ಮನಸ್ಸು ಹಿಡಿತದಲ್ಲಿಡಲು ಶರಣರ ಚಿಂತನೆ ಅವಶ್ಯ: ಶ್ರಿÃಗಳು

0
23

ಸವಣೂರ: ಪ್ರತಿಯೋಬ್ಬ ಮನುಷ್ಯನ ಮನಸ್ಸು ಚಂಚಲ ಸ್ಥಿತಿಯತ್ತ ಮುಖ ಮಾಡುತ್ತಿದ್ದರೆ, ಅದನ್ನು ಒಂದೆಡೆ ಕೂಡಿ ಹಾಕಲು ಶರಣರ ಚಿಂತನೆಯ ಜೊತೆಗೆ ಯೋಗ ಅವಶ್ಯವಾಗಿದೆ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಜರುಗಿದ ೧೭೧ನೇ ಶಿವಾನುಭವ ಹಾಗೂ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅರಿವಿನ ಮನೆಯಲ್ಲಿ ಗುರುವಿನ ಮಾರ್ಗದರ್ಶನ ಲಭಿಸಿದಾಗ ಮಾತ್ರ ಮನುಷ್ಯನ ಬದುಕು ಸಾರ್ಥಕತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಜೀವನದಲ್ಲಿ ಒಳ್ಳೆÃಯ ಬಧುಕನ್ನು ಕಟ್ಟಿಕೊಳ್ಳುವ ಪ್ರತಿಯೋಬ್ಬರು ಸತ್ಸಂಗ, ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಕೊಂಡಾಗ ಆರೋಗ್ಯವಂತ ಮನುಷ್ಯರಾಗಿ ಉತ್ತಮ ಜೀವನವನ್ನುಉ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ.ಎಸ್.ಕೌಜಲಗಿ ಚಾಮರಸ ವಿರಚಿತ ಪ್ರಭುಲಿಂಗಲೀಲೆ ಕುರಿತು ವಿಷೇಶ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಮಠದ ಮಹಾಂತ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಹೋತನಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟದದೇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಭರತನಾಟ್ಯ ಪ್ರದರ್ಶನ ಕುಮಾರಿ, ಅಕ್ಷತಾ ಬಿಂದಲಗಿ ಅವರಿಂದ ಜರುಗಿತು. ಪ್ರಸಾಧ ಸೇವೆಯನ್ನು ಗುತ್ತಿಗೆದಾರ ಬಿ.ಎಂ.ಪಾಟೀಲ ನೆರವೇರಿಸಿದರು.
ಕಾರ್ಯಕ್ರಮದಲ್ಲಿ: ಗಣ್ಯವರ್ತಕರಾದ ಮೋಹನ ಮೆಣಸಿಕಾಯಿ, ಮಹೇಶ ಸಾಲಿಮಠ ಸೇರಿದಂತೆ ಶ್ರಿÃಮಠದ ಭಕ್ತಾಧಿಗಳು ಇದ್ದರು.
ಕಾರ್ಯಕ್ರಮವನ್ನು ಡಿ.ಎಫ್.ಬಿಂದಲಗಿ ಹಾಗೂ ಸಿ.ವಿ.ಗುತ್ತಲ ನೆರವೇರಿಸಿದರು.

loading...