ಜನರಲ್ ಸ್ಟೊÃರ್‌ಗಳಿಗೆ ಭೇಟಿ ನೀಡಿ ದಂಡ ವಿಧಿಸಿದ ಅಧಿಕಾರಿಗಳು

0
29

ಸವಣೂರ : ತಂಬಾಕು ಸೇವನೆಯಿಂದ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳು ಈ ಪದಾರ್ಥದಿಂದ ಬರುತ್ತಿದ್ದು ಅವುಗಳನ್ನು ಉಪಯೋಗಿಸುವ ಗೋಜಿಗೆ ಹೋಗಬಾರದು ಎಂದು ತಾಲ್ಲೂಕ ವೈದ್ಯಾಧಿಕಾರಿ ರಾಘವೇಂದ್ರ ಜಿಗಳಿಕೊಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕ ಆಸ್ಪತ್ರೆ ಸರ್ಕಲ್, ಅಂಬೇಡ್ಕರ ವೃತ್ತ, ಎಪಿಎಂಸಿ ಎದುರಿಗೆ, ಬಸ್‌ನಿಲ್ದಾಣ, ವಿವಿಧ ಶಾಲಾ ಆವರಣದ ಹತ್ತಿರ ಇರುವ ಬೀಡಾ, ಪಾನಪರಾಕ, ಜನರಲ್ ಸ್ಟೊÃರ್‌ಗಳಿಗೆ ಭೇಟಿ ನೀಡಿ ಅಂಗಡಿಗಳನ್ನು ಪರಿಶೀಲಿಸಿ ದಂಡವಿಧಿಸಿ ನೆರೆದ ಸಾರ್ವಜನಿಕರನ್ನು ಉದ್ದೆÃಶಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ತಂಬಾಕು ಉಪಯೋಗಿಸುವುದರಿಂದ ಹಲವಾರು ರೋಗಗಳು ಉಲ್ಬಣವಾಗಿ ಅನಾರೋಗ್ಯದಿಂದ ಬಳಲುವಂತ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವುಗಳನ್ನು ನಿಯಂತ್ರಿಸಲು ತಂಬಾಕು ನಿಷೇಧ ಹಾಗೂ ಗುಣಮಟ್ಟದ ಆಹಾರ ವಿತರಣೆಯನ್ನು ಪರೀಶಿಲಿಸಲಾಗುತ್ತಿದ್ದೆ. ಆದ್ದರಿಂದ, ಸಾರ್ವಜನಿಕರು ಆರೋಗ್ಯದಿಂದ ಇರಲು ಗುಣಮಟ್ಟದ ಆಹಾರವನ್ನು ಸೇವಿಸಿ ದುಶ್ಚಟಗಳಿಗೆ ಮಾರುಹೋಗದೆ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಮನವರಿಕೆ ಮಾಡಿ, ಬೀಡಾ, ಪಾನಪರಾಕ ಅಂಗಡಿಗಳಲ್ಲಿ ತಂಬಾಕು ಮಾರಾಟ ನಿಷೇದಿಸಲಾಗಿದೆ ಅವುಗಳನ್ನು ಮಾರಾಟ ಮಾಡಬಾರದು. ಮಾರಾಟ ಮಾಡುವದು ಕಂಡು ಬಂದರೆ ಅಂತವರ ಅಂಗಡಿಗಳನ್ನು ಲಾಕ್‌ಮಾಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಿದರು. ಪಟ್ಟಣದಲ್ಲಿ ಸುಮಾರು ೧೭ಅಂಗಡಿಗಳ ಮೇಲೆ ದಾಳಿಮಾಡಿ ೪೨೦೦ ದಂಡ ವಿಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಡಾ.ಸಂತೋಷ ದಡ್ಡಿ, ದಾದಾಪೀರ ಹುಲಿಕಟ್ಟಿ, ಪೊಲಿಸ್ ಇಲಾಖೆ ಎಎಸ್‌ಐ ರಾಘವೇಂದ್ರ, ಕಟ್ಟಿಮನಿ, ಆರೋಗ್ಯ ಇಲಾಖೆ ಸಿಬ್ಬಂದಿ ಎಸ್.ಎಲ್.ಪೂಜಾರ ಇದ್ದರು.

loading...