ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ೫೦೦ ರಿಂದ ಸಾವಿರ ರೂ…!

0
4

ಶಿರಹಟ್ಟಿ : ತಾಪಂ ಅಧ್ಯಕ್ಷೆ ಸುಶೀಲಾಬಾಯಿ ಇವರ ಸಂಬಂಧಿಯೊಬ್ಬರ ಹೆರಿಗೆ ಮಾಡಿಸುವುದಕ್ಕೆ ಅಲ್ಲಿಯ ಸಿಬ್ಬಂದಿ ೫೦೦ ರೂ. ಬೇಡಿಕೆ ಇಡುತ್ತಾರೆ, ಸ್ವತ: ನಾನೇ ಕೊಟ್ಟು ಬಂದಿದ್ದೆÃನೆ ಎಂದು ಅಧ್ಯಕ್ಷೆ ಸುಶೀಲಾಬಾಯಿ ಆರೋಗ್ಯ ಇಲಾಖೆಯ ಕ್ರಿಯಾಯೋಜನೆಯ ಅನುಮೋದನೆ ಸಂದರ್ಭದಲ್ಲಿ ಸಿಬ್ಬಂದಿಯನ್ನು ತರಾಟಗೆ ತೆಗೆದುಕೊಂಡ ಘಟನೆ ಶುಕ್ರವಾರ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ಸುಶೀಲಾಬಾಯಿ ಥಾವರೆಪ್ಪ ಲಮಾಣಿ ಇವರ ಅಧ್ಯಕ್ಷತೆಯಲ್ಲಿ ಜರುಗಿದಂತಹ ಸಾಮಾನ್ಯ ಸಭೆಯಲ್ಲಿ ಜರುಗಿತು.
ತಾಪಂ ಸದಸ್ಯ ನಿಂಗಪ್ಪ ಜಾಲವಾಡಗಿ ಬಾಲೇಹೊಸೂರಿನ ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿಯೂ ಇರುವದಿಲ್ಲಾ ಎಂದು ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಹೆಬ್ಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳೆಯರಿಗೆ ಹೆರಿಗೆಗಾಗಿ ಸತಾಯಿಸಿ ನಂತರ ಬೇರೆ ಕಡೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ, ಬೆಳ್ಳಟ್ಟಿಯಲ್ಲೂ ಸಹ ವೈದ್ಯರು ಇಲ್ಲದೇ ಇರುವದರಿಂದ ಗ್ರಾಮೀಣ ಪ್ರದೇಶಗಳ ಜನತೆಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹಾಜರಿದ್ದಂತಹ ಸಿಬ್ಬಂದಿಗೆ ಪ್ರಶ್ನೆಗಳ ಸುರಿಮಳೆಗೈದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿ ತಾಪಂ ಇಓ ಆರ್.ವೈ.ಗುರಿಕಾರ, ಬೆಳ್ಳಟ್ಟಿಯಲ್ಲಿ ವೈದ್ಯರನ್ನು ನಿಯೋಜಿಸಿದ್ದರೂ ಸರಿಯಾಗಿ ಕರ್ತವ್ಯಕ್ಕೆ ಬರದೇ ಇದ್ದರೆ ನೀವೇನ್ ಕ್ರಮ ಕೈಕೊಳ್ಳುತ್ತಿÃರಿ, ಅಂತಹ ಬೇಜವಾಬ್ದಾರಿ ವೈದ್ಯರುಗಳ ಮೇಲೆ ಕ್ರಮವಹಿಸಿ ಮುಂದಿನ ಸಭೆಗೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದರ ಬಗ್ಗೆ ವರದಿ ಸಲ್ಲಿಸಬೇಕೆಂದು ಹೇಳಿದರು.
ಲಿಂಕ್ ಡಾಕ್ಯುಮೆಂಟ್ ಕ್ರಿಯಾಯೋಜನೆಗಳಿಗೆ ಅನುಮೋದನೆಗೆ ಸಿಮೀತವಾದ ಸಭೆ.. !
ಸಭೆಯು ೨೦೧೯-೨೦ನೇ ಸಾಲಿನ ಇಲಾಖಾವಾರು ಹಂಚಿಕೆಯ ಲಿಂಕ್ ಡಾಕ್ಯುಮೆಂಟ್ ಅನುದಾನದ ಕಾರ್ಯಕ್ರಮಗಳ ಹಾಗೂ ೨೦೧೮-೧೯ನೇ ಸಾಲಿನ ಮಉದ್ರಾಂಕ ಶುಲ್ಕ ಕ್ರಿಯಾಯೋಜನೆಗಳಿಗೆ ಅನುಮೋದನೆಗೆ ಸಿಮೀತವಾದಂತೆ ಕಾಣುತ್ತಿತ್ತು. ಒಂದೆರೆಡು ಇಲಾಖೆಗಳು ಅನುಮೋದನೆ ಪಡೆಯುವಂತಹ ಸಂದರ್ಭದಲ್ಲಿ ಮಾತ್ರ ಚರ್ಚೆಯಾಗಿರುವುದನ್ನು ಬಿಟ್ಟರೆ ಮತ್ತಾö್ಯವ ಸುದೀರ್ಘ ಚರ್ಚೆ ನಡೆಯಲಿಲ್ಲ.
