ಸೇವಾ ಸಂಸ್ಥೆಗಳಿಗೆ ಅವಶ್ಯವಿರುವ ಸಮಾಜ ಸೇವಾ ಕಾರ್ಯಗಳಿಂದ ನಿಜವಾದ ಅರ್ಥಸಿಗುತ್ತದೆ : ಡಾ ರವಿ

0
22

ದಾಂಡೇಲಿ : ಲಯನ್ಸ್ ಸಂಸ್ಥೆ ಮಾಡುವ ಸಮಾಜ ಸೇವೆಯ ಕಾರ್ಯಗಳು ಇಂದಿನ ಪರಿಸ್ಥಿಯ ಜನರ ಅವಶ್ಯಕತೆಗಳನ್ನು ಗುರಿತಿಸಿಕೊಂಡು ಹೋಸ ರೂಪ ಹೊಸ ಕಾರ್ಯಯೋಜನೆಗಳೊಂದಿಗೆ ಅನುಷ್ಠಾನಗೊಳ್ಳಬೇಕಾಗಿದೆ ಎಂದು ಲಯನ್ಸ್ ನ ಮಾಜಿ ಜಿಲ್ಲಾ ಪ್ರಾಂತಪಾಲ ಹುಬ್ಬಳ್ಳಿಯ ಡಾ.ರವಿ.ನಾಡಿಗಿರ್ ನುಡಿದರು.
ಅವರು ನಗರದಲ್ಲಿ ಶನಿವಾರ ಡಿಲಕ್ಸ್ ಸಬಾಭವನದಲ್ಲಿ ದಾಂಡೇಲಿ ಲಯನ್ಸ್ ಕ್ಲಬ್ ನ ೨೦೧೯-೨೦೨೦ ಸಾಲಿನ ನೂತನ ಪದಾಧಿಕಾರಗಳ ಪದಗ್ರಹಣ ಕಾರ್ಯ ಕ್ರಮದಲ್ಲಿ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣ ವಚನ ಭೋದಿಸಿ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಅವರು ಜನರಿಗೆ ಅವಶ್ಯವಿರುವ ಪ್ಲಾಸ್ಟಿಕ್ ನಿಷೇದÀ, ವಾಯು ಮಾಲಿನ್ಯತೆ ತಡೆಗಟ್ಟುವಿಕೆ, ಪರಿಸರ ಸಂರಕ್ಷಣೆ, ಸ್ವಚ್ಚತೆ, ಬಹು ವಿಶೇಷತೆಯ ಆಸ್ಪತ್ರೆ ಮತ್ತು ಸೂಕ್ಷö್ಮ ಕೌಶಲ್ಯತೆಗಳಿಗೆ ಮಹತ್ವ ನೀಡುವ ಕಾರ್ಯಕ್ರಮಗಳಿಗೆ ಒತ್ತು ಕೊಟ್ಟು ಕಾರ್ಯನಿರ್ವಹಿಸಿದರೆ ಸೇವಾ ಸಂಸ್ಥೆಗಳ ಸಮಾಜ ಸೇವೆಗೆ ಒಂದು ನಿಜವಾದ ಅರ್ಥ ಸಿಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೇನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗು ಹುಲಿ ಯೋಜನೆಯ ನೀರ್ಧೇಶಕರಾದ ಬಿ.ವಿ.ಪಾಟೀಲ ಮತನಾಡಿ ಸೇವಾ ಕಾರ್ಯದಿಂದ
ಸಮಾಜಕ್ಕೆ ಒಳಿತು ಮಾಡುವದರಿಂದ ಸಿಗುವ ಆನಂದ ಹಾಗೂ ಆತ್ಮ ತೃಪ್ತಿ ನಿಜವಾಗಲು ಶ್ರೆÃಷ್ಟವಾದದ್ದು ಎಂದು ದಾಂಡೇಲಿ ಲಯನ್ಸ್ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಮ್.ಸಿ.ಹಿರೇಮಠ ತಮ್ಮ ಅವಧಿಹಲ್ಲಿ ೫೦೦ ಜನರ ನೇತ್ರದಾನ ಮಾಡುವ ಹಾಗು ಹಲವಾರು ಜನಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದೆಂದರು. ಕಾರ್ಯಕ್ರಮದಲ್ಲಿ ಅಂತರಾಷ್ಟಿÃಯ ಲಯನ್ಸ್ ನ ಪ್ರಶಸ್ಥಿ ಪಡೆದ ಲಯನ್ ಪ್ರಸಾದ ಶಿರಹಟ್ಟಿಯವರನ್ನು ಸತ್ಕರಿಸಲಾಯಿತು.೧೨ ಜನ ಹೊಸ ಸದಸ್ಯರು ದಾಂಡೇಲಿ ಲಯನ್ಸ್ ಸಂಸ್ಥೆಗೆ ಸೇರ್ಪಡೆಗೊಂಡರು.
ಇಸ್ಮಾಯಿಲ್ ಸ್ಯೆಯದ ತಂಗಳ್ ಕಾರ್ಯದರ್ಶಿಯಾಗಿ, ಉದಯಶೆಟ್ಟಿ ಖಜಾಂಚಿಯಾಗಿ ಮತ್ತು ಇತರ ಪದಾಧಿಕಾರಿಗಳು ಅಧಿಕಾರವಹಿಸಿಕೊಂಡರು.
ನಿಕಟ ಪೂರ್ವ ಅಧ್ಯಕ್ಷ ವೈ.ಎನ್ ಮುನವಳ್ಳಿ ಸ್ವಾಗತಿಸಿದರು, ಪ್ರಸಾದ ಶಿರಹಟ್ಟಿ ವರದಿ ವಾಚಿಸಿದರು ಫಭೀನಾ ರುದ್ರಪಾಟಿ ಪ್ರಾರ್ಥಿಸಿದರು.ಯು.ಎಸ್.ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಸಂತೋಷ ಚವ್ಹಾಣ ಹೊಸ ಸದಸ್ಯರನ್ನು ಪರಿಚಯಿಸಿದರು, ಪ್ರಾಣೇಶ ಮುಗಲಿಹಾಳ ನಿರೂಪಿಸಿದರು. ಇಸ್ಮಾಯಿಲ್ ಸ್ಯೆಯದ್ ತಂಗಳ ವಂದಿಸಿದರು.

loading...