ಅಂತಾರಾಷ್ಟಿçÃಯ ಯೋಗಪಟು ವಿಜಯಕುಮಾರಗೆ ಸನ್ಮಾನ

0
32

ನರಗುಂದ: ತಾಲೂಕಿನ ಬನಹಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಜೂ.೨೧ ರಂದು ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಶಿರೋಳ ಗ್ರಾಮದ ಅಂತರಾಷ್ಟಿçÃಯ ಯೋಗಪಟು ವಿಜಯಕುಮಾರ ಮುದೇನಗುಡಿ ಅವರನ್ನು ಶಾಲಾ ಶಿಕ್ಷಕರಿಂದ ಸನ್ಮಾನಿಸಲಾಯಿತು.

ಯೋಗ ದಿನಾಚರಣೆ ಅಂಗವಾಗಿ ಬೆಳಿಗ್ಗೆ ೬ ಗಂಟೆಗೆ ಶಾಲಾ ಆವರಣದಲ್ಲಿ ನಡೆದ ಯೋಗಾಬ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ವಿಜಯಕುಮಾರ ಮುದೇನಗುಡಿ ಸೂರ್ಯ ನಮಸ್ಕಾರ, ಪರಿವ್ಯಕ್ತ ತ್ರಿಕೋನಾಸನ, ಚಕ್ರಾಸನ, ವಜ್ರಾಸನ, ಶಶಂಕಾಸನ, ಪದ್ಮಾಸನ ಸೇರಿ ಅನೇಕ ಯೋಗದ ಭಂಗಿಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ನೀಡಿ, ಅವರಿಂದ ಯೋಗಾಭ್ಯಾಸಗಳನ್ನು ಮಾಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ದೈಹಿಕ ಶಿಕ್ಷಕ ಎನ್.ಆರ್.ನೀಡಗುಂದಿ, ಶಾಲಾ ಹಿರಿಯ ಶಿಕ್ಷಕ ಎಸ್.ಎಸ್.ಹಿರೇಮಠ, ಎಸ್.ಎಸ್.ಬಿರಾದಾರ, ಎಂ.ವ್ಹಿ.ದೇಮಶೆಟ್ಟಿ, ವಿಶ್ವನಾಥ ಮೇಟಿ ಹಾಗೂ ವಿದ್ಯಾರ್ಥಿ/ನಿಯರು ಪಾಲ್ಗೊಂಡಿದ್ದರು.

loading...