ಕಂದಾಯ ನಿರೀಕ್ಷಕ ಪಾಟಿಲ್‌ರ ಅಮಾನತ್ತಿಗೆ ಕಾಳಿ ಬ್ರಿಗೇಡ್ ಆಗ್ರಹ

0
23

 

ಜೋಯಿಡಾ: ಬೃಷ್ಟಾಚಾರ ಪ್ರಕರಣದಲ್ಲಿ ಎ.ಸಿ.ಬಿ. ಬಲೆಗೆ ಬಿದ್ದ ತಾಲೂಕಿನ ಕ್ಯಾಸ್ಟಲ್‌ರಾಕ್ ಕಂದಾಯ ನಿರೀಕ್ಷಕ ಎ.ವಿ.ಪಾಟಿಲ್‌ರನ್ನು ಅಮಾನತ್ತನಲ್ಲಿಡುವಂತೆ ಆಗ್ರಹಹಿಸಿ ಜೋಯಿಡಾ ಕಾಳಿ ಬ್ರಿಗೆಡ್ ಕಾರ್ಯಕರ್ತರು ಜೋಯಿಡಾ ತಹಶೀಲ್ದಾರ ಮುಖೇನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅಮಾನತ್ತ ಮಾಡದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಎಚ್ಚರಿಕೆ ನೀಡಿರುತ್ತಾರೆ.
ಕ್ಯಾಸ್ಟ್ಲರಾಕ್ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿ ರಾಮನಗರದಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸಮಾಡುತ್ತಿದ್ದ ಎ.ವಿ.ಪಾಟಿಲ್ ರಾಮನಗರದ ಓರ್ವ ಬಡ ಮಹಿಳೆಯ ಭೂಮಿ ವಾಟಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಪಡೆಯುವಾಗ ದಿ: ೨೯ ಮೇ. ರಂದು ರಾಮನಗರ ಕಚೇರಿಯಲ್ಲಿ ಎ.ಸಿ.ಬಿ. ಬಲೆಗೆ ಬಿದ್ದಿದ್ದರು. ಕಾಳಿ ಬ್ರಿಗೆಡ್ ಈ ಪ್ರಕರಣದಲ್ಲಿ ನೊಂದ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ಅಂದು ಯಶಸ್ವಿಕಂಡಿತ್ತು. ಇದು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಇಲಾಖೆ ಈತನ ಮೇಲೆ ಕ್ರಮಕೈಗೊಳ್ಳುವ ಬರವಸೆ ಸಾರ್ವಜನಿಕರಲ್ಲಿತ್ತು.

ಆದರೆ ಪ್ರಕರಣ ನಡೆದು ೧೫ ದಿನಗಳೆ ಕಳೆದರೂ ಪಾಟಿಲರನ್ನು ಈ ಬೃಷ್ಟಾಚಾರ ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳದೇ ಇರುವುದನ್ನು ಕಾಳಿ ಬ್ರಿÃಗೆಡ್ ಖಂಡಿಸಿ, ಇಂದು ಗುರುವಾರ ಜೋಯಿಡಾ ತಹಶೀಲ್ದಾರ ಮುಖೇನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸದರಿ ಬೃಷ್ಟ ಅಧಿಕಾರಿ ಪಾಟಿಲ್‌ರನ್ನು ಕೂಡಲೇ ಅಮಾನತ್ತಿನಲ್ಲಿಡಬೇಕೆಂದು ಆಗ್ರಹಿಸಿದೆ. ಈತನನ್ನು ಆದಷ್ಟು ಶಿಘ್ರ ಅಮಾನತ್ತಿನಲ್ಲಿಡದಿದ್ದರೆ ಬರುವ ದಿ:೨೫ ಜೂನ್ ರಂದು ಬೆಳಿಗ್ಗೆ ೧೦ ಗಂಎಯಿಂದ ಕಾಳಿ ಬ್ರಿಗೆಡ್ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಹಶೀಲ್ದಾರ ಕಛೇರಿ ಜೋಯಡಾ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹದಂತ ಉಗ್ರಹೋರಾಟ ನಡೆಸುವುದಾಗಿ ಕಾಳಿ ಬ್ರಿಗೆಡ್ ಮುಖ್ಯ ಸಂಚಾಲಕ ರವಿ ರೆಡ್ಕರ್ ಮನವಿಯಲ್ಲಿ ತಿಳಿಸಿರುತ್ತಾರೆ.

loading...