ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಆಫ್ರಿಕಾ, ಆಫ್ಘನ್‌

0
30
South Africans celebrate after they defeated Afghanistan by 37 runs during their ICC World Twenty20 2016 cricket match at the Wankhede stadium in Mumbai, India, Sunday, March 20, 2016. (AP Photo/Rafiq Maqbool)

ಕಾರ್ಡಿಫ್‌:- ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ನಾಳೆ ವಿಶ್ವಕಪ್‌ ಟೂರ್ನಿಯ 21ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಕಾದಾಟಕ್ಕೆ ಇಲ್ಲಿನ ಸೋಫಿಯಾ ಗಾರ್ಡ್‌ನ್ಸ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಮೇಲೆ ವಿಶ್ವಕಪ್‌ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಇನ್ನೂ ಒಂದರಲ್ಲೂ ಗೆಲುವು ಕಾಣದೆ ಇರುವುದು ಆಫ್ರಿಕಾ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
2015ರಲ್ಲಿ ಸೆಮಿಪೈನಲ್ಸ್‌ ಆಡಿದ್ದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧ ಕ್ರಮವಾಗಿ ಸೋಲು ಅನುಭವಿಸಿದೆ. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಖಾತೆಯಲ್ಲಿ ಒಂದೇ ಒಂದು ಅಂಕ ಇಟ್ಟುಕೊಂಡಿದೆ. ಸೆಮಿಫೈನಲ್‌ ಹಾದಿ ಜೀವಂತವಾಗಿರಬೇಕಾದರೆ, ನಾಳಿನ ಪಂದ್ಯದಲ್ಲಿ ಆಫ್ಘನ್‌ ವಿರುದ್ಧ ಗೆಲುವು ಅನಿವಾರ್ಯ.
ಆಫ್ರಿಕಾ ಬ್ಯಾಟಿಂಗ್‌ ಇನ್ನೂ ಲಯಕ್ಕೆ ಮರಳಿಲ್ಲ. ಕಳೆದ ರದ್ದಾದ ಪಂದ್ಯದಲ್ಲೂ ವಿಂಡೀಸ್‌ ವಿರುದ್ಧ 29 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಆಶೀಂ ಆಮ್ಲಾ ಕಳಪೆ ಲಯದಲ್ಲಿದ್ದು, ಆಫ್ರಿಕಾ ಪರ ನಾಯಕ ಫಾಫ್ ಡುಪ್ಲೇಸಿಸ್‌ ಹಾಗೂ ಕ್ವಿಂಟನ್ ಡಿ ಕಾಕ್‌ ಮಾತ್ರ ಸ್ಥಿರ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾರೆ. ಇನ್ನುಳಿದಂತೆ ಡೇವಿಡ್‌ ಮಿಲ್ಲರ್‌, ಡುಮಿನಿ ಬ್ಯಾಟಿಂಗ್‌ ಲಯಕ್ಕೆ ಮರಳುವ ಅಗತ್ಯವಿದೆ.
ಸತತ ಮೂರು ಸೋಲು ಅನುಭವಿಸಿರುವ ಅಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ವಿಕೆಟ್‌ ಕೀಪರ್‌ ಮೊಹಮ್ಮದ್‌ ಶಹ್ಜಾದ್ ಫಿಟ್‌ ಇಲ್ಲದೆ ತವರಿಗೆ ವಾಪಾಸಾಗಿದ್ದಾರೆ. ಆಫ್ಘನ್‌ ತಂಡದ ಬ್ಯಾಟಿಂಗ್‌ ವಿಭಾಗ ಇನ್ನೂ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ಆದರೆ, ಬೌಲಿಂಗ್‌ ವಿಭಾಗ ಉತ್ತಮ ಪ್ರದರ್ಶನ ತೋರುತ್ತಿದೆ.
ಆಫ್ರಿಕಾ ತಂಡದಲ್ಲಿ ಇಮ್ರಾನ್‌ ತಾಹಿರ್‌, ಕಗಿಸೋ ರಬಾಡ ಅವರು ಉತ್ತಮ ಲಯದಲ್ಲಿದ್ದಾರೆ. ನಾಳಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಫೇವರಿಟ್‌ ತಂಡವಾಗಿದೆ. ದಕ್ಷಿಣ ಆಫ್ರಿಕಾ:

ಫಾಫ್‌ ಡುಪ್ಲೇಸಿಸ್‌(ನಾಯಕ), ಐಡೆನ್‌ ಮಕ್ರಾಮ್‌, ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಹಾಶೀಮ್‌ ಆಮ್ಲಾ, ರಾಸ್ಸಿ ವಾನ್‌ ಡೆರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಕ್ರಿಸ್‌ ಮೋರಿಸ್‌, ಆ್ಯಂಡಿಲೆ ಫೆಹ್ಲುಕ್ವಾಯೊ, ಜೆ.ಪಿ ಡುಮಿನಿ, ಡ್ವೈನ್‌ ಪ್ರೆಟೋರಿಯಸ್‌, ಬ್ಯೂರಾನ್ ಹೆಂನ್ರಿಕ್ಸ್‌, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಇಮ್ರಾನ್‌ ತಾಹಿರ್‌, ತಬ್ರೈಜ್ ಶಂಸಿ

ಅಫ್ಘಾನಿಸ್ತಾನ:
ಗುಲ್ಬುದೀನ್ ನೈಬ್‌(ನಾಯಕ), ನೂರ್ ಅಲಿ ಝರ್ಡಾನ್‌, ಹಜರತುಲ್ಲಾಹ್‌ ಝಝೈ, ರಹಮತ್ ಶಾ, (ವಿ. ಕೀ), ಅಸ್ಘರ್‌ ಅಫ್ಘಾನ್, ಹಶ್ಮತುಲ್ಹಾ ಶಾಹಿಡಿ, ನಜೀಬುಲ್ಲಾ ಝರ್ಡಾನ್, ಸಮಿಯುಲ್ಹಾ ಶಿನ್ವಾರಿ, ಮೊಹಮ್ಮದ್ ನಬಿ, ರಶೀದ್ ಖಾನ್, ದವ್ಲತ್‌ ಝರ್ಡಾನ್, ಹಮ್ಬ್ ರಹಮಾನ್, ಇಕ್ರಮ್ ಅಲಿ ಖಿಲ್,ಅಘ್ತಾಬ್‌ ಅಲಾಮ್‌, ಹಮೀದ್‌ ಹಸನ್‌, ಮುಜೀಬ್‌ ಉರ್‌ ರಹಮನ್, ಇಕ್ರಾಮ್‌ ಅಲಿ ಖಿಲ್
ಸಮಯ: ನಾಳೆ ಸಂಜೆ 06:00
ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್‌

loading...