ಗಡಿನಾಡ ಬೆಳಗಾವಿಯಲ್ಲಿ ಮತ್ತಷ್ಟು ಕನ್ನಡದ ಕಂಪು ಪಸರಿಸಲಿ

0
80

ಬೆಳಗಾವಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಡಗಾವಿಯ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದ ವೇಣುಗ್ರಾಮ ವೇದಿಕೆಯಲ್ಲಿ ಬೆಳಗಾವಿ ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಶಿವಶಂಕರ ಹಿರೇಮಠ ಅವರ ಕನ್ನಡಾಭಿಮಾನದ ಬಗ್ಗೆ ಕನ್ನಡಮ್ಮ ಪತ್ರಿಕೆ ವರದಿಗಾರ ಮಾಲತೇಶ ಮಟಿಗೇರ ನಡೆಸಿದ ಸಮಗ್ರ ಸಂದರ್ಶನ.

೧) ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿರುವುದಕ್ಕೆ ಹೇಗನಿಸುತ್ತಿದೆ?

-ಬೆಳಗಾವಿ ಕನ್ನಡ ಹಾಗೂ ಮರಾಠಿ ಭಾಷಿಕರನ್ನು ಒಳಗೊಂಡಿದೆ. ಆದರೆ ಇಲ್ಲಿನ ಕೆಲ ಎಂಇಎಸ್ ಮುಖಂಡರುಗಳು ಬೆಳಗಾವಿಯನ್ನು ಮಹಾರಾಷ್ಟçಕ್ಕೆ ಸೇರಿಸಬೇಕೆಂಬ ಮೊಂಡು ವಾದವನ್ನು ಮಂಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮಿತಿಯು ತಾಲೂಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸಮಿತಿಗೆ ಧನ್ಯವಾದಗಳು. ಸಮ್ಮೇಳನದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷ ತಂದಿದೆ. ಕನ್ನಡದಲ್ಲಿ ಬೆಳಗಾವಿಯ ಪಾತ್ರವೇನು, ಕನ್ನಡ ಕಟ್ಟುವಲ್ಲಿ ಪಾತ್ರದ ಬಗ್ಗೆ ತಿಳಿಸಲು ಸಹ ಒಂದು ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಪೂಣ್ಯ.

೨) ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕಟ್ಟುವಲ್ಲಿ ಯುವಕರ ಪಾತ್ರ ಏನು ?

ಇತ್ತಿಚಿನ ದಿನಮಾನಗಳಲ್ಲಿ ಯುವ ಸಮುದಾಯ ಸಾಮಾಜಿಕ ಜಾಲತಾಣವನ್ನು ಸಕ್ರಿಯರಾಗಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರ ಶ್ರಮಿಸಬೇಕಿದೆ. ಕ್ಷಣಾರ್ಧದಲ್ಲಿ ಕನ್ನಡದ ಮಾಹಿತಿ ಎಲ್ಲವೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಗುವಂತಾಗಬೇಕು. ಕನ್ನಡ ಮಾಹಿತಿ ಪಡೆದು ಇನ್ನೊಬ್ಬರಿಗೆ ಕನ್ನಡ ಭಾಷೆ, ಸಂಸ್ಕೃತಿ ತಿಳಿಸಬೇಕಾಗಿದೆ. ನಾನು ಸಹ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣ ಬಳಕೆಯಿಂದ ದೂರವಿದ್ದೇನೆ. ಅದರಲ್ಲಿ ಪರಿಣಿತಿ ಇಲ್ಲ. ಯುವಕರು ಸಹ ಕನ್ನಡದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕನ್ನಡವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕಾಗಿದೆ. ಸಂಘಟಕರು ಯುವ ಸಮುದಾಯಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬೆಳೆಸಲು ಸಹಾಯ ಮಾಡಬೇಕು.

೩) ಕನ್ನಡ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಹೇಗಿದೆ ?

ಕನ್ನಡ ಮಾಧ್ಯಮ ಮೊದಲಿಗಿಂತಲೂ ವೈಚಾರಿಕವಾಗಿ ಬೆಳೆಯುತ್ತಿದೆ. ಕನ್ನಡ ಪತ್ರಿಕೆ, ಕನ್ನಡ ಮನಸ್ಸುಗಳಿಂದ ವಿಶಾಲವಾಗುತ್ತಿದೆ. ಕನ್ನಡ ಅಭಿಮಾನ ಮೊದಲಿಗಿಂತ ಈಗ ಹೆಚ್ಚು ಆಳವಾಗಿ ಬೇರುತ್ತಿದೆ. ಪತ್ರಿಕೆಗಳು ಓದುಗರ ದೃಷ್ಠಿಕೋನ, ಓರೆ, ಕೋರೆ ಅಭಿಲಾಶಯಗಳನ್ನು ಪೂರೈಸುತ್ತಿವೆ. ದೃಷ್ಯ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಮುದ್ರಣ ಮಾಧ್ಯಮದಲ್ಲಿ ಕನ್ನಡ ಭಾಷೆ ಬೆಳೆಸುವಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ.

೪) ಗಡಿನಾಡ ಬೆಳಗಾವಿಯಲ್ಲಿ ಭಾಷಾ ಸಾಮರಸ್ಯದ ಕೆಲಸ ಹೇಗಾಗಬೇಕು ?

