ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

0
52

ಗದಗ: ಗದಗ ಜಿಲ್ಲೆ ಕಳೆದ ೪-೫ ವರ್ಷಗಳಿಂದ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದೆ. ಆದರೆ ರೈತಾಪಿ ವರ್ಗಕ್ಕೆ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಇಲ್ಲಿಯವರೆಗೂ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಘಟಕದ ರೈತರು ಹಲವಾರು ಬೇಡಿಕೆಗಳ್ಳುಳ್ಳ ಮನವಿಯನ್ನು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಈ ಮನವಿಯಲ್ಲಿ ಬೆಳೆ ವಿಮೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಕೇವಲ ಕಾಗದದಲ್ಲಿ ಮಾತ್ರ ವಿತರಣೆಯಾಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪ್ರಚಾರಕ್ಕಷ್ಟೆÃ ಸೀಮಿತವಾಗಿದೆ. ವೈಜ್ಞಾನಿಕ ಬೆಲೆ ನಿಗದಿ, ಬೆಲೆ ನಿಗದಿ ಮತ್ತು ನಿಯಂತ್ರಣ ಆಪತ್‌ಕಾಲಿನ ನಿಧಿ ಸ್ಥಾಪನೆ, ಬೆಳೆ ವಿಮೆಯನ್ನು ಸರಕಾರವೇ ತುಂಬುವ ಯೋಜನೆ ಜಾರಿಗೆ ತರಬೇಕು. ಬರಗಾಲದ ಸಂದಭದಲ್ಲಿ ಆಗುವ ಆಣೇವಾರು ಪದ್ಧತಿಯಲ್ಲಿ ಆಣೆವಾರು ಮಾಡುವಾಗ ಅದರ ವ್ಹಿಡಿಯೋ ಚಿತ್ರಕರಣ ಕಡ್ಡಾಯವಾಗಿ ನಡೆಯಬೇಕು.
ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಸರಕಾರ ಸಮರೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಸಮಗ್ರ ನೀರಾವರಿ ಯೋಜನೆ ಜಾರಿಗೆ ತರಬೇಕು. ಕಬ್ಬಿನ ಬಾಕಿ ಹಣವನ್ನು ತಕ್ಷಣವೇ ರೈತರಿಗೆ ನೀಡಬೇಕು. ಕಬ್ಬಿನ ಬೆಳೆಯ ಬಗ್ಗೆ ಸಕ್ಕರೆ ಕಾರ್ಖಾನೆಗಳು ರೈತರೊಂದಿಗೆ ಸಬ್‌ರಜಿಷ್ಟರ್ ಕಛೇರಿಯಲ್ಲಿ ನೋಂದಣಿ ಕರಾರು ಪತ್ರ ಕಡ್ಡಾಯಗೊಳಿಸಬೇಕು. ೬೦ ವರ್ಷ ಮೀರಿದ ರೈತರಿಗೆ ಪ್ರತಿ ತಿಂಗಳು ೬೦೦೦/- ರೂ ಪಿಂಚಣಿ ಹಣ ಒದಗಿಸಬೇಕು. ನೈಸರ್ಗಿಕ ವಿಪತ್ತು ಆಸ್ತಿ ಹಾನಿಯ ೫ ಪಟ್ಟು ಪರಿಹಾರ ನೀಡಬೇಕು. ಚಳುವಳಿ ಸಂದರ್ಭದಲ್ಲಿ ರೈತರ ಮತ್ತು ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಬೇಕು.
ಜಿಂದಾಲ್ ಕಂಪನಿಗೆ ಕೊಡುತ್ತಿರುವ ಭೂಮಿಯ ವಿಷಯವನ್ನು ನಿಲ್ಲಿಸಿ, ಅಧಿಕೃತವಾಗಿ ರಾಜ್ಯಪತ್ರ ಹೊರಡಿಸಬೇಕು. ಸಾಲಮನ್ನಾ ಯೋಜನೆಯಲ್ಲಿ ಯಾರು ಯಾರಿಗೆ ಸಾಲ ಮನ್ನಾ ಆದ ಬಗ್ಗೆ ಅಧಿಕೃತ ಶ್ವೆÃತಪತ್ರ ಹೊರಡಿಸಬೇಕೆಂದು ರೈತರು ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಗೌ ಅದ್ಯಕ್ಷರಾದ ಚಾಮರಸ ಮಾಲೀಪಾಟೀಲ, ರಾಜ್ಯ ಕಾರ್ಯಾಧ್ಯಕ್ಷರಾದ ಕೆ. ಜಿ. ಶಾಂತಸ್ವಾಮಿಮಠ, ನೂಲೆನೂರು ಎಂ. ಶಂಕರಪ್ಪ, ಚೆ. ಎಂ. ವೀರಸಂಗಯ್ಯ, ರವಿಕಿರಣ ಪೂರ್ಣಚ್ಛ, ಆರ್. ಎಸ. ಮಠ, ಟಿ. ಟಿ. ರಾಮಸ್ವಾಮಿ, ಎಂ. ರಾಮು, ರವಿಕುಮಾರ ಬಲ್ಲೂರ, ಪಿ. ಗೋಪಾಲ ಎಂ. ಬಿ. ಸಂಕನಗೌಡ್ರ ಹಾಗೂ ಜಿಲ್ಲೆಯ ರೈತರು ಹಾಜರಿದ್ದರು.

loading...