ಸ್ವಚ್ಚ ಮೇವ ಜಯತೆ ಮಾಸಾಚರಣೆಗೆ ಚಾಲನೆ

0
21

ಸವಣೂರು : ದಿನದಿಂದ ದಿನಕ್ಕೆ ಮನುಷ್ಯನ ದುರಾಸೆಗೆ ಪರಿಸರ ಮಿತಿಮೀರಿ ನಾಶವಾಗುತ್ತಿದ್ದು ಇಂದು ಮಾನವ ಸಂಕುಲ, ಪ್ರಾಣಿ ಪಕ್ಷಿಗಳು ಉಳಿವಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎಂದು ತಾಪಂ ಮಾಜಿ ಅಧ್ಯಕ್ಷ ರಮೇಶ ಅರಗೋಳ ಹೇಳಿದರು.

ತಾಲೂಕಿನ ಮಂತ್ರೊÃಡಿ ಗ್ರಾಮದ ಗ್ರಾಪಂ ಆವರಣದಲ್ಲಿ ಸ್ವಚ್ಚ ಭಾರತ ಮಿಶನ್ ಯೋಜನೆಡಿಯಲ್ಲಿ ಸ್ವಚ್ಚ ಮೇವ ಜಯತೆ ಮಾಸಾಚರಣೆ ಅಂಗವಾಗಿ ಗ್ರಾಪಂ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಅತಿ ಆಸೆಗೆ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವ ಮನುಷ್ಯ ಇನ್ನಾದರೂ ಎಚ್ಚೆತ್ತುಗೊಂಡು ಪರಿಸರ ಸಂರಕ್ಷಣೆ ಮುಂದಾಗುವ ಮೂಲಕ ಮುಂದಿನ ಜನಾಂಗಕ್ಕೆ ಸ್ವಚ್ಛ ಹಾಗೂ ಸಮೃದ್ದವಾದ ಜೀವನವನ್ನು ಬಳುವಳಿ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಗ್ರಾಮದ ಪ್ರತಿಯೊಂದು ಬೀದಿ, ಖಾಲಿ ಜಾಗಗಳಲ್ಲಿ ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಹಾಗೂ ಅರಣ್ಯ ಬೆಳೆಸುವ ಹೊಣೆಗಾರಿಕೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಪ್ರತಿಜ್ಞಾ ವಿಧಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಮಿಳಾ ಕೋಟಿ ಭೋಧಿಸಿದರು.

ಈ ಸಂದರ್ಭದಲ್ಲಿ ಪಿಡಿಓ ಎಂ.ಕೆ.ಬಡಿಗೇರ, ಗ್ರಾಪಂ ಸದಸ್ಯ ಫಕ್ಕಿÃರೇಶ ಶಿಗ್ಗಾಂವ, ಮಾಜಿ ಸದಸ್ಯರಾದ ಶಿವಬಸಯ್ಯ ಪ್ರಭಯ್ಯನವರಮಠ, ನಾಗಪ್ಪ ಮೇಟಿ, ಗ್ರಾಮಸ್ಥರಾದ ಶಂಕ್ರಪ್ಪ ಕಮ್ಮಾರ, ನಿಂಗಪ್ಪ ಹರಿಜನ, ನಾಗಪ್ಪ ಹರಿಜನ, ಮಾಬುಸಾಬ ಕೆಂಗಾಪೂರ, ಅಂಗನವಾಡಿ ಕಾರ್ಯಕರ್ತೆಯರಾದ ಟಿ.ಜಿ,ಪಾಟೀಲ, ಭಾರತಿ ಹಿರೇಮಠ, ದ್ಯಾಮಕ್ಕ ಮಾಗಡಿ, ಗ್ರಾಪಂ ಸಿಬ್ಬಂದಿಗಳಾದ ಬಸವಣೇಪ್ಪ ಬಾಣದ, ಏಳುಕೋಟಿ ಸಿಂಪಿ, ಮಂಜುನಾಥ ಓಲೇಕಾರ ಹಾಗೂ ಗ್ರಾಮಸ್ಥರು ಇದ್ದರು.

 

loading...