ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಡ ಹೇರಿರುವುದು ಉತ್ತಮ ಬೆಳವಣಿಗೆ

0
5

ಹಾನಗಲ್ಲ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಸಮಾಜದ ಮುಖಂಡರು ಸರಕಾರದ ಮೇಲೆ ಒತ್ತಡ ಹಾಕಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ನವರಂಗ ಕ್ಲಾಥ್ ಸ್ಟೊರ‍್ಸ ಮಳಿಗೆಯ ಮಹಡಿಮೇಲೆ ನೂತನವಾಗಿ ಸ್ಥಾಪನೆಗೊಂಡ ಜಗದ್ಗುರು ಪಂಚಾಚಾರ್ಯ ಸೌಹಾರ್ದ ಸಹಕಾರ ನಿಯಮಿತದ ಉದ್ಘಾಟನೆಯನ್ನು ಶನಿವಾರ ನೆರವೇರಿಸಿದ ಬಳಿಕ ಉದಾಸಿ ಕಲ್ಯಾಣ ಮಂಟಪದಲ್ಲಿ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಆಶೀವರ್ಚನ ನೀಡಿದರು.
ಜಂಗಮನಿಲ್ಲದ ಜಗತ್ತು ಇಲ್ಲ. ಜಗದ ಒಳಿತು ಬಯಸುವ ಜಂಗಮರು ಸರ್ವ ವಿಧದಲ್ಲಿ ಹಿಂದುಳಿದಿದ್ದಾರೆ. ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.
ಸಂಘರ್ಷಗಳ ಮೂಲಕ ಸಮಾಜ ಒಡೆಯುವ ದುಷ್ಠತೆ ಸಲ್ಲದು. ವೀರಶೈವ ಲಿಂಗಾಯತ ಒಂದೇ ಎಂಬುದನ್ನು ಉಡುಪಿ ವಿಶ್ವೆÃಶತೀರ್ಥರು ಪ್ರತಿಪಾಧಿಸಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸಾಮಾಜಿಕ ವೈಪರಿತ್ಯಗಳನ್ನು ತಡೆಯಬೇಕು ಎಂದರು.
ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಆಶೀವರ್ಚನ ನೀಡಿ, ಸಹಕಾರಿ ತತ್ವ ಗೆಲ್ಲಬೇಕು. ನಮ್ಮಲ್ಲಿನ ಅಹಮಿಕೆ ಬದಿಗೊತ್ತಿ, ಸಂಘಟನೆಗೆ ಮುಂದಾಗಬೇಕು. ಸಮಷ್ಠಿ ಪ್ರಜ್ಷೆ, ಸಮುದಾಯದ ಜಾಗೃತಿ ಮತ್ತು ಸಾಮಾಜಿಕ ತತ್ವದಿಂದ ಸಂಘ, ಸಂಸ್ಥೆಗಳ ಉತ್ತರೋತ್ತರ ಅಭಿವೃದ್ಧಿ ಸಾಧ್ಯವಿದೆ ಎಂದರು.
ಶಾಸಕ ಸಿ.ಎಂ.ಉದಾಸಿ ಮಾತನಾಡಿ, ಪ್ರಾಮಾಣಿಕ ಪ್ರಯತ್ನದಿಂದ ಸಹಕಾರಿ ರಂಗದಲ್ಲಿ ಯಶಸ್ಸು ಸಾಧ್ಯವಾಗಲಿದೆ. ಸಾಧಿಸುವ ಛಲ ಇದ್ದಾಗ ಸವಾಲುಗಳು ಸರಳಗೊಳ್ಳುತ್ತವೆ, ನಾವು ಈಗ ಆರ್ಥಿಕವಾಗಿ ಸಬಲರಾಗುತ್ತಿದ್ದೆÃವೆ. ಅದೇ ಸಮಯದಲ್ಲಿ ಸಂಸ್ಕಾರದಿಂದ ವಿಮುಖರಾಗುವುದು ಬೇಡ ಎಂದರು.
ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಮಾತನಾಡಿ, ಪತ್ತಿನ ಸಹಕಾರಿ ಸಂಘಗಳು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಅಂದಾಗ ಉನ್ನತಿ ತೆರೆದುಕೊಳ್ಳಲಿದೆ ಎಂದರು.
ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಸರಕಾರದ ಅಥವಾ ಸಂಘ, ಸಂಸ್ಥೆಗಳ ಯೋಜನೆಗಳು ಯಶಸ್ವಿಯಾಗಲು ಜನರ ಸಹಭಾಗಿತ್ವ ಅತ್ಯಂತ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಗದ್ಗುರು ಪಂಚಾಚಾರ್ಯ ಸೌಹಾರ್ದ ಸಹಕಾರ ನಿಯಮಿತದ ಅಧ್ಯಕ್ಷ ಶಿವಯೋಗಿ ಹಿರೇಮಠ, ಜಂಗಮ ಸಮಾಜದ ಬಹುತೇಕರು ಬಡವರು. ಪತ್ತಿನ ಸಹಕಾರಿ ಸಂಘ ಸ್ಥಾಪಿಸುವ ಮೂಲಕ ಸಮಾಜದ ಜನರ ಆರ್ಥಿಕ ಸದೃಢತೆಗೆ ಆಧ್ಯತೆ ನೀಡಲಾಗುತ್ತದೆ. ಮುಖ್ಯವಾಗಿ ಶಿಕ್ಷಣ, ಕೃಷಿ, ಉದ್ಯೊÃಗಕ್ಕೆ ಸಹಾಯ ಒದಗಿಸುವ ಉದ್ದೆÃಶ ಹೊಂದಲಾಗಿದೆ ಎಂದರು.
ರಾಣೆಬೇನ್ನೂರ ಮದ್ದರಕಿ ಮಠದ ಶಿವಯೋಗಿ ಶಿವಾಚಾರ್ಯ ಶ್ರಿÃಗಳು, ಬಂಕಾಪೂರ ಅರಳಲೇಮಠದ ರೇವಣಸಿದ್ಧ ಶಿವಾಚಾರ್ಯ ಶ್ರಿÃಗಳು, ಅಕ್ಕಿಆಲೂರ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರಿÃಗಳು, ಕೂಡಲ ಗುರುನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಶ್ರಿÃಗಳು, ಹೇರೂರ ಗುಬ್ಬಿಅಜ್ಜನ ಮಠದ ನಂಜುಂಡ ಪಂಡಿತಾರಾಧ್ಯ ಶ್ರಿÃಗಳು, ಶಾಂತಪೂರ ಸಂಸ್ಥಾನಮಠದ ಶಿವಾನಂದ ಶಿವಾಚಾರ್ಯ ಶ್ರಿÃಗಳು ಸಾನಿಧ್ಯ ವಹಿಸಿದ್ದರು.
ಸಮಾಜದ ಗಣ್ಯರಾದ ಗಂಗಾಧರ ಗುರುಮಠ, ಎಂ.ವಿ.ಹಿರೇಮಠ, ಸಿದ್ಧರಾಮಯ್ಯ ಹಿರೇಮಠ, ಎಂ.ಜಿ.ಮೂಡಿಮಠ, ವಿಶ್ವನಾಥ ಹಿರೇಮಠ, ಎಸ್.ಎಸ್.ಹಿರೇಮಠ, ಉದಯಕುಮಾರ ಪುರಾಣಿಕಮಠ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆ: ಇದಕ್ಕೂ ಮುನ್ನ ಇಲ್ಲಿನ ಕುಮಾರೇಶ್ವರ ವೃತ್ತದಿಂದ ಉದಾಸಿ ಕಲ್ಯಾಣ ಮಂಟಪ ತನಕ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರಿÃಗಳು ಮತ್ತು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಶ್ರಿÃಗಳ ಸಾರೋಟದ ಮೆರವಣಿಗೆ ನಡೆಯಿತು. ವಾಧ್ಯ ವೈಭವ ಜೊತೆಯಲ್ಲಿ ಮಹಿಳೆಯರ ಕುಂಬ ಮೆರಗು ನೀಡಿತ್ತು.

loading...