳೀಯ ಸಾರ್ವಜನಿಕರು ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣ ರಾವ್ ಅವರಿಗೆ ಮನವಿಯನ್ನು ಮಂಗಳವಾರ ಸಲ್ಲಿಸಿದರು.
ಪಟ್ಟಣದ ಮಯಾನಿ ಗಲ್ಲಿಯೂ ೧೫-೧೬ ವಾರ್ಡಿನ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಸುಮಾರು ವರ್ಷಗಳ ಹಳೆಯದಾದ ಗಟ್ಟಾರಗಳು ಇದ್ದು ಅವುಗಳು ಇಂದು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತವೆ. ಆದ್ದರಿಂದ ಈ ಗಲ್ಲಿಯ ಸಾರ್ವಜನಿಕರು ದುರ್ವಾಸನೆಯಿಂದ ಬೆಸತ್ತು ಸಾಕಷ್ಟು ರೋಗಗಳಿಗೆ ತುತ್ತಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ಇದೇ ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ತೆರಳುವ ಸಾರ್ವಜನಿಕರು ಮುಗು ಮುಚ್ಚಿಕೊಂಡೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಲ್ಲಿಯ ಗಟ್ಟಾರುಗಳ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಈ ಎರಡು ವಾರ್ಡಿನ ಜನರ ಆರೋಗ್ಯದ ದೃಷ್ಟಿಯಿಂದ ಕೂಡಲೆ ಗಟ್ಟಾರ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತೌಸೀಫರಾಜಾ ಟಿನಮೇಕರ, ಇರ್ಫಾನಹಮ್ಮದ ಹವಾಲ್ದಾರ, ಸೈಯದ ಪಿರಜಾದೆ, ಸಾಧಿಕಅಹ್ಮದ ಟಿನಮೇಕರ, ಅಲ್ತಾಪಅಹ್ಮದ ಟಿನಮೇಕರ ಹಾಗೂ ವಾರ್ಡಿನ ಸಾರ್ವಜನಿಕರು ಉಪಸ್ಥಿತರಿದ್ದರು.

loading...