ಕುಡಲಗಾಂವದಲ್ಲಿ ದನಕರುಗಳನ್ನು ಬಲಿ ತೆಗೆದುಕೊಂಡ ಹುಲಿ : ರೈತರಿಗೆ ನಷ್ಟ

0
33

ಜೋಯಿಡಾ: ತಾಲೂಕಿನ ಶಿಂಗರಗಾಂವ ಗ್ರಾ.ಪಂ. ವ್ಯಾಪ್ತಿಯ ಕುಡಲಗಾಂವ ಗ್ರಾಮದಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ರೈತರ ದನ-ಕರುಗಳನ್ನು ಹುಲಿ ಹಿಡಿದು ಸಾಯಿಸುತ್ತಿದ್ದು, ಹಸುವನ್ನು ಸಾಕಿದ ರೈತರಿಗೆ ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಜಗಲಭೇಟ ವಲಯ ಅರಣ್ಯಾಧಿಕಾರಿಗಳಿಗೆ ನಷ್ಟ ಪರಿಹಾರಕ್ಕಾಗಿ ಮನವಿ ಮಾಡಿದ್ದಾಗಿ ಈ ಭಾಗದ ರೈತರು ತಿಳಿಸಿರುತ್ತಾರೆ.
ದಿನನಿತ್ಯ ಓಂದೆರಡು ದನ,ಕರುಗಳನ್ನು ಬಲಿ ತೆಗೆದುಕೊಳ್ಳುವ ಈ ಹುಲಿಯ ಕಾಟದಿಂದ ನಾವು ಬೆಸತ್ತಿದ್ದೆÃವೆ.
ಉಳುಮೆಗೆ ಸಿದ್ದಗೊಂಡ ಎತ್ತು,ಕೋಣಗಳನ್ನೂ ಬಲಿ ಪಡೆದಿದ್ದು, ಹಾಲು ಕರೆವ ಆಕಳು ಕರುಗಳನ್ನು ಕೂಡಾ ಕಳೆದುಕೊಂಡಿದ್ದೆÃವೆ ಎಂದು ಹೇಳುತ್ತಿರುವ ಈ ಭಾಗದ ರೈತರಾದ ಮಾನು ಸಡು ದೋಡಕೆ, ಜಕ್ಕು ಮಾನು ದೊಡಕೆ,ಬೊಮ್ಮು ಲಕ್ಕು ಲಂಬೋರೆ, ಶಿಂಗರಗಾಂವದ ಗೋಪಾಲ ರಾಮು ದೇಸಾಯಿ ಮುಂತಾದ ರೈತರು ಕಳೆದ ನಾಲ್ಕೆöÊದು ದಿನಗಳಿಂದ ಹಾಲು ಕರೆವ ಹಸು,ಎಮ್ಮೆ, ಉಳುಮೆಯ ವಯಸ್ಸಿನ ಕರು ಹೀಗೆ ಹತ್ತಾರು ದನಕರುಗಳನ್ನು ಕಳೆದುಕೊಂಡಿದ್ದಾಗಿ ತಿಳಿಸುತ್ತಿದ್ದಾರೆ.
ಗೋಪಾಲ್ ದೇಸಾಯಿ ಇವರ ಕರುವಿನ ಎಡಕಾಲನ್ನು ಮುರಿದಿದ್ದು, ಕರು ನಡೆಯಲು ಆಗದೆ ಆಹಾರ ತಿನ್ನಲ್ಲೂ ಆಗದಂತಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದು, ಶಿಘ್ರಪರಿಹಾರನೀಡಿ ಹುಲಿಯಿಂದ ನಮ್ಮ ಜಾನುವಾರುಗಳನ್ನು ರಕ್ಷಿಸಿಕೊಡಿ ಎಂದು ಹೇಳಿರುತ್ತಾರೆ.

ಆನೆ ದಾಳಿಗೆ ತೆಂಗಿನ ತೋಟ ಹಾನಿ :- ಶಿಂಗರಗಾಂವ ದಲಿನ ವಿಷ್ಣು ವಿಠೋಬಾ ದೇಸಾಯಿ, ಮೀರಾಬಾಯಿ ದೇಸಾಯಿ ಎನ್ನುವ ರೈತರ ತೆಂಗಿನ ತೋಟಕ್ಕೆ ದಾಳಿ ಇಟ್ಟ ಆನೆ ಅಪಾರ ಪ್ರಮಾಣದ ತೆಂಗಿನ ಗಿಡ ಹಾಗೂ ಬಾಳೆಗಿಡಗಳನ್ನು ನಾಶಮಾಡಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ನಷ್ಟಕ್ಕೆ ಪರಿಹಾರ ನೀಡುವ ಜೋತೆಗೆ ಆನೆ ದಾಳಿಯನ್ನು ತಡೆಯುವಂತೆ ರೈತರು ಆಗ್ರಹಿಸಿದ್ದಾರೆ.

loading...