ಬಸ್ ಇಲ್ಲದೇ ಶಾಲಾ ಮಕ್ಕಳ ಪರದಾಟ

0
44

ಜೋಯಿಡಾ: ತಾಲೂಕಿನ ರಾಮನಗರ ಜಿ,ಪಂ ಕ್ಷೆÃತ್ರದ ತಿನೈಘಾಟ ಬಳಿ ಬೆಳಿಗ್ಗೆ ಸಮಯದಲ್ಲಿ ಮಕ್ಕಳು ಬಸ್ ಇಲ್ಲದೇ ಇದ್ದ ಬಸ್ ಅನ್ನೆÃ ಎರಲು ಹರಸಾಹಸ ಪಡುತ್ತಿರುವ ದೃಶ್ಯ ಸೋಮವಾರ ಬೆಳಿಗ್ಗೆ ಕಂಡು ಬಂದಿತು,
ರಾಮನಗರ – ಗೋವಾ ರಾಷ್ಟಿçÃಯ ಹೆದ್ದಾರಿ ಕಾರ್ಯ ಪ್ರಾರಂಬವಾದಗಿನಿಂದಲೂ ಇಲ್ಲಿಯ ಜನರು ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ, ಅನಮೋಡದಿಂದ ರಾಮನಗರಕ್ಕೆ ಇದ್ದ ಬೆಳಗಿನ ಸಮಯದ ಬಸ್ಸ ಅನ್ನು ಕಡಿತಗೊಳಿಸಲಾಗಿದ್ದು, ಇದರಿಂದ ಶಾಲಾ ಕಾಲೇಜು ಮಕ್ಕಳಿಗೆ ತೀರಾ ತೊಂದರೆ ಉಂಟಾಗಿದೆ, ಮಕ್ಕಳು ಸಾಹಸ ಮಾಡಿ ಬಸ್ಸ ಎರುವಂತಾದರು ಇಲ್ಲಿನ ಜನಪ್ರತಿನಿಧಿಗಳು ಮತ್ತು ರಾಜನಕೀಯ ವ್ಯೆಕ್ತಿಗಳು ಮಾತ್ರ ಸುಮ್ಮನೇ ಕುಳಿತಿರುವುದು ಸಾರ್ವಜನಿಕರ ಕೆಂಗಣಿಗೆ ಗುರಿಯಾಗಿದೆ,

ಅನಮೋಡದಿಂದ ರಾಮನಗರಕ್ಕೆ ಮೊದಲು ೩ ಬಸ್ ಬಿಡಲಾಗುತ್ತಿತ್ತು. ಆದರೆ ಈಗ ಒಂದೇ ಬಸ್ಸ ಬಿಡಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಬಹಳಷ್ಟು ತೊಂದರೆ ಎದುರಿಸುವಂತಾಗಿದೆ, ಹಲವಾರು ಮಕ್ಕಳು ತುಂಬಿದ ಬಸ್ ಎರಲಾಗದೇ ಮನೆಗೆ ತೆರಳಿದ ದೃಶ್ಯ ಕಂಡು ಬಂದಿತು. ಇದ್ದ ಒಂದು ಬಸ್ ಕೂಡಾ ಚಿಕ್ಕ ಬಸ್ಸ ಆಗಿದ್ದು ಇದರಲ್ಲಿ ಜಾಸ್ತಿ ಜನರು ಹೋಗಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಜಿಪಂ ಸದಸ್ಯರ ನಿರ್ಲಕ್ಷö್ಯ: ಹೆಚ್ಚುವರಿ ಬಸ್ ಬಿಡುವಂತೆ ಮಾಡುವುದಾಗಿ ತಿಳಿಸಿದ ಇಲ್ಲಿನ ಜಿ,ಪಂ,ಸದಸ್ಯ ಸಂಜಯ ಹಣಬರ ವಾರಗಳೇ ಕಳೆದರು ಈ ಬಗ್ಗೆ ಲಕ್ಷವೇ ವಹಿಸಿಲ್ಲ ಎನ್ನುವುದು ಇಲ್ಲಿನ ಜನರ ವಾದ, ಮಕ್ಕಳಿಗೆ ಶಾಲೆ ತಪ್ಪುವಂತಾದರು ಜಿ,ಪಂ ಸದಸ್ಯರು ಮಾತ್ರ ಬಸ್ ಬಗ್ಗೆ ಏನು ಕ್ರಮವೇ ಕೈಗೊಳ್ಳುತ್ತಿಲ್ಲ. ತಿನೈಘಾಟನವರೇ ಆದ ಇವರು ಜಿಪಂಸದಸ್ಯರಾಗಿದ್ದಿದ್ದು ವ್ಯರ್ಥ ಎನ್ನುವ ಮಾತು ಇಲ್ಲಿನ ಕೆಲ ಸಾರ್ವಜನಿಕರಿಂದ ಕೇಳಿ ಬಂತು.

ದಿನವೂ ಬೆಳಗಿನ ಸಮಯದಲ್ಲಿ ೨ ಬಸ್ ಇತ್ತು ಆದರೆ ಕೆಲ ದಿನಗಳಿಂದ ಬಂದೇ ಬಸ್ಸ ಬಿಡುತ್ತಿದ್ದು ಇದರಿಂದ ಇಲ್ಲಿನ ಶಾಲಾ ಕಾಲೇಜು ಮಕ್ಕಳಿಗೆ ತೊಂದರೆ ಎದುರಿಸುವಂತಾಗಿದೆ. ಕೂಡಲೇ ಸಂಬಂಧÀಪಟ್ಟವರು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮಕ್ಕಳ ಶಿಕ್ಷಣ ಹಾಳಾಗುತ್ತದೆ.
ವೆಂಕಟೇಶ ಹಣಬರ

ತಿನೈಘಾಟ ಸ್ಥಳೀಯ

loading...