ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ

0
14

ಬೆಳಗಾವಿ
ಚುನಾವಣೆ ಕರ್ತವ್ಯಕ್ಕೆಂದು ಹೋಗಿದ್ದ ನೌಕರನ ಮನೆಯ ಕಳ್ಳತನ ಪ್ರಕರಣವನ್ನು ಬೇಧಿಸಿರುವ ನಗರದ ಕ್ಯಾಂಪ ಠಾಣೆಯ ಪೆÇಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 1.95 ಲಕ್ಷ ರು. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆರಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಕಾಳಿಅಂಬ್ರಾಯಿ ನಿವಾಸಿ ಸೂರಜ್ ಅಜಯ ಬನಸಕ್ರ (23) ಬಂಧಿತ ಕಳ್ಳ. ನಗರದ ಲಕ್ಷ್ಮಿಟೆಕ ನಿವಾಸಿ ವಾಸುದೇವ ನಾರಾಯಣ ಪಾರ್ವತಿಕರ ಎಂಬುವರು ಕಳೆದ ಎಪ್ರಿಲ್ 25 ರಂದು ಚುನಾವಣೆ ಕರ್ತವ್ಯಕ್ಕೆಂದು ಮನೆಗೆ ಕೀಲಿಹಾಕಿಕೊಂಡು ಹೋಗಿದ್ದರು. ಇದನ್ನು ಗಮನಿಸಿದ ಕಳ್ಳ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದನು.
ಈ ಕುರಿತು ಮನೆಯ ವಾಸುದೇವ ಕ್ಯಾಂಪ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆ ಬಲೆ ಬಿಸಿದ್ದರು. ಪೆÇಲೀಸರ ಬಲೆಗೆ ಸಿಕ್ಕಿದ ಆರೋಪಿ ಸೂರಜನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಪೆÇ್ಪಪ್ಪಿಕೊಂಡಿದ್ದಾನೆ. 1.95 ಲಕ್ಷ ರು. ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಿಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ಕಾಲಕ್ಕೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಪತ್ತೆಗೆ ಜಾಲ ಬಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕ್ಯಾಂಪ ಠಾಣೆಯ ಪಿಐ ಚನ್ನಕೇಶ್ವ ಟಿಂಗರಿಕರ, ಪಿಎಸ್‍ಐ ಮಂಜುನಾಥ, ಎಎಸ್‍ಐಗಳಾದ ಬಿ.ಆರ್. ಡೂಗ, ಎಂ.ವೈ.ಹುಕ್ಕೇರಿ, ಸಿಬ್ಬಂದಿ ಪಿ. ಬಿ. ಡೊಳ್ಳಿ, ಜೆ.ಎಂ ಮಗದುಮ್ಮ, ಆರ್.ಎಸ್. ಪೂಜೇರಿ, ಬಿ.ಬಿ. ಗೌಡರ, ಕೆ.ಎಂ. ಬನೋಶಿ, ಮಹೇಶ ಪಾಟೀಲ, ಬಿ.ಎಂ. ನರಗುಂದ, ಬಿ.ಎಂ. ಕಲ್ಲಪ್ಪನವರ, ಎ.ಬಿ. ಘಟ್ಟದ, ಅರುಣಕುಮಾರ ಪಾಟೀಲ ಭಾಗವಹಿಸಿದ್ದರು. ಪೆÇಲೀಸರ ಕಾರ್ಯಕ್ಕೆ ಪೆÇಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ, ಡಿಸಿಪಿ ಸೀಮಾ ಲಾಟ್ಕರ ಶ್ಲಾಘಿಸಿದ್ದಾರೆ.

loading...