ಅದ್ಧೂರಿಯಾಗಿ ನಡೆದ ಖಾದರಲಿಂಗ ದೇವರ ಉರುಸ್

0
98

ಮುಂಡಗೋಡ: ಸರ್ವಧರ್ಮ ಭಾವೈಕ್ಯತೆ ಸಾರುವ ಪಟ್ಟಣದ ಖಾದರಲಿಂಗ ದೇವರ ಉರುಸ್ ಸರ್ವಧರ್ಮಿಯರ ಅದ್ಧೂರಿಯಾಗಿ ನಡೆಯಿತು.
ಶನಿವಾರ ರಾತ್ರಿ ದೇವರ ಪೂಜಾ ಕೈಂಕರ್ಯಗಳು ನಡೆದವು. ಖಾದರಲಿಂಗ ದೇವರ ವಂಶಸ್ಥರಾದ ಹಜರತ್ ಖ್ವಾಜಾ ಸಯ್ಯದ ಶಾ ಸಾಹೇಬ ಪೀರ್ ಮಹ್ಮದ ಮಹ್ಮದುಲ್ ಹುಸೇನಿ ಚಿಸ್ತಿವುಲ್ ಖಾದರಿ ಲಿಂಗ ಬಂದ್ ಜಗದ್ಗುರು ಜಾಗೀರದಾರ ಉರ್ಫ್ ಖಾದರಲಿಂಗ ಜಗದ್ಗುರು ಲಿಂಗ ಬಂದ್ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಧೋನಿ ತಾಲೂಕಿನ ಕೌತಾಳಂ ಗ್ರಾಮ ದಿಂದ ಆಗಮಿಸಿದ್ದರು ಖಾದರಲಿಂಗ ದೇವರ ಎಲ್ಲ ಪೂಜಾ ಕಾರ್ಯಗಳು ಅವರ ಸಮ್ಮುಖದಲ್ಲಿ ನಡೆದವು. ಭಕ್ತರು ಆಗಮಿಸಿ ಖಾದರಲಿಂಗ ದೇವರಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು ಹಾಗೂ ಖಾದರಲಿಂಗ್ ವಂಶಸ್ಥರಿಂದ ಆಶೀರ್ವಾದ ಪಡೆಯಲು ಭಕ್ತರ ದಂಡೇ ಆಗಮಿಸಿತ್ತು. ಭಕ್ತರು ತಮ್ಮ ಕಷ್ಟವನ್ನು ನಿವೇದಿಸಿಕೊಂಡು ಆಶೀರ್ವಾದ ಪಡೆದರು ಕಷ್ಟವನ್ನು ನಿವೇದಿಕೊಂಡವರಿಗೆ ಕಷ್ಟವನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ತೋರಿಸಿ ಆಶೀರ್ವದಿಸಿದರು ಟ್ರಸ್ಟ್ ಅಧ್ಯಕ್ಷ ಮುಸ್ತಾಕ ಹರಿಹರಕರ ಹಾಗೂ ಎಲ್ಲ ಸದಸ್ಯರು ದೈವಿ ಕಾರ್ಯಗಳಲ್ಲಿ ಭಾಗವಹಿಸಿ ಭಕ್ತರಿಂದ ಸೈ ಎನಿಸಿಕೊಂಡರು.

ಸರ್ವಧರ್ಮಿಯರು, ಪೊಲೀಸರು ದೇವರ ಎಲ್ಲ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಪ್ರಾರ್ಥನೆ ಮುಗಿಸಿದ ನಂತರ ಖಾದರಲಿಂಗ ದರ್ಗಾ ಆವರಣದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ದೇವರ ಪ್ರಸಾದ ಸ್ವಿÃಕರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವರ ಕೆಲಸದಲ್ಲಿ ಅಬಾದಿತವಾಗಿ ನಡೆಯಲು ಟ್ರಸ್ಟ್ ಅಧ್ಯಕ್ಷ ಹಾಗೂ ಸದಸ್ಯರು, ಸಾರ್ವಜನಿಕರು ಕೈಜೋಡಿಸಿದರು.

loading...