ಸ್ವಚ್ಚ ಮೇವ ಜಯತೆ ಕಾರ್ಯಕ್ರಮದ ಉದ್ಘಾಟನೆ

0
26

 

ಜೋಯಿಡಾ: ಸ್ವಚ್ಚ ಮೇವ ಜಯತೆ ಕಾರ್ಯಕ್ರಮ ಕೇವಲ ಕಾಟಾಚಾರಕ್ಕಾಗಿ ನಡೆಯಬಾರದು. ಇದು ತಾಲೂಕಿನಲ್ಲಿ ಒಂದು ಆಂದೋಲನವಾಗಿ ನಡೆಯಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ಶ್ಯಾಮ ಪೋಕಳೆ ಹೇಳಿದರು.
ತಾಲೂಕಾ ಪಂಚಾಯತ್ ಹಾಗೂ ಜೋಯಿಡಾ ಗ್ರಾ.ಪಂ. ಸಹಯೋಗದಲ್ಲಿ “ವಿಶ್ವ ಪರಿಸರ ದಿನ” ಹಾಗೂ “ಸ್ವಚ್ಚ ಮೇವ ಜಯತೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ತಾಲೂಕಾ ಕೇಂದ್ರದಲ್ಲಿನ ಪ್ರಮುಖ ಕಛೇರಿಗಳಾದ ತಾ.ಪಂಚಾಯತ್, ತಹಶೀಲ್ದಾರ ಕಾರ್ಯಾಲಯ, ಜಿ.ಪಂ. ಇಂಜೀನಿಯರಿಂಗ ಉಪವಿಭಾಗ, ಕೃಷಿ ಇಲಾಖೆ ಆವರಣ ಸೇರಿದಂತೆ ವಿವಿಧ ಇಲಾಖೆಯ ಅಕ್ಕಪಕ್ಕದ ಆವರಣದಲ್ಲಿ ಈಗಾಗಲೇ ತುಂಬಿ ತುಳುಕುತ್ತಿರುವ ಕಸವನ್ನು ಆಯಾ ಅಧಿಕಾರಿಗಳು ಜವಾಬ್ದಾರಿಯಿಂದ ಮೋದಲು ಸ್ವಚ್ಚಗೊಳಿಸುವ ಕಾರ್ಯಮಾಡಬೇಕಿದೆ. ಸ್ವಚ್ಚತಾ ಕಾರ್ಯಕ್ರಮ ಕೇವಲ ಸ್ವಚ್ಚತಾ ಅಭಿಯಾನಕ್ಕೆ ಸೀಮಿತವಾಗಿರದೆ ತಾಲೂಕಿನ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಇದರಲ್ಲಿ ಸಕ್ರಿÃಯರಾಗಿ ಪಾಲ್ಗೊಂಡು ಯಶಸ್ಸು ಶ್ರಮಿಸಬೇಕು ಎನ್ನುವ ಮೂಲಕ ಕಾಟಾಚಾರದ “ಸ್ವಚ್ಚ ಮೇವ ಜಯತೆ ಕಾರ್ಯಕ್ರಮಕ್ಕೆ” ಪ್ರಾರಂಭದಲ್ಲೆÃ ಛಾಟಿಬೀಸುವ ಮೂಲಕ ಬೇಜವಾಬ್ದಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮ ಆರಂಬಕ್ಕೆ ಮೋದಲು ಜಿ.ಪಂ. ಸದಸ್ಯ ರಮೇಶ ನಾಯ್ಕ ರಸ್ತೆಯ ಬದಿಗಳಲ್ಲಿ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ “ ವಿಶ್ವ ಪರಿಸರ ದಿನಾಚರಣೆ”ಗೆ ಚಾಲನೆ ನೀಡಿದರು. ನಂತರ ಕುಣಬಿ ಭವನದಲ್ಲಿ ನಡೆದ “ಸ್ವಚ್ಚ ಮೇವ ಜಯತೆ” ಮಾಸಿಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳಾದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಕ್ಷೆÃತ್ರ ಶಿಕ್ಷಣಾಧಿಕಾರಿ ಹಿರೇಮಠ, ವಲಯ ಅರಣ್ಯಾಧಿಕಾರಿ ಮಹೀಮ ಜನ್ನು, ಶಿಶುಅಭಿವೃದ್ದಿ ಅಧಿಕಾರಿ ಶ್ರಿÃಸೈಲ ಖುರಾನಿ ಹೊರತು ಪಡಿಸಿ ಇನ್ನಾವ ತಾಲೂಕಾ ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿ ಪಾಲ್ಗೊಳ್ಳದೇ ಇರುವುದು ಕಂಡುಬಂದಿತ್ತು.

ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಸಾರ್ವಜನಿಕರ ಸಹಭಾಗಿತ್ವ ತೀರಾ ಕಡಿಮೆ ಇರುವುದು ಕಂಡುಬಂದಿತ್ತು. ಕೆಲ ಪ್ರಮುಖ ಮಾಧ್ಯಮದವರಿಗೂ ಮಾಹಿತಿ ನೀಡದೆ, ಆರಂಭದಲ್ಲೆÃ ಇದು ಸರಕಾರಿ ಆದೇಶದ ಪಾಲನೆಗೆ ಹಾಗೂ ಬರುವ ಅನುದಾನ ಅರ್ಚುವೆಚ್ಚಕ್ಕಾಗಿ ನಡೆಸುತ್ತಿರುವ ಕಾರ್ಯಕ್ರಮವೆಂಬತೆ ಕಂಡುಬಂದಿತ್ತು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶೈಲಾ ನಾಯ್ಕ, ಗ್ರಾ.ಪಂ.ಸದಸ್ಯರಾದ ಸುರೇಶ ಗಾವಡಾ, ನೀಲಾ ನಾಯ್ಕ, ಸಂತು ಮಂಥೆರೊ, ಜೋಯಿಡಾ ಪಿ.ಡಿ.ಓ. ಮತ್ತು ತಾ.ಪಂ. ಲೆಕ್ಕಾಧಿಕಾರಿ ಜಿ.ವಿ.ಭಟ್ಟ, ಉಪ ವಲಯಅರಣ್ಯಾಧಿಕಾರಿ ಸಂತೋಷ ಗಾವಸ್ ಪಾಲ್ಗೊಂಡಿದ್ದರು.

loading...