ಸರಕಾರಿ ನೌಕರರ ಚುನಾವಣೆಗೆ ಸುವರ್ಣಗಿರಿ ತಾಂಡಾದ ಶಾಲೇನೆ ಬಂದ್…!
ಸುವರ್ಣಗಿರಿ ತಾಂಡಾದಲ್ಲಿ ನಿನ್ನೆ ನಡೆದಂತಹ ಸರಕಾರಿ ನೌಕರರ ಚುನಾವಣೆಗೆ ಅಲ್ಲಿಯ ಶಿಕ್ಷಕರು ಶಾಲೆಯನ್ನು ಬಂದ್ ಮಾಡಿ ಚುನಾವಣೆಗೆ ತೆರಳಿದ್ದಾರೆ ಇಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಬೇಕೆಂದು ಸದಸ್ಯ ಅಶೋಕಯ್ಯ ಮುಳಗುಂದಮಠ ಆಗ್ರಹಿಸಿದರು. ಇದಕ್ಕೆ ಬಿಇಓ ವಿ.ವಿ.ಸಾಲಿಮಠ ಮಾತನಾಡಿ ಸಂಬಂಧಿಸಿದ ಸಿಆರ್‌ಪಿಗಳಿಗೆ ಈಗಾಗಲೇ ಈ ಘಟನೆ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಇನ್ನೂ ಬನ್ನಿಕೊಪ್ಪ ಗ್ರಾಮದಲ್ಲಿ ಕಲಿಕಾ ಕುಂಠಿತವಾಗುತ್ತಿರುವ ಬಗ್ಗೆ ಹಲವಾರು ಸಭೆಗಳಲ್ಲಿ ಚರ್ಚಿಸಿದರೂ ಸಹ ಯಾವುದೇ ಪ್ರಯೋಜನವಾಗಿರುವದಿಲ್ಲ ಇದನ್ನು ಕೇಳಿದ್ದು ನಮ್ಮ ತಪ್ಪಾಯಿತಾ ? ಎಂದು ಸದಸ್ಯೆ ಉಮಾ ಹೊನಗಣ್ಣವರ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಸಹ ಇಓ ಗುರಿಕಾರ ಮಧ್ಯಪ್ರವೇಶಿಸಿ ಬಿಇಓ ವಿ.ವಿ.ಸಾಲಿಮಠ ಅವರಿಗೆ ಬನ್ನಿಕೊಪ್ಪ ಶಾಲೆಯಲ್ಲಿ ಕಲಿಕಾ ಕುಂಠಿತಗೊಂಡಿದ್ದರ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕೆಂದು ಈ ಹಿಂದೆಯೇ ಸೂಚಿಸಲಾಗಿತ್ತು, ಈ ಬಗ್ಗೆ ಯಾವ ಕ್ರಮವಹಿಸಿದ್ದಿÃರೆಂದು ಬಿಇಓಗೆ ಕೇಳಿದರು. ಇದಕ್ಕೆ ಬಿಇಓ ಶಿಕ್ಷಕರನ್ನು ಬದಲಾಯಿಸಲು ಅಗತ್ಯ ಕ್ರಮ ಕೈಕೊಳ್ಳಲಾಗಿದೆ ಎಂದರು.
ಅಂಗನವಾಡಿ ಕಟ್ಟಡ ಯಾವಾಗ ಮುಗಿಯೋದು ?
ಶಿಗ್ಲಿ, ಆದ್ರಳ್ಳಿ, ಸೂರಣಗಿ ಮತ್ತು ಯತ್ನಳ್ಳಿ ಗ್ರಾಮಗಳಲ್ಲಿ ಹಲವು ವರ್ಷಗಳಾದರೂ ಸಹ ಅಂಗನವಾಡಿ ಕಟ್ಟಡಗಳು ಮುಗಿಯದೇ ಇರುವುದನ್ನು ಸಿಡಿಪಿಓ ಎ.ಎಸ್.ಗೋಡಕಿಂಡಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಇಓ ಗುರಿಕಾರ ಪಿಆರ್‌ಇಡಿ ಎಇಇ ಹಾಗೂ ಸೆಕ್ಷೆನ್ ಇಂಜಿನಿಯರುಗಳಿಗೆ ಬೇಗನೆ ಕೆಲಸ ಮುಗಿಸುವಂತೆ ಸೂಚನೆ ನೀಡಿದರು.
ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ತಾಪಂ ಸದಸ್ಯ ಅಶೋಕಯ್ಯ ಮುಳಗುಂದಮಠ, ದೇವಪ್ಪ ಲಮಾಣಿ,ಗಿರಿಜವ್ವ ಲಮಾಣಿ ,ವಿಜಯಲಕ್ಷಿö್ಮ ಶಿವರೆಡ್ಡಿ ಬ್ಯಾಲಹುಣಸಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...