ನಾನು ಬೆಳಗಾವಿಯಲ್ಲಿ ದಶಕಗಳಿಂದ ವಾಸವಾಗಿದ್ದೆನೆ. ಹಿಂದೆ ಕನ್ನಡ ಮರಾಠಿ ಎಂಬ ಭಾಷಾ ತಾರತಮ್ಯವಿರಲಿಲ್ಲ. ಕರ್ನಾಟಕ ರಾಜ್ಯ ವಿಂಗಡನೆಯಾದ ಬಳಿಕ ಮರಾಠಿಗರಿಗೆ ಸಹಜವಾಗಿ ಮಹಾರಾಷ್ಟ್ರ ಕಡೆ ಒಲವು ಹೆಚ್ಚಾಗಿತ್ತು. ಅಂದಿನಿಂದ ಭಾಷೆಯ ವಿವಾದದ ಬಗ್ಗೆ ಹೆಚ್ಚು ಕೇಳಿ ಬರುತ್ತಿತ್ತು. ಆದರೆ ಈಗ ಆ ಸ್ಥಿತಿ ಇಲ್ಲದಾಗಿದೆ. ಗ್ರಾಮೀಣದಲ್ಲಿ ಕನ್ನಡ-ಮರಾಠಿಗರು ಕೂಡಿಕೊಂಡು, ಸಹೋದರಂತೆ ಬದುಕುತ್ತಿದ್ದಾರೆ. ಎರಡು ಭಾಷೆಗೆ ಸಮಾನತೆ ಪ್ರಾತಿನಿಧ್ಯ ನೀಡಬೇಕು ಅಂದಾಗ ಕನ್ನಡ ಮರಾಠಿ ಬೇಸುಗೆಯಿಂದ ಇರಲು ಸಾಧ್ಯ.

೫) ಇಂಗ್ಲಿಷ್ ಪ್ರಭಾವದಲ್ಲಿ ಕನ್ನಡ ಉಳಿಯುವಿಕೆಗೆ ಏನು ಮಾಡಬೇಕಾಗಿದೆ..?

ಭಾಷೆಯನ್ನು ವೈಚಾರಿಕವಾಗಿ ಬಳಸಿದಾಗ ಮಾತ್ರ ವಿಚಾರ ಪ್ರಾಣಿಯಾಗಲು ಸಾಧ್ಯ. ಪ್ರತಿಯೊಬ್ಬರು ಸಹ ಮಾತೃ ಭಾಷೆಯನ್ನೇ ಮೊದಲು ಕಲಿತುಕೊಳ್ಳಬೇಕು. ನಂತರ ದಿನಗಳಲ್ಲಿ ವಿವಿಧ ಭಾಷೆಗಳನ್ನು ಕಲಿಯಬೇಕು.ಕಲಿತ ಭಾಷೆಗಳು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಬೇಕು. ಅದೇ ನಮ್ಮ ಮಾತೃ ಭಾಷೆಯಾಗಬಾರದು.

೬) ಕನ್ನಡ ಶಾಲೆಯಲ್ಲಿ ಕಲಿತವರಿಗೆ ಉದ್ಯೋಗ ದೊರೆಯುವುದು ವೀರಳ ಎಂಬ ಮಾತಿದೆ ?

ರಷ್ಯಾದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ರಷ್ಯಾ ಭಾಷೆ ಕಲಿಯಲು ಅವಕಾಶ ನೀಡುತ್ತಿದ್ದರು.ಮೂರು ತಿಂಗಳಲ್ಲಿ ರಷ್ಯಾ ಭಾಷೆ ಕಲಿಯುತ್ತಾರೆ. ಅದೇ ರೀತಿ ಯುವಕರು ಸಹ ಕನ್ನಡದಲ್ಲಿ ಶಿಕ್ಷಣ ಪಡೆದರು ಸಹ ಮುಂದೆ ಅವಶ್ಯವೆನಿಸಿದರೆ ಇಂಗ್ಲಿಷ್ ಭಾಷೆ ಕಲಿತು. ಉದ್ಯೋಗ ಕೊಡುವವರು ಏನ ಭಯಸುತ್ತಾರೋ ಹಾಗೇ ಉದ್ಯೋಗಕ್ಕೆ ತಕ್ಕಂತೆ ತಾವು ಸ್ವಲ್ಪ ಮಟ್ಟಿಗೆ ಬದಲಾಗಬೇಕು. ಆದರೆ ಕನ್ನಡವನ್ನು ಕಡೆಗಣಿಸಬಾರದು.

೭) ಕನ್ನಡಿಗರಿಗೆ ಹಾಗೂ ಅಭಿಮಾನಿಗಳಿಗೆ ನಿಮ್ಮ ಸಂದೇಶ ಏನು ?

ಮಾನವೀಯ ಸಂಬಂಧಗಳಿಗೆ ಬಹಳ ಮಹತ್ವವಿದೆ. ಭಾಷೆಗಳ ಮುಖಾಂತರ ಮಾನವೀಯತೆಯನ್ನು ಬೆಳೆಸಿಕೊಳ್ಳಲು ಹೊರಟಿದ್ದೆವೆ. ಆದರೆ ಭಾಷೆಯಿಂದ ಮಾನವೀಯತೆ ಸಂಬಂಧಗಳು ಉಳಿಯುವುದಿಲ್ಲ. ಭಾಷೆ ತಿಳಿದುಕೊಳ್ಳಲು ಸುಲಭ ಮಾಧ್ಯಮ. ಯಾವುದೇ ಭಾಷೆ ತಮಗೆ ಸುಲಭವಾದರೆ ಆ ಭಾಷೆ ಮಾತನಾಡಬೇಕು. ವೈವಹಾರಿಕ ಹಾಗೂ ಮಾನವೀಯ ಸಂಬಂಧ ಕೂಡಿಕೊಂಡು ಹೋದರೆ ಒಳ್ಳೆಯದು.

loading...