ಅನಧಿಕೃತ ಕ್ರೆÃಶರ್ ಮಶಿನ್, ಜಲ್ಲಿಕಲ್ಲು ವಶಕ್ಕೆ

0
21

 

ಜೋಯಿಡಾ: ತಾಲೂಕಿನ ರಾಮನಗರದ ನಿರಾಶ್ರಿತರ ಭೂ ಪ್ರದೇಶದಲ್ಲಿ ಅನಧಿಕೃತವಾಗಿ ಕ್ರೆÃಶರ್ ಅಳವಡಿಸಿ ಗಣಿಗಾರಿಕೆ ನಡೆಸುತ್ತಿದ್ದ ದಿಲಿಪ್ ಬಿಲ್ಡಕಾನ್ ಕಂಪನಿಯ ಕಾರ್ಯಸ್ಥಳದಲ್ಲಿ ಪರಿಶೀಲನೆ ನಡೆಸಿದ ಜಗಲಬೇಟ್ ವಲಯ ಅರಣ್ಯಾಧಿಕಾರಿ ಕಳ್ಳಿಮಠ, ಅನಧಿಕೃತ ಕ್ರೆÃಶರ್ ಮಶಿನ್ ಹಾಗೂ ನೂರಾರು ಟನ್ ಜಲ್ಲಿಕಲ್ಲುಗಳನ್ನು ಜಪ್ತಿಮಾಡಿ ವಶಕ್ಕೆ ಪಡೆದಿದ್ದಾರೆ.
ರಾಮನಗರ- ಗೋವಾ ರಾಷ್ಟಿçÃಯ ಹೆದ್ದಾರಿ ೪ ಎ. ಉನ್ನತೀಕರಣ ಕಾಮಗಾರಿಯನ್ನು ನಡೆಸುತ್ತಿದ್ದ ದಿಲೀಪ್ ಬಿಲ್ಡಕಾನ್ ಕಂಪನಿ, ರಾಮನಗರದಲ್ಲಿ ಪರವಾನಿಗೆ ಇಲ್ಲದ ಕಲ್ಲು ಒಡೆಯುವ ಕ್ರೆÃಶರ್ ಮಶೀನನ್ನು ಅಳವಡಿಸಿ ಜಲ್ಲಿಕಲ್ಲುಗಳನ್ನು ತಯಾರಿಸುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ವಲಯ ಅಣ್ಯಾಧಿಕಾರಿಗಳ ತಂಡ ಗುರುವಾರ ಸ್ಥಳಪರಿಶೀಲಿಸಿದಾಗ ಇದು ಪರವಾನಿಗೆ ರಹಿತವಾಗಿದ್ದು ಎನ್ನುವುದು ತಿಳಿದು ಬಂದಿದೆ. ನಂತರ ಈ ಮಸೀನ್‌ಗಳನ್ನು ಸೀಜ್ ಮಾಡಿದ ಅರಣ್ಯಾಧಿಕಾರಿಗಳ ತಂಡ, ಅಲ್ಲಿ ಪರವಾನಿಗೆ ರಹಿತವಾಗಿ ಸಂಗ್ರಹಿಸಿಟ್ಟ ಜಲ್ಲುಕನ್ನುಗಳ (ನೂರಾರು ಕೈಬಿಕ್ ಮೀ.) ಎರಡು ರಾಶಿಗಳನ್ನು ವಶಕ್ಕೆ ಪಡೆದಿರುತ್ತಾರೆ.

ಅಕ್ರಮ ಕಲ್ಲುಕ್ವಾರಿ, ಶಕ್ತಿಶಾಲಿ ಸೋಟಕಕ್ಕೆ ಕಡಿವಾಣ ಇಲ್ಲ: ರಾಮನಗರದಲ್ಲಿ ಅಕ್ರಮಕಲ್ಲು ಕ್ವಾರಿ ನಡೆಯುತ್ತಿದ್ದ ಬಗ್ಗೆ ಪತ್ರಿಕೆಗಳು ಅನೇಕ ಸಾರಿ ಸುದಿಮಾಡಿದ್ದವು. ಆದರೆ ಈ ಬಗ್ಗೆ ಸಂಬಂದಿಸಿದ ಯಾವುದೇ ಇಲಾಖೆ ಪರಿಶೀಲಿಸಿ ಕ್ರಮಕೈಗೊಳ್ಳದೆ, ಅಕ್ರಮ ಕ್ವಾರಿ ಮಾಲಿಕರ ಜೊತೆ ಕೈಜೋಡಿಸಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಈ ಅಕ್ರಮ ಕ್ವಾರಿ ನಡೆಯುವ ಸ್ಥಳದಲ್ಲಿ ಈಗಲೂ ಪ್ರಮಾಣಕ್ಕಿಂತಲ್ಲೂ ಅತ್ಯಧೀಕ ಶಕ್ತಿಶಾಲಿ ಸ್ಫೊÃಟಕಗಳನ್ನು ಬಳಸಲಾಗುತ್ತಿದ್ದ ಬಗ್ಗೆ ಸಾರ್ವಜನಿಕರು ಅನೇಕ ಸಾರಿ ದೂರಿದ್ದಾರೆ. ಬೃಹತ್ ಸ್ಫೊÃಟದಿಂದಾಗಿ ತಮ್ಮ ಮನೆಗಳು ದಿನನಿತ್ಯ ಸೋಟದ ತಿವೃತೆಗೆ ನಲುಗುತ್ತಿದ್ದು, ಬಿರುಕಿಬಿಟ್ಟಿದ್ದ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದು, ಕ್ರಮಕೈಗೊಳ್ಳುವಂತೆ ಸ್ಥಳಿಯರು ಒತ್ತಾಯಿಸಿದ್ದರು.
ಈ ಬಗ್ಗೆ ಪತ್ರಿಕೆಗಳು ಕೂಡಾ ಸುದ್ದಿ ಮಾಡಿದ್ದವು. ಆದರೆ ಜಿಲ್ಲಾಡಳಿತದಿಂದಲ್ಲೂ ಅಕ್ರಮ ಕಲ್ಲು ಕ್ವಾರಿಗಳ ಲೈಸನ್ ಪರಿಶೀಲಿಸಿ ಕ್ರಮಕೈಗೊಳ್ಳುವ ಕಾರ್ಯ ಆಗಲಿಲ್ಲ. ಇದ್ದ ಪರಿಣಾಮ ಸ್ಥಳಿಯ ಬಡ ಗೌಳಿಗರು, ಮೂಲನಿವಾಶಿಗರು ಬಿರುಕು ಬಿಟ್ಟ ಮನೆಯಲ್ಲಿ ನಿತ್ಯ ಸ್ಪೊÃಟಕದ ಸದ್ದು ಕೇಳುತ್ತಾ ಭಯದಲ್ಲಿ ಬದುಕುತ್ತಿದ್ದಾರೆ. ಜಿಲ್ಲಾಡಳಿತದ ಮೌನ್ ಜನಸಾಮಾನ್ಯರಿಗೆ ಇನ್ನೂ ನ್ಯಾಯದೊರೆಯದಂತಾಗಿದೆ.

loading...