ಸಾರಿಗೆ ನೌಕರರು ಪತ್ರಚಳುವಳಿ ಮೂಲಕ ಮುಖ್ಯಮಂತ್ರಿಗೆ ಮನವಿ

0
29

ಯಲ್ಲಾಪುರ:ಹಗಲು ರಾತ್ರಿಯೆನ್ನದೇ ಸಾರಿಗೆ ಸೌಲಭ್ಯ ಒದಗಿಸುವ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿರುವ ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ನೌಕರರನ್ನು ಸರಕಾರಿ ನೌಕರರೆಂದು ಘೋಷಿಸಿ ಸರಕಾರಿ ಸವಲತ್ತು ,ಪಿಂಚಣಿ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಪಟ್ಟಣದ ಸಾರಿಗೆ ಘಟಕದ ಸಾರಿಗೆ ನೌಕರರು ಪತ್ರಚಳುವಳಿ ಮೂಲಕ ಮುಖ್ಯಮಂತ್ರಿಗೆ ವಿನಂತಿಸಿದರು.
ಶುಕ್ರವಾರ ಸಂಜೆ ಪಟ್ಟಣದ ಮುಂಡಗೋಡ ರಸ್ತೆಯ ಬಳಿ ಇರುವ ವಾಕರರಾಸ ಸಾರಿಗೆ ಘಟಕದಲ್ಲಿ ಸಾರಿಗೆ ನೌಕರರು ಪತ್ರಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಚಳುವಳಿಯ ನೇತ್ರತ್ವವಹಿಸಿದ್ದ ಸಾರಿಗೆ ನೌಕರ ಆರ್.ಎಮ್ ಶೇಖ ಮಾತನಾಡಿ ಕೆಎಸ್ ಆರ್‌ಟಿಸಿಯ ನಾಲ್ಕು ನಿಗಮಗಳನ್ನು ವಿಲೀನಗೊಳಿಸಿ ಸಾರಿಗೆ ನಿಗಮದ ನೌಕರರನ್ನು ಸರಕಾರಿ ನೌಕರರೆಂದು ಘೋಷಿಸಿ ,೬ನೇ ವೇತನ ನೀಡುವ ಮೂಲಕ ಇತರ ಇಲಾಖೆಯ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಭರವಸೆನೀಡಿದ್ದರು. ಅದರಂತೆ ಅವರುನಡೆದುಕೊಳ್ಳಬೇಕೆಂದು ಆಗ್ರಹಿಸಿದರು.ಸಾರಿಗೆ ನಿರ್ವಾಹಕ ಪರಮೇಶ್ವರ ಮಾತನಾಡಿ ನಾವು ಹಗಳಿರುಳೆನ್ನದೇ ಸಾರಿಗೆ ಸೇವೆ ನೀಡುತ್ತಿದ್ದೆÃವೆ.ಈಗಾಗಲೇ ಆಂಧ್ರ,ತಮಿಳುನಾಡು ನೆರೆ ರಾಜ್ಯಗಳಲ್ಲಿ ಸರಕಾರಿ ನೌಕರರೆಂದು ಪರಿಗಣಿಸಿ ಸರಕಾರಿ ಸೌಲಭ್ಯ ,ಪಿಂಚಣಿ ನೀಡಲಾಗುತ್ತಿದೆ ,ಅದರಂತೆ ನಮ್ಮ ಸರಕಾರವು ನಮ್ಮನು ಸರಕಾರಿ ನೌಕರರೆಂದು ಘೋಷಿಸಿ ಸೌಲಭ್ಯ ಕಲ್ಪಿಸಬೇಕು ಎಂದರು. ಪತ್ರಚಳುವಳಿಯಲ್ಲಿ ಘಟಕದ ವ್ಯವಸ್ಥಾಪಕ ಸಿ.ವಿ ಇಟಗಿ,ನೌಕರರುಗಳಾದ ಬಿ.ಕೆತಳವಾರ ,ಲೋಹಿತ ಪಾಟೀಲ,ಮಣಿಕಂಠ,ವಿ.ಕೆಹೊನ್ನಾವರ ಸೇರಿದಂತೆ ಸಾರಿಗೆ ಘಟಕದ ಚಾಲಕ ನಿರ್ವಾಹಕರು , ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದ್ದರು.

loading...