ಅಂಗನವಾಡಿಯಲ್ಲೆÃ ಎಲ್.ಕೆ.ಜಿ/ ಯುಕೆಜಿ ಪ್ರಾರಂಭಿಸುವಂತೆ ಮನವಿ

0
32

 

ಕನ್ನಡಮ್ಮ ಸುದ್ದಿ-ರಾಮದುರ್ಗ: ಅಂಗನವಾಡಿಯಲ್ಲೆÃ ಎಲ್.ಕೆ.ಜಿ/ ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಗೆ) ಸಂಯೋಜಿತ ತಾಲೂಕಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಂಗನವಾಡಿ ನೌಕರರು ತಹಶೀಲ್ದಾರ, ಶಿಶು ಅಭಿವೃಧ್ದಿ ಯೋಜನಾಧಿಕಾರಿ ಹಾಗೂ ಬಿ.ಇ.ಓ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ೩೦-೩೫ ವರ್ಷಗಳಿಂದ ೩ ರಿಂದ ೬ ವರ್ಷದ ಒಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವದರ ಮೂಲಕ ಅಂಗನವಾಡಿ ನೌಕರರು ಜನಪ್ರಿÃಯ ಐಸಿಡಿಎಸ್ ಯೋಜನೆಯಡಿಯಲ್ಲಿ ಕಡಿಮೆ ವೇತನದಲ್ಲಿ ತಮ್ಮ ಜೀವನವನ್ನೆ ಕಳೆದಿದ್ದಾರೆ. ಇಂತಹ ಸಮಯದಲ್ಲಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾರ್ಥಮಿಕ ಶಾಲೆಗಳನ್ನು ತೆರೆದು ೩.೫ ವರ್ಷ ಮೇಲ್ಪಟ್ಟು ಮಕ್ಕಳಿಗೆ ಬೆಳ್ಳಿಗ್ಗೆ ೧೦ ರಿಂದ ಮಧ್ಯಾಹ್ನ ೩.೩೦ ರ ತನಕ ಶಾಲೆ ನಡೆಸಬೇಕು.

ಆದರೇ ಈ ಆದೇಶವನ್ನು ತರುವ ಪೂರ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಟ್ಟಿಗೆ ಮತ್ತು ಮಕ್ಕಳ, ಶಿಕ್ಷಣ ತಜ್ಙರೊಂದಿಗೆ, ಸಂಘಟನೆಗಳೊಂದಿಗೆ ಸಂವಾದ ನಡೆಸದೇ ಏಕಮುಖವಾಗಿ ಸುತ್ತೊÃಲೆಯನ್ನು ತರಲಾಗಿದೆ. ೧೯೭೫ ರಲ್ಲಿ ಬಂದ ಐಸಿಡಿಎಸ್ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರಗಳು ಸ್ಥಾಪನೆ ಆಗಿದ್ದೆ ೩-೬ ವರ್ಷದ ಮಕ್ಕಳಿಗಾಗಿ, ಈಗಾಗಲೇ ೧೬,೪೦,೧೭೦ ಮಕ್ಕಳು ಅಂಗನವಾಡಿಗಳಲ್ಲಿ ದಾಖಲಾಗಿದ್ದಾರೆ. ಇದೇ ಮಕ್ಕಳೇ ಈಗ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಪಾರಂಭವಾಗುವ ಪಬ್ಲಿಕ್ ಶಾಲೆಗಳಿಗೆ ದಾಖಲು ಆಗಬೇಕಾಗುತ್ತದೆ. ಈ ಮಕ್ಕಳು ಅಲ್ಲಿಗೆ ಹೋದರೆ ಅಂಗನವಾಡಿ ಕೇಂದ್ರದ ಅಗತ್ಯವೇ ಬರುವುದಿಲ್ಲ ಏಕೆಂದರೆ ೩ ವರ್ಷದೊಳಗಿನ ಮಕ್ಕಳಿಗೆ ಮನೆಗೆ ಆಹಾರವನ್ನು ಕೊಡಲಾಗುತ್ತದೆ.
೬ ವರ್ಷದೊಳಗಿನ ಮಕ್ಕಳಲ್ಲಿ ಶೇ. ೪೦% ದೈಹಿಕ ಮತ್ತು ಶೇ. ೮೦% ಮಾನಸಿಕ ಬೆಳವಣಿಗೆ ನಡೆಯುತ್ತದೆ. ಈ ಸಂಧರ್ಭದಲ್ಲಿ ಅಗತ್ಯ ಪೌಷ್ಠಿಕ ಆಹಾರ ಪ್ರಾರ್ಥಮಿಕ ಆರೋಗ್ಯ ಸವಲತ್ತುಗಳು ಮತ್ತು ಪೂರ್ವ ಪ್ರಾರ್ಥಮಿಕ ಶಿಕ್ಷಣ ಜೊತೆಯಲ್ಲಿರಬೇಕು ಎಂಬ ಕಾರಣಕ್ಕೆ ರೂ. ೪೨೦೦ ಕೋಟಿ ಯನ್ನು ಈಗಾಗಲೇ ಖರ್ಚು ಮಾಡುತ್ತಿದೆ.

ಬೇಡಿಕೆ: ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಮಾತೃಪೂರ್ಣ ಕೆಲಸಕ್ಕೆ ಒಬ್ಬ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು. ಪೂರ್ವಪ್ರಾರ್ಥಮಿಕ ಶಿಕ್ಷಣ ಪೂರೈಸಿದವರಿಗೆ ಟಿಸಿ ಯನ್ನು ಕೊಟ್ಟು ೧ ನೇ ತರಗತಿಗೆ ಸೇರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಅಂಗನವಾಡಿ ಮತ್ತು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸರಕಾರಿ ಸೌಲಭ್ಯಗಳೆಂದೂ ಘೋಷಿಸಬೇಕು. ಖಾಸಗಿ ಕಾನ್ವೆಂಟ್ ಮತ್ತು ಶಾಲೆಗಳಿಗೆ ಕೊಡುವ ಅನುಮತಿಯನ್ನು ರದ್ದು ಮಾಡಬೇಕು ಸೇರಿದಂತೆ ಇತರ ಬೇಡಿಕೆಗಳಿಗಾಗಿ ಒತ್ತಾಯಿಸಿದರು.
ಅಂಗನವಾಡಿ ನೌಕರ ಸಂಘದ ತಾಲೂಕಾಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ಕಾರ್ಯದರ್ಶಿ ಶಕುಂತಲಾ ನಾರಾಯಣಕರ, ಖಜಾಂಚಿ ತಾಹೀರಾ ಮಕನದಾರ, ಬೋರಮ್ಮ ತೆಕ್ಕಿ, ರುಕ್ಮಾಯಿ ಬಿಂಗೆ, ವಿಜಯಲಕ್ಷಿö್ಮÃ ಸಿದ್ದಿಬಾಂವಿ ಸೇರಿದಂತೆ ಮುಂತಾದವರಿದ್ದರು.

loading...