ಸಮಾಜಮುಖಿ ಕರ‍್ಯಗಳ ಮೂಲಕ ರೋಟರಿ ವಿಶ್ವದ ಗಮನ ಸೆಳೆದಿದೆ-ಬಾಝಿಲ್ ಡಿಸೋಜಾ

0
26

ದಾಂಡೇಲಿ: ಕಳೆದ ೬೩ ವರ್ಷಗಳಿಂದ ವಿಶ್ವದಾದ್ಯಂತ ತನ್ನ ಕ್ಲಬ್ ಗಳನ್ನು ಹೊಂದುವುದರ ಮೂಲಕ ಸಾಕಷ್ಟು ಪರಿಣಾಮಕಾರಿ ಜನಪಯೋಗಿ ಹಾಗೂ ಸಮಾಜಮುಖಿ ಕ್ಲಬ್ ವಿಶ್ವದ ಗಮನ ಸೆಳೆದಿದೆ ಎಂದು ಜಿಲ್ಲೆಯ ರೋಟರಿ ಪೂರ್ವ ಪ್ರಾಂತಪಾಲರಾದ ಬಾಝಿಲ್ ಡಿಸೋಜಾ ಅವರು ನುಡಿದರು.
ಅವರು ಶನಿವಾರ ರಾತ್ರಿ ಸ್ಥಳೀಯ ರೋಟರಿ ಸಭಾ ಭವನದಲ್ಲಿ ನಡೆದ ರೋಟರಿ ಕ್ಲಬಿನ ೬೩ ನೇ ಸಂಸ್ಥಾಪನಾ ದಿನಾಚರಣೆ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆರೋಗ್ಯ, ಶೈಕ್ಷಣಿಕ ಕ್ಷೆÃತ್ರ ಹಾಗೂ ಅಪತ್ತು, ಪ್ರಾಕೃತಿಕ ವಿಕೋಪಗಳಂತಹ ಸಂದರ್ಭದಲ್ಲಿ ರೋಟರಿ ಕ್ಲಬ್ ತನ್ನ ಸೇವೆಯನ್ನು ನೀಡುತ್ತಾ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಯಾಗಿ ಪ್ರಿÃತಿಗೆ ಪಾತ್ರವಾಗಿದೆ. ಹಲವಾರು ವಿನೂತನ ಕರ‍್ಯಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟು ರೋಟರಿ ಕರ‍್ಯ ನಿರ್ವಹಿಸುತ್ತಿರುವುದು ಅಭಿನಂದನೀಯ. ದಾಂಡೇಲಿಯ ರೋಟರಿ ಕ್ಲಬ್ ಹಲವಾರು ಜನಪಯೋಗಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶಿಷ್ಟತೆಯನ್ನು ಮೆರೆದಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಗರದ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿ ಸಮಾಜದ ಅಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಕರ‍್ಯ ನಿರ್ವಹಿಸುತ್ತಿದೆ. ಸಾಮಾಜಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ರೋಟರಿ ಕ್ಲಬ್ ಪರಿಣಾಮಕಾರಿಯಾದ ವೇದಿಕೆಯಾಗಿದೆ. ಕಳೆದ ೬೩ ವರ್ಷಗಳಿಂದ ನಿರಂತರವಾಗಿ ಫಲಪ್ರದಾಯಕ ಕರ‍್ಯಕ್ರಮಗಳನ್ನು ಹಮ್ಮಿಕೊಂಡಿರುವ ಶ್ರೆÃಯಸ್ಸು ರೋಟರಿ ಕ್ಲಬ್ ಹೊಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬಿನ ಜಿಲ್ಲಾ ಸಹಾಯಕ ಪ್ರಾಂತಪಾಲೆ ಗೌರಿ.ಕೆ.ಹಿರೇಮಠ ಅವರು ರೋಟರಿ ಕ್ಲಬ್ ಸಮಾಜವನ್ನು ಒಂದು ಕುಟುಂಬವೆಂದು ಭಾವಿಸಿ ಸಮಾಜ ಸೇವೆಯನ್ನು ನೀಡುತ್ತಿದೆ. ಸಂದರ್ಭ ಮತ್ತು ಸಂಕಷ್ಟದಲ್ಲಿ ರೋಟರಿ ಕ್ಲಬ್ ಅಪತ್ಪಾಂದವ ರೀತಿಯಲ್ಲಿ ಕರ‍್ಯ ನಿರ್ವಹಿಸುತ್ತಾ ಬಂದಿದೆ ಎಂದ ಅವರು ದಾಂಡೇಲಿಯ ರೋಟರಿ ಕ್ಲಬಿನ ಕರ‍್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಶ್ರಮಯೋಗಿಗಳನ್ನು ಸನ್ಮಾನಿಸಲಾಯಿತು. ಅಂಗವಿಕಲನಾದರೂ ಸ್ವಾವಲಂಬಿ ಜೀವನ ನಡೆಸುತ್ತಿರುವ ವೆಂಕಟೇಶ, ಹಾವುಗಳನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವ ಸಾಹಸಿ ರಾಜು ನಾಯರ್, ನಗರ ಸಭೆಯ ಪೌರ ಕಾರ್ಮಿಕ ಪುಲ್ಲಯ್ಯ, ಕೆ.ಎಸ್.ಆರ್.ಟಿ.ಸಿ ಘಟಕದ ಚಾಲಕ ಹಾಗೂ ಚಿನ್ನದ ಪದಕ ಪುರಸ್ಕೃತರಾದ ಆರ್.ಜಿ. ಕುಲಕರ್ಣಿ ಮತ್ತು ದಿನೇಶ ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರೋಟರಿ ಕರ‍್ಯದರ್ಶಿ ಎಸ್.ಸೋಮಕುಮಾರ್, ಖಜಾಂಚಿ ಅಶುತೋಷ್ ಕುಮಾರ್ ರಾಯಿ, ರೋಟರಿ ಕ್ಲಬಿನ ರಾಜೇಶ ತಿವಾರಿ, ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಎಸ್.ಪ್ರಕಾಶ ಶೆಟ್ಟಿಯವರು ಸ್ವಾಗತಿಸಿದ ಕರ‍್ಯಕ್ರಮಕ್ಕೆ ರೋಟರಿ ಕರ‍್ಯದರ್ಶಿ ವಂದಿಸಿದರು. ಎಸ್.ಜಿ.ಬಿರಾದಾರ ಅತಿಥಿಗಳನ್ನು ಪರಿಚಯಿಸಿದರು. ಎಚ್.ವೈ.ಮೆಹರವಾಡೆ ಕರ‍್ಯಕ್ರಮ ನಿರೂಪಿಸಿದರು.

loading...