ರೈತರಿಗೆ ಗುಣಮಟ್ಟದ ಬೀಜ ರಸಗೊಬ್ಬರ ವಿತರಿಸಲು ಸೂಚನೆ

0
37

ಗದಗ: ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲಾ ಕೊಠಡಿ, ಅಂಗನವಾಡಿ ಸೇರಿದಂತೆ ಯಾವುದೇ ಸರಕಾರಿ ಕಟ್ಟಡಗಳಿದ್ದಲ್ಲಿ ಅವುಗಳನ್ನು ತಕ್ಷಣ ತೆರವುಗೊಳಿಸಲು ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ. ಬಳಿಗಾರ ನಿರ್ದೇಶನ ನೀಡಿದ್ದಾರೆ.
ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ತಿಂಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕೊಠಡಿ, ಅಂಗನವಾಡಿ ಹೊಸ ಕಟ್ಟಡಗಳ ನಿರ್ಮಾಣ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧ್ಯಕ್ಷರು ತಿಳಿಸಿದರು. ರೇಷ್ಮೆ ಹುಳು ಸಾಕಾಣಿಕೆ ಕಟ್ಟಡಗಳು ಖಾಲಿ ಇದ್ದಲ್ಲಿ ಅವುಗಳ ಕುರಿತು ಇಲಾಖೆ ಪಟ್ಟಿ ಮಾಡಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಈ ಖಾಲಿ ಕಟ್ಟಡಗಳನ್ನು ಅಗತ್ಯವಿರುವ ಇಲಾಖೆಗಳಿಗೆ ನೀಡಲು ಕ್ರಮ ಕೈಕೊಳ್ಳಲು ಜಿ.ಪಂ. ಅಧ್ಯಕ್ಷರು ಸೂಚಿಸಿದರು.
ಡಿಬಿಓಟಿ ಯೋಜನೆಯಿಂದ ಈಗ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಇದ್ದು ಬಹುತೇಕ ಗ್ರಾಮಗಳಲ್ಲಿ ನೀರು ಅನಗತ್ಯವಾಗಿ ಪೋಲಾಗುತ್ತಿದೆ ಎಂಬ ವಿಷಯ ಸಭೆಯಲ್ಲ್ಲಿ ಚರ್ಚೆಗೆ ಬಂದಿತು. ಈ ಮೊದಲು ನೀರು ಬಿಡಿ ಎಂದು ಹೇಳುವ ಪರಿಸ್ಥಿತಿ ಇದ್ದರೆ ಈಗ ನೀರು ಬಂದ ಮಾಡಿ ಎನ್ನುವ ಪರಿಸ್ಥಿತಿ ಉದ್ಭವವಾಗಿದೆ ಎಂದ ಅಧ್ಯಕ್ಷರು ಗ್ರಾಮ ಪಂಚಾಯತಿಗಳು ನೀರಿನ ಮಿತವ್ಯಯ ಬಳಕೆಗೆ ಜನಪ್ರತಿನಿಧಿಗಳ ಸಹಕಾರದೊಂದಿಗೆ ಜನಜಾಗೃತಿ ಮತ್ತು ಅಗತ್ಯದ ಕ್ರಮ ಜೊತೆಗೆ ಜಲ ಸಂಗ್ರಹಾಗಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮ ಜರುಗಿಸಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್.ಎಸ್.ಎಲ್.ಸಿಯಲ್ಲಿ ಕಡಿಮೆ ಫಲಿತಾಂಶ ಬಂದ ಶಾಲೆಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಬೇಕು ಕಳೆದ ಎರಡು ವರ್ಷಗಳಿಂದ ಎಷ್ಟು ಪ್ರಯತ್ನ ಮಾಡಿದರು ಫಲಿತಾಂಶ ಸುಧಾರಣೆ ಆಗಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಲ್ಲಿ ಶಿಸ್ತನ್ನು ಮೂಡಿಸಲು ಇಲಾಖೆ ತೀವ್ರ ಕ್ರಮ ಕೈಕೊಳ್ಳಬೇಕು ಇದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತದೆ. ತೋಟಗಾರಿಕೆ ಇಲಾಖೆಯು ಪ್ರತಿ ವಿಧಾನಸಭಾ ಕ್ಷೆÃತ್ರದಲ್ಲಿ ಕನಿಷ್ಠ ೧೦೦ ರೈತರು ತೋಟಗಾರಿಕೆ ಮಾಡುವಂತೆ ಅಗತ್ಯದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಧ್ಯಕ್ಷ ಎಸ್.ಪಿ.ಬಳಿಗಾರ ತಿಳಿಸಿದರು.
ಜಿಲ್ಲೆಯ ೨೮ ಮೇವು ಬ್ಯಾಂಕುಗಳಲ್ಲಿ ರೈತರ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವು ಮಾರಾಟಕ್ಕೆ ಗಮನ ನೀಡಬೇಕು. ಜಿಲ್ಲೆಯಲ್ಲಿ ನಕಲಿ ವೈದ್ಯರ ಕುರಿತು ಆಯುಷ ಇಲಾಖೆ ಜನ ಮೋಸ ಹೋಗದೆ ಇರುವಂತೆ ಇಲಾಖೆ ಕ್ರಮ ಜರುಗಿಸಲು ಜಿ.ಪಂ. ಉಪಾಧ್ಯಕ್ಷೆ ಶ್ರಿÃಮತಿ ಶಕುಂತಲಾ ಮೂಲಿಮನಿ ತಿಳಿಸಿದರು.
ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಇಲಾಖೆಗಳು ೨೦೧೯-೨೦ರ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಲು ಈಗಾಗಲೇ ಸೂಚಿಸಲಾಗಿದ್ದರು ಇನ್ನು ಕೆಲವು ಇಲಾಖೆಗಳು ಕ್ರಮ ಜರುಗಿಸದಿದ್ದಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧೀ ರಾಷ್ಟಿçÃಯ ಉದ್ಯೊÃಗ ಯೋಜನಯಡಿ ಇಲಾಖೆಗಳು ಸಮುದಾಯಿಕ ಆಸ್ತಿ, ರೈತರ ಹೊಲಗಳ ಅಭಿವೃದ್ಧಿ, ಜಲಸಂವರ್ಧನೆ, ತೋಟಗಾರಿಕೆ ಮುಂತಾದವುಗಳನ್ನು ಸಮನ್ವಯಗೊಳಿಸಿ ಸಾರ್ವಜನಿಕ ಉಪಯುಕ್ತ ಸರ್ಕಾರದ ಸೌಲಭ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲು ಕ್ರಮ ಜರುಗಿಸಬೆಕು. ಡಿ.ಬಿ.ಓಟಿ ಯೋಜನೆಯಡಿ ಹಾಗೂ ಇತರೆ ಕುಡಿಯುವ ನೀರಿನ ಯೋಜನೆಗಳಡಿ ಇರುವ ನಿಗದಿತ ಅವಧಿಗೆ ಸ್ವಚ್ಛಗೊಳಿಸಲು ಹಾಗೂ ನೀರಿನ ಸದ್ಬಳಕೆಗೆ ಕ್ರಮ ಜರುಗಿಸಬೇಕು. ಈ ಕುರಿತು ಜನಪ್ರತಿನಿಧಿಗಳು, ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಸಾರ್ವಜನಿಕ ಆರೋಗ್ಯ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಗ್ರಾಮ ಪಂಚಾಯತಿ ಪಿ.ಡಿ.ಓ ಹಾಗೂ ವಿವಿಧ ಇಲಾಖೆ ಜೊತೆ ಸಭೆ ಜರುಗಿಸಿ ಸಮನ್ವಯತೆಯಿಂದ ಜನಜಾಗೃತಿ, ಶುಚಿತ್ವದ ಕಾರ್ಯ ಕೈಗೊಳ್ಳಬೇಕು. ಜೂನ್ ೨೧ರಂದು ಜಿಲೆಯ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಯೋಗದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯದ ಕ್ರಮ ಜರುಗಿಸಲು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕಿಸಾನ ಸಮ್ಮಾನ ನಿಧಿಯಡಿ ವಾರ್ಷಿಕ ೬ ಸಾವಿರ ರೂ. ಪಡೆಯಲು ಈ ಹಿಂದಿನ ನಿರ್ದೇಶನದಂತೆ ೯೫ ಸಾವಿರ ಅರ್ಹ ರೈತರ ಪೈಕಿ ೩೯,೫೦೦ ರೈತರು ನೋಂದಣಿ ಮಾಡಿಸಿದ್ದು ಅದರಲ್ಲಿ ೯ ಸಾವಿರ ರೈತರು ಸೌಲಭ್ಯ ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರದ ಪುನರವಿಮರ್ಷಿತ ಸೂಚನೆಯಂತೆ ಜಿಲ್ಲೆಯ ಎಲ್ಲ ೧.೬೭ ಲಕ್ಷ ರೈತರು (ಜನಪ್ರತಿನಿಧಿ, ಆದಾಯ ಕರ ಸಂದಾಯಿತರನ್ನು ಹೊರತುಪಡಿಸಿ) ಈ ಯೋಜನೆ ವ್ಯಾಪ್ತಿಗೆ ಬರುತ್ತಿದ್ದು ನಿಗದಿತ ಕೇಂದ್ರ ಸರ್ಕಾರ ಪೋರ್ಟಲನಲ್ಲಿ ರೈತರು ನೋಂದಣಿ ಮಾಡಿಸಬೇಕು. ಜಿಲ್ಲೆಯಲ್ಲಿ ೨೦೧೮-೧೯ನೇ ಸಾಲಿನ ಕೃಷಿ ಹೊಂಡ ಯೋಜನೆಯಡಿ ಒಟ್ಟು ೧.೯೦ಕೋಟಿ ರೂ. ವೆಚ್ಚವಾಗಿದ್ದು ಆ ಪೈಕಿ ೨.೧೨.ಕೋಟಿ ರೂ ಬಿಡುಗಡೆ ಆಗಿದ್ದು ಇನ್ನು ೧೫ ಕೋಟಿ ರೂ. ಬಿಡುಗಡೆ ಆಗಬೇಕಿದೆ. ಈ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ.
ಜಿಲ್ಲೆಯ ಶಿರಹಟ್ಟಿ ಭಾಗದಲ್ಲಿ ಕೆಲವಡೆ ಉತ್ತಮ ಮಳೆಯಾಗಿದ್ದು ಹೆಸರಿನ ಬಿತ್ತನ ಆರಂಭಗೊಂಡಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನ ಬೀಜ, ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಅಗತ್ಯದ ಕ್ರಮ ಕೈಕೊಂಡಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಾಲರೆಡ್ಡಿ ಸಭೆಗೆ ಮಾಹಿತಿ ನೀಡಿದರು.
ಜಲಸಂವರ್ಧನೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕೆಎಂಎಫ್, ತೋಟಗಾರಿಕೆ, ಆರೋಗ್ಯ, ಆಯುಷ್, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಜರುಗಿತು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ವಿವಿಧ ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದರು. ಜಿ.ಪಂ. ಉಪಕಾರ್ಯದರ್ಶಿ ಪ್ರಾಣೇಶರಾವ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

loading...