ಶಿಕ್ಷಣವೇ ನಿಜವಾದ ಸಂಪತ್ತು: ಶ್ರಿÃಕಾಂತ

0
30

 

ಮೂಡಲಗಿ: ಶಿಕ್ಷಣವೇ ನಿಜವಾದ ಸಂಪತ್ತು, ಶಿಕ್ಷಣದಿಂದ ಮನುಷ್ಯ ತನಗೆ ಬೇಕಾದ ಎಲ್ಲವನ್ನೂ ಗಳಿಸಲು ಸಾಧ್ಯವಿದೆ. ಸುಶಿಕ್ಷಿತ ಸಮಾಜವೇ ದೇಶ ಮುನ್ನಡೆಸುವ ಶಕ್ತಿ ಎಂದು ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇದರ ಸದಸ್ಯರಾದ ಶ್ರಿÃಕಾಂತ ರಾವ್ ಹೇಳಿದರು.
ಸ್ಥಳೀಯ ಶಿಕ್ಷಣ ಪ್ರೆÃಮಿ ಹಾಗೂ ರಾಜಕೀಯ ಧುರೀಣರಾದ ಬಿ.ಬಿ.ಹಂದಿಗುಂದ ಇವರ ಮನೆಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಸತ್ಕಾರವನ್ನು ಸ್ವಿÃಕರಿಸಿ ಮಾತನಾಡುತ್ತಾ ಸಮಾಜವನ್ನು ಮುನ್ನಡೆಸುವ ನಾಯಕನಾಗಬೇಕಾದರೆ ಉತ್ತಮ ಶಿಕ್ಷಣವನ್ನು ಪಡೆದವರಿಂದ ಮಾತ್ರ ಸಾಧ್ಯ ಎಂದರು.

ಸಮಾರಂಭದ ಆಧ್ಯಕ್ಷತೆಯನ್ನು ವಹಿಸಿದ ಬಿ.ಬಿ.ಹಂದಿಗುಂದ ಮಾತನಾಡಿ ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆÃ ಆಸ್ತಿ ಮಾಡಬೇಕು, ಮನುಷ್ಯ ಭಾಷೆ, ಸಂಸ್ಕೃತಿ, ಕಲೆ, ವೈಚಾರಿಕತೆ ಮೊದಲಾದ ಗುಣಗಳನ್ನು ಶಿಕ್ಷಣದಿಂದ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಸುರೇಖಾ ಶ್ರಿÃಕಾಂತ ರಾವ್, ರಾಮಪ್ಪ ಹಂದಿಗುಂದ, ಭೀಮಶಿ ಪಾಟೀಲ, ಶಿವಬಸು ಹಂದಿಗುಂದ, ಹಣಮಂತ ಕಂಕಣವಾಡಿ, ಭೀಮಶಿ ಸಸಾಲಟ್ಟಿ, ಈಶ್ವರ ಕಂಕಣವಾಡಿ, ಹಣಮಂತ ಪೂಜೇರಿ, ಹಾಲಪ್ಪ ಅಂತರಗಟ್ಟಿ, ಮಹಾದೇವ ಮಲಗೌಡರ, ಭರಮಣ್ಣ ಕಪ್ಪಲಗುದ್ದಿ, ರಾಜು ಪೂಜೇರಿ, ಮಹಾದೇವ ಕುರುಬಗಟ್ಟಿ ಉಪಸ್ಥಿತರಿದ್ದರು.

loading...