ಅಂಬೇಡ್ಕರ್ ಸೇನೆಗೆ ಆಯ್ಕೆ

0
25

ಗಂಗಾವತಿ:ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ ಪಿ. ಮೂರ್ತಿ ಮಾರ್ಗದರ್ಶನದಲ್ಲಿ ಅಂಬೇಡ್ಕರ್ ಸೇನೆ ಕೊಪ್ಪಳ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಶನಿವಾರ ಗಂಗಾವತಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನೂತನವಾಗಿ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಫಿರೋಜ್ ಖಾನ್‌ರವರನ್ನು ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷರನ್ನಾಗಿ ತಾರಾ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ
ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿದರು. ಅಂಬೇಡ್ಕರ್ ಸೇನೆ ಪದಾಧಿಕಾರಿಗಳಾದ ಯಮನೂರ, ದುರುಗೇಶ, ಮಂಜುನಾಥ, ಮಹಮ್ಮದ ಪೀರು, ರಾಘು, ಸುದೀಪ್, ಖಾಸಿಂ ಅಲಿ, ವಿರುಪಾಕ್ಷಿ, ಸಂತೋಷ, ಆನಂದ, ಗಫೂರ್‌ಖಾನ್ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...