ಯುಪಿ ವಿಧಾನಸಭಾ ಉಪಚುನಾವಣೆ:  ಗೆಲುವಿಗೆ ಸಜ್ಜಾದ ಬಿಜೆಪಿ

0
32

ಲಕ್ನೋ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ದಾಖಲೆ ನಿರ್ಮಿಸಿದ್ದ ಬಿಜೆಪಿ ಈಗ ಖಾಲಿಯಾಗಿರುವ ಎಲ್ಲಾ 12 ವಿಧಾನಸಭಾ ಸ್ಥಾನಗಳನ್ನು ತನ್ನ  ತೆಕ್ಕೆಗೆ ಹಾಕಿಕೊಳ್ಳಲು  ಸಜ್ಜಾಗಿ ಪ್ರಯತ್ನ ತೀವ್ರಗೊಳಿಸಿದೆ.
ಈ 12 ಸ್ಥಾನಗಳಲ್ಲಿ   ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಕ್ಕೆ ಎರಡು ಸ್ಥಾನ ಸೇರಿದ್ದರೆ ಉಳಿದವು  ಜೆಪಿಗೆ ಸೇರಿವೆ.
ಭಾನುವಾರ ರಾತ್ರಿ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಈ ಪ್ರತಿಯೊಂದು ವಿಧಾನಸಭಾ ಸ್ಥಾನಗಳಿಗೆ  ರಾಜ್ಯ ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ, ಅವರು ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಮತ್ತು ಇತರ ವಿಷಯಗಳ ಬಗ್ಗೆ ಗಮನಹರಿಸಲಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಯುಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಸುನಿಲ್ ಬನ್ಸಾಲ್ ಮತ್ತು ಹಲವಾರು ಮುಖಂಡರು ಭಾಗವಹಿಸಿದ್ದರು.
ಈ 12 ವಿಧಾನಸಭಾ ವ್ಯಾಪ್ತಿಯಲ್ಲಿ  ಜಾತಿ ಸಮೀಕರಣವನ್ನು ಕೇಂದ್ರೀಕರಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಮತ್ತು ಬೂತ್ ನಿರ್ವಹಣೆ  ತ್ವರಿತಗೊಳಿಸಲು ಸಭೆ ನಿರ್ಧರಿಸಿದೆ ಎಂದು ಬಿಜೆಪಿ ಮೂಲಗಳು ಸೋಮವಾರ ತಿಳಿಸಿವೆ.
ಸಭೆಯಲ್ಲಿ ಉಪಚುನಾವಣೆ ನಡೆಯುವ ಜಿಲ್ಲೆಗಳ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಸಭೆಯಲ್ಲಿನ ತೀರ್ಮಾನದ ಪ್ರಕಾರ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಯುಪಿ ಬಿಜೆಪಿ ಉಪಾಧ್ಯಕ್ಷ ರಂಜನಾ ಉಪಾಧ್ಯಾ ಅವರನ್ನು ಗೋವಿಂದನಗರ (ಕಾನ್ಪುರ) ವಿಧಾನಸಭಾ ವಿಭಾಗದ ಉಸ್ತುವಾರಿಯಾಗಿ  ವಹಿಸಲಾಗಿದೆ, ಮತ್ತೊಬ್ಬ ಉಪಮುಖ್ಯಮಂತ್ರಿ ಡಾ. ದಿನೇಶ್ ಶರ್ಮಾ ಮತ್ತು ರಾಜ್ಯ ಸಚಿವ ದೇವಂದ್ರ ಚೌಧರಿ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಮತ್ತು ತುಂಡ್ಲಾ (ಫಿರೋಜಾಬಾದ್)  ಉಪಾಧ್ಯಕ್ಷ ಬಿ.