ನೂತನ ತಾಲೂಕು ನ್ಯಾಯಾಲಯ ಉದ್ಘಾಟನೆ

0
35

ಶಿರಹಟ್ಟಿ : ಶುಕ್ರವಾರ ಶಿರಹಟ್ಟಿಯಲ್ಲಿ ತಾಲೂಕು ನೂತನ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೆÃಶಿ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಏಳು ತಾಲೂಕಾ ಕೇಂದ್ರಗಳಲ್ಲೂ ನ್ಯಾಯಾಲಯ ಪ್ರಾರಂಭವಾಗಿವೆ. ಶಿರಹಟ್ಟಿ ತಾಲೂಕಾ ಕೇಂದ್ರದಲ್ಲಿ ಶುಕ್ರವಾರ-ಶನಿವಾರ ಎರಡು ದಿವಸ ಕೋರ್ಟ ಕಲಾಪಗಳು ನಡೆಯಲಿವೆ. ಇದನ್ನು ಈ ಭಾಗದ ಕಕ್ಷಿದಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ.ಪ್ರತಾಪಕುಮಾರ ಎನ್. ಸಹಾಯಕ ಸರ್ಕಾರಿ ಅಭಿಯೋಜಕಿ ಜಿ.ಎಸ್.ಪಾಟೀಲ, ಎಸ್.ಪಿ.ಬಳಿಗಾರ, ಐ.ಸಿ.ನೂರಶೆಟ್ಟರ, ಲಕ್ಷೆö್ಮÃಶ್ವರ ತಾಲೂಕ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಪಾಟೀಲ, ಉಪಾಧ್ಯಕ್ಷ ಎನ್.ಐ.ಬೆಲ್ಲದ, ಶಿರಹಟ್ಟಿ ತಾಲೂಕ ವಕೀಲರ ಸಂಘದ ಅಧ್ಯಕ್ಷ ಎಸ್.ವೈ.ಗೊಬ್ಬರಗುಂಪಿ, ಉಪಾಧ್ಯಕ್ಷ ಅನಿಲಕುಮಾರ ಮಾನೆ, ಪ್ರ.ಕರ‍್ಯದರ್ಶಿ.ಎ.ಎ.ಬೇವಿನಗಿಡದ, ಸುರೇಖಾ ಮಾಲಸೂರೆ, ಎಸ್.ಎಸ್.ಪಾಟೀಲ, ರವಿ ಪೂಜಾರ, ಸುನೀಲ ಮುಧೋಳಕರ, ಎಂ.ಎಸ್.ಪವಾಡಶೆಟ್ಟರ, ಮಂಜುಳಾ ಸ್ವಾಮಿ, ಕುಮಾರಿ ಮೋಬಿನ ಢಾಲಾಯತ ಮುಂತಾದವರು ಉಪಸ್ಥಿರಿದ್ದರು.

loading...