ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ತರಬೇತಿ

0
26

 

ಮುಂಡಗೋಡ: ನೆಹರು ಯುವ ಕೇಂದ್ರ ಕಾರವಾರ ಹಾಗೂ ಗುರುಕಲಾವಿದರ ಬಳಗ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಲೊಯೋಲ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಯೋಗಾಭ್ಯಾಸ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಯೋಗ ಗುರುಗಳಾದ ಮಹೇಶ ಹಾವಣಗಿ ಮಕ್ಕಳಲ್ಲಿ ನೆನೆಪಿನ ಶಕ್ತಿಯನ್ನು ಹೆಚ್ಚಿಸುವ ಹಾಗೂ ದೈಹಿಕ ನ್ಯೂನ್ಯತೆಗಳನ್ನು ನಿವಾರಿಸಬಲ್ಲ ಖಾಯಿಲೆಗಳಿಗೆ ಯೋಗದ ಮೂಲಕ ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು ಎಂದು ಹೇಳುವ ಮೂಲಕ ಸುಮಾರು ೧ ಘಂಟೆಗಳ ಕಾಲ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು.

ಜಿಲ್ಲಾ ಯುವ ಸಮನ್ವಯಾಧಿಕಾರಿಗಳ ಕಛೇರಿಯ ಕಾರ್ಯಕ್ರಮ ಸಂಯೋಜಕ ವಿಪಿನ್ ಕುಮಾರ ಮಕ್ಕಳನ್ನು ಉದ್ದೆÃಶಿಸಿ ಮಾತನಾಡಿ, ಭಾರತ ಸರ್ಕಾರದ ಹಲವಾರು ಯೋಜನೆಗಳು ಯುವಕ-ಯುವತಿಯರಿಗಾಗಿ ಇರುವುದು. ಬಡ-ದೀನ-ದಲಿತರು ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಉತ್ತಮವಾದ ಬದುಕನ್ನು ಸಾಗಿಸಬಹುದು ಎಂಬ ಮಾತನ್ನು ಹೇಳಿದರು.
ಪ್ರಸ್ತುತ ಭಾರತವು ಸ್ವಚ್ಛತೆಯ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಬ್ಬರು ಸ್ವಚ್ಛ ಮತ್ತು ಶುಚಿತ್ವದ ಕಲ್ಪನೆಯ ಕನಸುಗಳನ್ನು ಕಟ್ಟಿಕೊಳ್ಳಬೇಕು ಎಂಬ ಮಾತನ್ನು ನ್ಯಾಯವಾದಿ ನಾಗರಾಜ ಬಾರ್ಕಿ ಹೇಳಿದರು

ಲೊಯೋಲ ಪ್ರಾಥಮಿಕ ವಿಭಾಗದ ಮುಖ್ಯೊÃಪಾಧ್ಯಾಪಕಿ ಸಿಸ್ಟರ್ ಮರ್ಲಿನ್ ಹಾಗೂ ಪತ್ರಕರ್ತ ಸಂತೋಷ ದೈವಜ್ಞ ಉದ್ಘಾಟನೆ ನೆರವೇರಿಸಿದರು. ಫಾ. ಬಾರ್ಥಲೋಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೃತ್ಯುಂಜಯ ರಾಚಯ್ಯನವರ, ಹಜರೇಸಾಬ ಉಪನ್ಯಾಸ ನೀಡಿದರು
ಲೊಯೋಲಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಜೀವ ನಾಯ್ಕ, ಪ್ರಭಾರಿ ಮುಖ್ಯೊÃಪಾಧ್ಯಾಯ ವಿ.ವಿ. ಮಲ್ಲನಗೌಡರ, ಗುರು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿನಾಯಕ ಶೇಟ, ಸೆವ್ರಿನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅರುಣಕುಮಾರ ಬುದ್ದಿನ್ನಿ ನಿರೂಪಿಸಿದರು. ಲಾದ್ರು ಆಲ್ಮೆÃಡಾ ಸ್ವಾಗತಿಸಿದರು. ಮಂಜುನಾಥ ಅಂಬಿಗ ವಂದಿಸಿದರು.

loading...