ದಾಂಡೇಲಿಯಿಂದ ಹುಬ್ಬಳ್ಳಿಯವರೆಗೆ ರೈಲು ಸಂಚಾರ ಪ್ರಾರಂಭಿಸಲು ಆಗ್ರಹ

0
29

 

ದಾಂಡೇಲಿ: ಕಳೆದ ಹಲವು ವರ್ಷಗಳ ದಾಂಡೇಲಿಗರ ಬಹುಮುಖ್ಯ ಬೇಡಿಕೆಯಾದ ದಾಂಡೇಲಿಯಿಂದ ಹುಬ್ಬಳ್ಳಿಯವರೆಗೆ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಿಸುವ ಬೇಡಿಕೆಗೆ ತ್ವರಿತಗತಿಯಲ್ಲಿ ಸ್ಪಂದಿಸಿ, ಅತೀ ಶೀಘ್ರದಲ್ಲಿ ರೈಲು ಸಂಚಾರವನ್ನು ಪ್ರಾರಂಭಿಸಬೇಕು ಹಾಗೂ ಅಂಬೇವಾಡಿ ರೈಲ್ವೆ ನಿಲ್ದಾಣದ ಬದಲು ದಾಂಡೇಲಿ ರೈಲ್ವೆ ನಿಲ್ದಾಣವೆಂದು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಸಮಿತಿಯು ಶುಕ್ರವಾರ ಹುಬ್ಬಳ್ಳಿಯ ರೈಲ್ವೆ ಕಚೇರಿಗೆ ಭೇಟಿ ನೀಡಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಜೇಶ ಮೋಹನ ಅವರಿಗೆ ಲಿಖಿತ ಮನವಿ ನೀಡಿತು.
ಅವರು ನೀಡಿದ ಮನವಿಯಲ್ಲಿ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಸ್ವಾತಂತ್ರದ ಪೂರ್ವದಲ್ಲಿ ಮೊಟ್ಟಮೊದಲು ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಪ್ರಯಾಣಿಕರ ರೈಲನ್ನು ನಿಲ್ಲಿಸಲಾಯಿತು. ಅಂದಿನ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಪ್ರಯಾಣಿಕ ರೈಲನ್ನು ಅಭಿವೃಧ್ದಿ ಪಡಿಸಲು ಯಾವುದೇ ಪ್ರಯತ್ನ ಮಾಡದಿರುವುದೆ ರೈಲು ಸಂಚಾರ ಸ್ಥಗಿತಕ್ಕೆ ಕಾರಣವಾಯಿತು. ಮೂರು ನಾಲ್ಕು ವರ್ಷಗಳ ಹಿಂದೆ ಸಂಸದ ಪ್ರಹ್ಲಾದ ಜೋಶಿಯವರ ಪ್ರಯತ್ನದಿಂದ ರೈಲು ಸಂಚಾರ ಪುನಾರಂಭಕ್ಕೆ ಮರು ಜೀವ ಸಿಕ್ಕಂತೆ ಆಯಿತು. ಅಲ್ಲದೆ ಸದಾನಂದ ಗೌಡಾ ಅವರು ರೈಲ್ವೆ ಮಂತ್ರಿಯವರಿದ್ದಾಗ ದಾಂಡೇಲಿ (ಅಂಬೇವಾಡಿ ಇಂದ ಧಾರವಾಡ)ದ ವರೆಗೆ ರೈಲ್ವೆ ಬಜೆಟಿನಲ್ಲಿ ರೈಲ್ವೆ ಮಾರ್ಗವನ್ನು ಘೋಷಿಸಿದರು. ಆದರೆ ರಾಜಕೀಯ ಇಚ್ಛಾ ಶಕ್ತಿ ಕೊರೆತೆಯಿಂದ ಇಲ್ಲಿಯವರೆಗೆ ಪ್ರಯಾಣಿಕರ ರೈಲು ಪ್ರಾರಂಭವಾಗಿರುವುದಿಲ್ಲ. ಹಲವಾರು ಭಾರಿ ಹುಬ್ಬಳ್ಳಿಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಬೇಟಿಯಾಗಿ ವಿಷಯವನ್ನು ಗಮನಕ್ಕೆ ತಂದಾಗ ೧೫ ದಿನಗಳಲ್ಲಿ ರೈಲು ಪ್ರಾರಂಭಿಸುತ್ತೆÃವೆ ಎಂದು ಹಲವಾರು ಪೊಳ್ಳು ಭರವಸೆ ನೀಡಿರುದಷ್ಟೆ ಬಿಟ್ಟರೇ ರೈಲು ಸಂಚಾರ ಪ್ರಾರಂಭವಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಹಿಂದೆ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಮರು ನಾಮಕರಣ ಮಾಡಲು ಉತ್ತರಕನ್ನಡ ಜಿಲ್ಲಾಧಿಕಾರಿಗಳು ಇವರ ಮೂಲಕ ದಿನಾಂಕ: ೨೭.೦೨.೨೦೧೮ ರಂದು ಹಿಂಬರಹವನ್ನು ಕಳಿಸಿಕೊಟ್ಟಿರುವುದರ ಜೊತೆಗೆ ಅದೇ ಮನವಿಯ ಪ್ರತಿಯನ್ನು ಭೇಟಿಯಾಗಿ ನೀಡಲಾಗಿತ್ತು. ಅಂಬೇವಾಡಿ ಪ್ರದೇಶವು ದಾಂಡೇಲಿ ತಾಲೂಕಿನ ಸಣ್ಣ ಗ್ರಾಮದ ಹೆಸರಾಗಿದ್ದು, ಇದರಿಂದ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಅದರ ಬದಲು ರಳ್ವೆ ನಿಲ್ದಾಣದ ಹೆಸರನ್ನು ದಾಂಡೇಲಿ ಎಂದು ಮರು ನಾಮಕರಣ ಮಾಡಿದರೆ ಪ್ರಯಾಣಿಕರಿಗೆ ಅನುಕೂಲಕರವಾಗುತ್ತದೆ. ಒಂದು ವೇಳೆ ದಾಂಡೇಲಿಯಿಂದ ಪ್ರಯಾಣಿಕರ ರೈಲನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸದಿದ್ದಲ್ಲಿ ಅನಿವಾರ್ಯವಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಅಕ್ರಂ ಖಾನ್ ಹಾಗೂ ಅಶೋಕ ಪಾಟೀಲ, ಬಲವಂತ ಬೋಮ್ಮನಹಳ್ಳಿ, ಮಹೇಶ ಮೈತ್ರಿ, ವಸಂತ ಮನ್ನೆÃರಿ, ಬಾಬಾಸಾಬ ಜಮಾದಾರ, ದಸ್ತಗಿರ ಮುಲ್ಲಾ, ಅಬ್ದುಲ ವಹಾಬ ಬನ್ಸಾರಿ, ಅಬ್ದುಲ ರಜಾಕ ಜುಂಜ್ವಾಡಕರ್ ಮೊದಲಾದವರು ಉಪಸ್ಥಿತರಿದ್ದರು.

loading...