ವಿದ್ಯುತ್ ಶಾರ್ಟ್ ಸಕ್ರೂö್ರ್ಯಟ್‌ನಿಂದ ಉಪಕರಣಗಳು ಸುಟ್ಟು ಬಾರಿ ಹಾನಿ

0
67

 

ಮುಂಡಗೋಡ: ವಿದ್ಯುತ್ ಶಾರ್ಟ್ ಸಕ್ರೂö್ರ್ಯಟ್‌ನಿಂದಾಗಿ ಪಟ್ಟಣದ ಮಿನಿ ವಿಧಾನಸೌದ ತಹಸೀಲ್ದಾರ ಕಛೇರಿಯ ವಿದ್ಯುತ್ ಉಪಕರಣಗಳು ಸುಟ್ಟು ಬಾರಿ ಹಾನಿ ಸಂಬವಿಸಿದ ಘಟನೆ ಬುಧವಾರ ನಡೆದಿದೆ.
ಕಛೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾಗ ಏಕಾ ಏಕಿ ಅತಿಯಾದ ವಿದ್ಯುತ್ ಪ್ರವಹಿಸಿದ ಪರಿಣಾಮ ದೊಡ್ಡ ಪ್ರಮಾಣದ ಶಬ್ದ ಕೇಳಿಸಿದ್ದು, ನೋಡ ನೋಡುತ್ತಲೇ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಗಣಕ ಯಂತ್ರಗಳು, ಪ್ಯಾನ, ಟ್ಯೂಬ್ ಲೈಟ್‌ಗಳು ಸುಟ್ಟಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ. ಸಿಬ್ಬಂದಿಗಳು ಹಾಗೂ ಸಾರ್ವಜನಿಕರಲ್ಲಿ ಕೆಲ ಕಾಲ ಬಯದ ವಾತಾವರಣ ಸೃಷ್ಟಿಸಿತ್ತು.

ವಿದ್ಯುತ್ ಅವಘಡದಿಂದಾಗಿ ಪ್ರಮುಖ ವಿದ್ಯುತ್ ವೈರಿಂಗ್ ಸುಟ್ಟು ಹೋಗಿರುವುದರಿಂದ ಕೆಶ್ವಾನ ನೆಟವರ್ಕ ನ ಉಪನೊಂದಣಾಧಿಕಾರಿಗಳ ಕಛೇರಿ ಹಾಗೂ ಭೂಮಿ ವಿಭಾಗದ ಕಾರ್ಯ ಬುಧವಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದೂರ ದೂರದಿಂದ ಕಾರ್ಯನಿಮಿತ್ತ ಬಂದಿದ್ದ ಸಾರ್ವಜನಿಕರು ಇಂದು ಯಾವುದೇ ಕೆಲಸಗಳು ಆಗುವುದಿಲ್ಲ ಎಂಬ ಉತ್ತರ ಕೇಳಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಬೇಕಾಯಿತು.
———-

ಹೇಳಿಕೆ: ಆಕಸ್ಮಿಕವಾಗಿ ಅತಿಯಾದ ವಿದ್ಯುತ್ ಪ್ರವಹಿಸಿದ ಪರಿಣಾಮ ಕೆಲ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿದ್ದರಿಂದ ಕೆಶ್ವಾನ ನೆಟವರ್ಕ ನ ಉಪನೊಂದಣಾಧಿಕಾರಿಗಳ ಕಛೇರಿ ಹಾಗೂ ಭೂಮಿ ವಿಭಾಗದ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿವೆ. ತಕ್ಷಣ ದುರಸ್ಥಿಗೊಳಿಸಲು ಜಿಲ್ಲಾಧಿಕಾರಿಗಳ ಕಛೇರಿಗೆ ಮನವಿ ಮಾಡಲಾಗಿದ್ದು, ಗುರುವಾರ ಪುನಾರಂಭಗೊಳ್ಳಲಿವೆ.———- ಅಶೋಕ ಗುರಾಣಿ, ಮುಂಡಗೋಡ ತಹಸೀಲ್ದಾರ

loading...