ತೈಲ ಟ್ಯಾಂಕರ್ ಮೇಲಿನ ದಾಳಿ ಆರೋಪ ತಳ್ಳಿ ಹಾಕಿದ ಇರಾನ್

0
9

ವಿಶ್ವಸಂಸ್ಥೆ, – ಒಮಾನ್ ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಮೇಲಿನ ದಾಳಿಗೆ ಇರಾನ್ ಕಾರಣ ಎಂಬ ವಿಶ‍್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿ ಜೋನಾಥನ್ ಕೋಹೆನ್ ಅವರ ಆರೋಪವನ್ನು ಇರಾನ್ ತಳ್ಳಿ ಹಾಕಿದೆ.
ಒಂದು ದಿನ ಮುಂಚೆಯೇ ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ ಗಳಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ವಿಶ‍್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿ ಕೋಹೆನ್ ಮಾಡಿದ ಟೀಕೆಗಳು, ಇರಾನ್ ವಿರೋಧಿ ಅಭಿಯಾನದ ಭಾಗವಾಗಿದ್ದು, ಆರೋಪವನ್ನು ಇರಾನ್ ಸಂಪೂರ್ಣವಾಗಿ ತಳ್ಳಿಹಾಕುತ್ತದೆ ಎಂದು ಇರಾನ್ ಪ್ರಕಟಣೆಯಲ್ಲಿ ತಿಳಿಸಿದೆ
ಜೂನ್ 13ರಂದು ತೈಲ ಟ್ಯಾಂಕರ್ ಸ್ಫೋಟಗೊಂಡ ಘಟನೆಯನ್ನು ಇರಾನ್ ಖಂಡಿಸುತ್ತದೆ. ಅಮೆರಿಕ ಮಾಡುತ್ತಿರುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತದೆ ಎಂದು ಇರಾನ್ ಸ್ಪಷ್ಟಪಡಿಸಿದೆ.
ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಅವರು ಕೂಡ ಸುದ್ದಿಗೋಷ್ಠಿಯೊಂದರಲ್ಲಿ ಒಮಾನ್ ಕೊಲ್ಲಿಯ ಘಟನೆಗೆ ಇರಾನ್ ಕಾರಣ ಎಂದು ಆರೋಪಿಸಿದ್ದರು.
ದಾಳಿಯಲ್ಲಿ ತನ್ನ ಕೈವಾಡವಿರುವುದನ್ನು ಇರಾನ್ ತಿರಸ್ಕರಿಸಿದ್ದು, ಜಪಾನ್ ಪ್ರಧಾನಿ ಶಿಂಜೋ ಆಬೆ ಅವರು ಇರಾನ್ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಕ್ಕೆ ಇರಾನ್ ವಿದೇಶಾಂಗ ಸಚಿವ ಮೊಹ್ಮದ್ ಜಾವದ್ ಝರೀಫ್ ಸಂದೇಹ ವ್ಯಕ್ತಪಡಿಸಿದ್ದಾರೆ.

loading...