ಭದ್ರತಾ ಕಾರಣಗಳಿಂದ ಕಾಶ್ಮೀರದಲ್ಲಿ ರೈಲು ಸೇವೆ ಸ್ಥಗಿತ

0
14

ಶ್ರೀನಗರ= ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಶುಕ್ರವಾರ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರು ಹತರಾದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ದಕ್ಷಿಣ ಕಾಶ್ಮೀರದಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಆದರೆ, ಉತ್ತರ ಕಾಶ್ಮೀರದ ಶ್ರೀನಗರ-ಬಡ್ಗಾಮ್ ಹಾಗೂ ಬಾರಾಮುಲ್ಲಾ ನಡುವಿನ ರೈಲು ಎಂದಿನಂತೆ ಸಂಚರಿಸಲಿದೆ ಎಂದು ರೈಲು ಅಧಿಕಾರಿಗಳು ಯುಎನ್ಐಗೆ ತಿಳಿಸಿದ್ದಾರೆ.
ಬಡ್ಗಾಮ್-ಶ್ರೀನಗರ -ಅನಂತನಾಗ್-ಕಾಜಿಗುಂದ ಹಾಗೂ ಬನಿಹಾಲ್ ನಡುವಿನ ರೈಲು ಸಂಚಾರವನ್ನು ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಶುಕ್ರವಾರ ಬೆಳಗ್ಗೆ 10ರಿಂದ ಸ್ಥಗಿತಗೊಳಿಸಲಾಗಿದೆ. ನಿನ್ನೆ ತಡರಾತ್ರಿ ರೈಲು ಸಂಚಾರವನ್ನು ಪುನರಾರಂಭಿಸದಂತೆ ಪೊಲೀಸ್ ಇಲಾಖೆಯು ಸಲಹೆ ನೀಡಿದೆ ಎಂದು ಅವರು ಹೇಳಿದರು.
ಸಮಾನ್ಯವಾಗಿ ಶನಿವಾರ ಪ್ರಯಾಣಿಕರು ತಮ್ಮ ಕುಟುಂಬದವರೊಂದಿಗೆ ಭಾನುವಾರದ ರಜೆ ಕಳೆಯಲು ತೆರಳುವುದರಿಂದ ದಟ್ಟಣೆ ಹೆಚ್ಚಾಗಿರುತ್ತದೆ. ಅದೇ ರೀತಿ ಸೋಮವಾರ ಬೆಳಗ್ಗೆ ಕೂಡ ಅವರು ತಮ್ಮ ತಮ್ಮ ಕೆಲಸಗಳಿಗೆ ತೆರಳುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಯಾಣಿಕರ ಸುರಕ್ಷತೆ ಪ್ರಮುಖವಾಗಿದ್ದರಿಂದ ಪೊಲೀಸ್ ಇಲಾಖೆಯ ಸಲಹೆ ಮೇರೆಗೆ ನಾವು ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಕಳೆದ ದಿನಗಳಲ್ಲಿ ಪ್ರತಿಭಟನೆಗಳು ನಡೆದಿದ್ದರಿಂದ ರೈಲ್ವೆ ಇಲಾಖೆಗೆ ಭಾರಿ ಪ್ರಮಾಣದ ಹಾನಿ ಸಂಭವಿಸಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದರು.

loading...