ವಿದ್ಯಾದಾನಕ್ಕೆ ನೆರವು ನೀಡಿ: ಶಾಸಕ ಶಿವರಾಮ

0
15

 

ಯಲ್ಲಾಪುರ: ದಾನಗಳಲ್ಲಿ ಅತಿ ಶ್ರೆÃಷ್ಟವಾದ ವಿದ್ಯಾದಾನಕ್ಕೆ ನೆರವು ನೀಡಲು ಮುಂದಾಗಿರುವ ಎಸ್.ಕೆ.ಹೆಗಡೆ ಬಡ ವಿದ್ಯಾರ್ಥಿಗಳಿಗೆ ಉಚಿತ ಪಟ್ಟಿ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಯಲ್ಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುಗಜಾನನ ಹಾರ್ಡವೇರ್ ಮಾಲಿಕ ಎಸ್.ಕೆ.ಹೆಗಡೆ ನೀಡಿದ ಉಚಿತ ಪಟ್ಟಿಗಳನ್ನು ಬಡ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ತಹಶೀಲ್ದಾರ್ ಡಿ.ಜಿ.ಹೆಗಡೆ, ವಿಜಯ ಮಿರಾಶಿ, ಮುಖ್ಯ ಶಿಕ್ಷಕ ದೇವಿದಾಸ ಪಟಗಾರ, ಲತಾ ಹೆಗಡೆ ಮತ್ತಿತರರಿದ್ದರು. ಶಿಕ್ಷಕರಾದ ನಾರಾಯಣ ನಾಯಕ ಹಾಗೂ ರಫೀಕ ಮುಜಾವರ ನಿರೂಪಿಸಿದರು. ಶಿಕ್ಷಕಿ ನಾಗರತ್ನಾ ನಾಯಕ ವಂದಿಸಿದರು.

loading...