ಬಲಿದಾನ ದಿವಸ್ ಆಚರಣೆ

0
14

ನರಗುಂದ: ಅಪ್ರತಿಮ ದೇಶಭಕ್ತ, ಹೋರಾಟದ ಮುಂದಾಳು, ಅಖಂಡ ರಾಷ್ಟç ಚಿಂತನೆ, ಭೋರ್ಗರೆಯುವ ವಾಕ್ ಸಿದ್ದಿಗೆ ಹೆಸರಾಗಿದ್ದ ಜಗನ್ನಾಥರಾವ್ ಜೋಶಿಯವರು ತಮ್ಮ ಸಮಾಜಮುಖಿ ಕಾರ್ಯಗಳಿಂದಲೇ ಕರ್ನಾಟಕದ ಕೇಸರಿ ಎಂಬ ಬಿರುದನ್ನು ಪಡೆದಿದ್ದರು ಎಂದು ಶಾಸಕ ಸಿ.ಸಿ.ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ತಿಳಿಸಿದರು.

ಜಗನ್ನಾಥರಾವ್ ಜೋಶಿ ಅವರ ೯೯ ನೇ ಜನ್ಮ ದಿನಾಚರಣೆ ಹಾಗೂ ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಕಾಶ ಮುಖರ್ಜಿಯವರ ೬೬ ನೇ ಬಲಿದಾನ ದಿನದ ಪ್ರಯುಕ್ತ ಭಾನುವಾರ ಪಟ್ಟಣದ ದಂಡಾಪೂರ ಬಡಾವಣೆಯ ಜೋಶಿ ಸ್ಮಾರಕ ಭವನದ ಮುಖ್ಯ ರಸ್ತೆಗೆ ಜಗನ್ನಾಥರಾವ್ ಜೋಶಿ ರಸ್ತೆ ಹಾಗೂ ವೃತ್ತ ಎಂದು ನಾಮಕರಣಗೊಳಿಸಿ ನಂತರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕೇವಲ ಇಬ್ಬರೇ ಇಬ್ಬರು ಸಂಸದರನ್ನು ಹೊಂದಿದ ಬಿಜೆಪಿ ಪಕ್ಷ ಇಂದು ೩೦೩ ಸಂಸದರ ಸ್ಥಾನಗಳನ್ನು ಗೆಲ್ಲಲು ಜಗನ್ನಾಥರಾವ್ ಜೋಶಿ ಮತ್ತು ಶ್ಯಾಮ್ ಪ್ರಸಾದ ಮುಖರ್ಜಿ ಅವರು ಪಟ್ಟ ಶ್ರಮದ ಪ್ರತಿಫಲವಾಗಿದೆ. ಧರ್ಮ ರಕ್ಷಣೆ, ರಾಷ್ಟಿçÃಯ ಪ್ರೆÃಮವನ್ನು ಜೀವನದೂದ್ದಕ್ಕೂ ಅಳವಡಿಸಿಕೊಂಡಿದ್ದ ಅವರು ಈ ಹಿಂದೆ ಎರಡು ಬಾರಿ ಸಂಸದರಾಗಿ ಹಾಗೂ ರಾಜ್ಯ ಸಭೆಯ ಸದಸ್ಯರಾಗಿ ಸಮರ್ಥವಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದರು. ನಾಡಿನ ಜನರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಅವರಲ್ಲಿ ಸದಾ ಬೇರೂರಿತ್ತು.

ಇನ್ನೂ ಕಾಂಗ್ರೆಸ್ ಪಕ್ಷದ ಸಕ್ರಿÃಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದ ಶ್ಯಾಮ ಪ್ರಕಾಶ ಮುಖರ್ಜಿಯವರು ಕಾಂಗ್ರೆಸ್ಸಿನ ದ್ವಂದ್ವ ನೀತಿಗಳಿಂದ ಕಾಂಗ್ರೆÃಸ್ ಪಕ್ಷದಿಂದ ಹೊರಬಂದು ಜನಸಂಘ ಕಟ್ಟಿದರು. ಅಖಂಡ ಭಾರತದ ದೃಷ್ಟಿಯಿಂದ ಜಮ್ಮ ಕಾಶ್ಮಿÃರದಲ್ಲಿದ್ದ ೩೭೦ ನೇ ವಿಧಿಯನ್ನು ತೆಗೆದು ಹಾಕಲು ಸಾಕಷ್ಟು ಹೋರಾಟಗಳನ್ನು ನಡೆಸಿದ್ದರು. ಭಾರತ ದೇಶದಲ್ಲಿ ಎರಡು ವಿಧಾನಗಳು, ಎರಡು ಪ್ರಧಾನಿಗಳು ಹಾಗೂ ಎರಡು ಧ್ವಜಗಳು ಇರಕೊಡದು ಎಂದು ಪ್ರತಿಪಾದಿಸಿದ್ದರು. ತಮ್ಮ ಜೀವಿತ ಅವಧಿಯಲ್ಲಿ ಈ ಇಬ್ಬರು ನಾಯಕರು ದೇಶದ ಅಭಿವೃದ್ದಿಗಾಗಿ ಹೆಚ್ಚಿನ ಶ್ರಮವಹಿಸಿದ್ದರು. ಆದ್ದರಿಂದ ಇಂದಿನ ಯುವಕರಾದ ನಾವೆಲ್ಲ ಅವರ ಜೀವನದ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಮುಖಂಡ ಚಂದ್ರು ದಂಡಿನ, ಎಪಿಎಂಸಿ ಮಾಜಿ ಅದ್ಯಕ್ಷ ಎನ್.ವ್ಹಿ.ಮೇಟಿ, ಚಂದ್ರು ಪವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಎ.ಎಂ.ಹುಡೇದ, ಎಪಿಎಂಸಿ ಅಧ್ಯಕ್ಷ ಹನುಮಂತ ಹದಗಲ್, ಪುರಸಭೆ ಸದಸ್ಯರಾದ ಸುನೀಲ ಕುಷ್ಟಗಿ, ಮಹೇಶ ಬೋಳಶೆಟ್ಟಿ, ಬಿಜೆಪಿ ನಾಯಕರಾದ ಶಿವಾನಂದ ಮುತವಾಡ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಬಿ.ಬಿ.ಐನಾಪೂರ, ಬಸ್ಸು ಪಾಟೀಲ, ರಾಚನಗೌಡ ಪಾಟೀಲ, ಹುಸೇನಸಾಬ ಗೋಟುರ, ಮಂಜು ಮೆಣಸಗಿ, ಚನ್ನಪ್ಪ ಮಾವಿನಕಟ್ಟಿ, ವಿಠಲ ಹವಾಲ್ದಾರ, ಹನಮಂತ ಹವಾಲ್ದಾರ, ಪ್ರಶಾಂತ ಜೋಶಿ, ಸಿದ್ದಪ್ಪ ಯಲಿಗಾರ, ಸಿದ್ದೆÃಶ ಹೂಗಾರ, ಮಹೇಶ ಹಟ್ಟಿ ಅನೇಕರು ಉಪಸ್ಥಿತರಿದ್ದರು. ಅಜ್ಜುಗೌಡ ಪಾಟೀಲ ನಿರ್ವಹಿಸಿದರು.

loading...