ನಕಲಿ ನಂಬರ ಪ್ಲೇಟ್ ವಾಹನಗಳ ಹಾವಳಿಗೆ ಬ್ರೇಕ್ ಯಾವಾಗ ?

0
38

ನಕಲಿ ನಂಬರ ಪ್ಲೇಟ್ ವಾಹನಗಳ ಹಾವಳಿಗೆ ಬ್ರೇಕ್ ಯಾವಾಗ ?

ಕೈ ಕಟ್ಟಿ ಕುಳಿತ ಪೊಲೀಸ್ ಇಲಾಖೆ : ಚಳ್ಳೆ ಹಣ್ಣು ತಿನಿಸುತ್ತಿರುವ ವಾಹನ ಸವಾರರು

ಮಾಲತೇಶ ಮಟಿಗೇರ

ಬೆಳಗಾವಿ: ನಗರದಲ್ಲಿ ಇತ್ತಿಚೆಗೆ ನಕಲಿ ನಂಬರ ಪ್ಲೇಟ್ ಹೊಂದಿರುವ ವಾಹನಗಳ ಹಾವಳಿ ಹೆಚ್ಚಾಗಿದ್ದರು, ಸಹ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಮುಖ ಜಾಣರಂತೆ ವರ್ತಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸುವ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಜೆಬಿಗೆ ಸಿಗುವ ಹಣಕ್ಕೆ ಕತ್ತರಿ ಹಾಕುವ ಉದ್ದೇಶದಿಂದ ಪೋನ್ ಆ್ಯಪ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವ ಸುಲಭದ ಮಾರ್ಗವನ್ನು ರಾಜ್ಯ ಪೊಲೀಸ್ ಇಲಾಖೆ ಕಂಡು ಹಿಡಿಯಲಾಯಿತು. ಆದರೆ ಇತ್ತಿಚೇಗೆ ದ್ವಿಚಕ್ರ ವಾಹನಗಳ ಸೇರಿದಂತೆ ವಾಹನಗಳಿಗೆ ನಕಲಿ ನಂಬರ ಹೊಂದಿರುವ ವಾಹನಗಳ ಕಂಡು ಬರುತ್ತಿದ್ದು, ಅಧಿಕಾರಿಗಳಿಗಿಂತ ವಾಹನ ಸವಾರರೇ ಹೆಚ್ಚು ಬುದ್ಧಿವಂತಿಕೆಯನ್ನು ತೊರಿಸುತ್ತಿದ್ದಾರೆ.

ವಾಹನಗಳ ನಂಬರ ಬದಲಾವಣೆ*: ದಂಡ ವಿಧಿಸುವ ಪತ್ರಗಳು ಮನೆ ವಿಳಾಸಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಪದೇ ಪದೆ ದಂಡ ವಿಧಿಸುವ ಮಾರ್ಗದಿಂದ ತಪ್ಪಿಸಿಕೊಳ್ಳಲು ಕೆಲ ವಾಹನ ಸವಾರರು ದ್ವಿಚಕ್ರ ವಾಹನಗಳ ನಂಬರನ್ನೇ ಬದಲಾಯಿಸುತ್ತಿದ್ದಾರೆ. ಇನ್ನೂ ಕೆಲವಂದಿಷ್ಟು ವಾಹನಗಳಿಗೆ ನಂಬರ ಪ್ಲೇಟ್ ಅನ್ನೇ ತೆಗೆಯಲಾಗುತ್ತಿದೆ. ಇವೇಲ್ಲಾ ನಗರದಲ್ಲಿ ಕಂಡು ಬಂದಿದ್ದರು ಸಹ ಪೊಲೀಸ್ ಹಾಗೂ ಆರ್‌ಟಿಯು ಇಲಾಖೆ ಯಾವುದೇ ರೀತಿ ಕ್ರಮ ಕೈಗೊಳ್ಳುವಲ್ಲಿ ಮುಂದಾಗಿಲ್ಲ.

ಕಳೆದ ಎಪ್ರಿಲ್ ತಿಂಗಳಲ್ಲಿ ಈ ಕುರಿತು ಕನ್ನಡಮ್ಮ ದಿನ ಪತ್ರಿಕೆ ವಿಶೇಷ ವರದಿ ಪ್ರಕಟಿಸಿಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಬಿ.ಎಸ್ ಲೋಕೇಶ ಕುಮಾರ ಅವರು ನಕಲಿ ನಂಬರ ಪ್ಲೇಟ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಂತವರು ಕಂಡು ಬಂದಲ್ಲಿ ವಾಹನಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಸಹ ಒಂದು ವರದಿಯಾಗಿಲ್ಲ.

ಪೊಲೀಸರಿಗೆ ಚೆಳ್ಳೆ ಹಣ್ಣು : ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ , ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಬುಕ್ , ಸ್ಪೀಡ್ ಡ್ರೈವಿಂಗ್, ಒನ್ ವೇ ರೋಡ್ ಪ್ರವೇಶ ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘಗನೆ ಮಾಡುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಪೋನ್ ಆ್ಯಪ್ ಬಳಸಿ ನಿಯಮ ಗಾಳಿ ತೂರುವ ಸವಾರರಿಗೆ ಕಡಿವಾಣ ಹಾಕಲು ವಾಹನಗಳ ನಂಬರ ಸ್ಕ್ಯಾನ್ ಮಾಡುವುದರಲ್ಲಿ ತೊಡಗಿದ್ದಾರೆ. ಆದರೆ ಚಾಲಾಕಿ ದ್ವಿಚಕ್ರ ಗಾಡಿ ಮಾಲೀಕರು ವಾಹನದ ನಂಬರ ಬದಲಾಯಿಸುವುದರ ಮೂಲಕ ಸಂಚಾರಿ ಪೊಲೀಸರಿಗೆ ಪಂಗನಾಮ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ನಿಯಮ ಉಲ್ಲಂಘನೆ ಗಾಳಿಗೆ ತೂರಿ ಸಂಚಾರ ಮಾಡುವ ದ್ವಿಚಕ್ರ ವಾಹನಗಳಿಗೆ ಒಂದಡೇ ಕಡಿವಾಣ ಹಾಕದಿರುವುದು ಒಂದಾದರೇ ಇನ್ನೊಂದಡೇ ನಕಲಿ ನಂಬರ ಪ್ಲೇಟ್ ಬಳಕೆ ಹೆಚ್ಚಾಗಿ ಪೊಲೀಸ್ ಇಲಾಖೆಗೆ ಚೆಳ್ಳೆ ಹಣ್ಣು ತಿನಿಸುತ್ತಿದ್ದಾರೆ. ಈಗಾಗಲಾದರು ಆರ್ ಟಿಓ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.

=====ಬಾಕ್ಸ್=========

ನಗರದಲ್ಲಿ ನಕಲಿ ನಂಬರ ಪ್ಲೇಟ್ ಇರುವ ವಾಹನಗಳ ಬಗ್ಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಿನನಿತ್ಯ ಆಟೋ, ದ್ವಿಚಕ್ರ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಇಲ್ಲಿವರೆಗೂ ಒಂದು ಸಹ ನಕಲಿ ನಂಬರ ಪ್ಲೇಟ್ ಇರುವ ಬಗ್ಗೆ ದೂರು ದಾಖಲಾಗಿಲ್ಲ.

ಬಿ.ಎಸ್ ಲೋಕೇಶ ಕುಮಾರ
ಪೊಲೀಸ್ ಆಯುಕ್ತರು ಬೆಳಗಾವಿ

loading...