ಎಲ್.ವರ್ಮಾ, ಪಂಚಾಯತಿರಾಜ್ ಸಚಿವ ಚೌಧರಿ ಭೂಪೇಂದ್ರ ಸಿಂಗ್ ಮತ್ತು ಗಂಗೋಹ್ (ಸಹರಾನ್ಪುರ್)  ಬಿಜೆಪಿ ಕಾರ್ಯದರ್ಶಿ ವೈ.ಪಿ.ಸಿಂಗ್, ಸಕ್ಕರೆ ಅಭಿವೃದ್ಧಿ ಸಚಿವ ಸುರೇಶ್ ರಾಣಾ ಮತ್ತು ಬಿಜೆಪಿ ಉಪಾಧ್ಯಕ್ಷ ಪುರ್ಷೋತ್ತಂ ಖಂಡೇಲ್ವಾಲ್ , ಗ್ರಾಮೀಣಾಭಿವೃದ್ಧಿ ಸಚಿವ ಡಾ.ಮಹೇಂದ್ರ ಸಿಂಗ್ ಮತ್ತು ಬಿಜೆಪಿ ಕಾರ್ಯದರ್ಶಿ ಮಣಿಕ್ಪುರದ (ಚಿತ್ರಕೂತ್), ರಾಜ್ಯ ಸಚಿವ ರಾಘವೇಂದ್ರ ಪ್ರತಾಪ್ ಸಿಂಗ್ ಧುನ್ನಿ ಮತ್ತು ಹಮೀರಪುರ ವಿಧಾನಸಭಾ ವಿಭಾಗದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕಟಾರಿಯಾ.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಮತ್ತು ಲಕ್ನೋ ಕಂಟೋನ್ಮೆಂಟ್ ಅಸೆಂಬ್ಲಿ ವಿಭಾಗದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್ ಸೋಂಕರ್, ಅರಣ್ಯ ಸಚಿವ ದಾರಾ ಸಿಂಗ್ ಚೌಹಾನ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೈದ್ಪುರದ (ಬರಾಬಂಕಿ) ಗೋವಿಂದ್ ನರೈನ್ ಶುಕ್ಲಾ, ಕಾನೂನು ಸಚಿವ ಬ್ರಜೇಶ್ ಪಾಠಕ್ ಮತ್ತು ಜಲಾಲೆಬಾರ್‌ನ ಬಿಜೆಪಿ ಸಚಿವ ಸಂತೋಷ್ ( ಮತ್ತು ಸಮಾಜ ಕಲ್ಯಾಣ ಸಚಿವ ರಾಂಪತಿ ರಾಮ್ ಶಾಸ್ತ್ರಿ, ರಾಜ್ಯ ಸಚಿವ ಉಪೇಂದ್ರ ತಿವಾರಿ ಮತ್ತು ಇನ್ನೊಬ್ಬ ರಾಜ್ಯ ಸಚಿವ ಅನುಪ್ ಗುಪ್ತಾ ಅವರನ್ನು ಬಲ್ಹಾ (ಬಹ್ರಿಯಾಚ್) ವಿಧಾನಸಭೆ ವಿಭಾಗದ ಉಸ್ತುವಾರಿ ಮತ್ತು ರಾಜ್ಯ ಸಾರಿಗೆ ಸಚಿವ ಸ್ವತಂತ್ರದೇವ್ ಸಿಂಗ್ ಮತ್ತು ಪ್ರತಾಪಗಡದ ಬಿಜೆಪಿ ಕಾರ್ಯದರ್ಶಿ ತ್ರಿಬಯಂಕ್ ತ್ರಿಪಾಠಿ ಅವರನ್ನು ನೇಮಿಸಲಾಯಿತು.
ಬಿಜೆಪಿ ಸದಸ್ಯ ಅಶೋಕ್ ಸಿಂಗ್ ಚಾಂಡೆಲ್ ಅವರ ಕೊಲೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶಿಕ್ಷೆಗೊಳಪಡಿಸಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಹಮೀರ್‌ಪುರದ ವಿಧಾನಸಭಾ ಸ್ಥಾನ ತರವಾಗಿದೆ.   ಹಲವು ಮುಖಂಡರು ಲೋಕಸಭೆಗೆ ಆಯ್ಕೆಯಾದ  ನಂತರ ವಿಧಾನಸಭಾ ಸ್ಥಾನಗಳು ತೆರವಾಗಿದ್ದು,  ಮತ್ತೆ ಕೆಲವು  ಸದಸ್ಯರು ರಾಜೀನಾಮೆ ನೀಡಿದ್ದು,  ಹೀಗಾಗಿ 12 ಕ್ಷೇತ್ರಗಳಿಗೆ ಈಗ ಉಪ ಚುನಾವಣೆ ನಡೆಯಬೇಕಿದೆ.

loading...