ಮೂಲಭೂತ ಸೌಕರ್ಯಕ್ಕೆ ಶಾಸಕರ ನಿಧಿಯಿಂದ ೭ಲಕ್ಷ ರೂ. ನೀಡುವೆ: ಶಾಸಕ ಶಿವರಾಮ

0
12

ಮುಂಡಗೋಡ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿ.ಸಿ ಕ್ಯಾಮೆರಾ ಅಳವಡಿಕೆ, ಗಣಕ ಯಂತ್ರ ಖರೀದಿ ಸೇರಿದಂತೆ ಕಾಲೇಜಿನ ಮೂಲಭೂತ ಸೌಕರ್ಯಕ್ಕೆ ಶಾಸಕರ ನಿಧಿಯಿಂದ ೭ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜು ಹಾಗೂ ವಿದ್ಯಾರ್ಥಿಗಳ ಕುಂದು ಕೊರತೆಗಳ ಬಗ್ಗೆ ಸಭೆ ನಡೆಯಿತು. ಈ ವೇಳೆಯಲ್ಲಿ ಪ್ರಾಂಶುಪಾಲೆ ಇಂದಿರಾ ಬಾಗಲಕೋಟ ಕಾಲೇಜಿನ ಕುಂದು ಕೊರತೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಅಗತ್ಯ ಮೂಲಭೂತ ಸೌಕರ್ಯಕ್ಕಾಗಿ ತಮ್ಮಿಂದ ಸಾದ್ಯವಾಗುವ ಎಲ್ಲ ನೆರವು ನೀಡುವುದಾಗಿ ಹೇಳಿದ ಶಾಸಕರು, ಮಕ್ಕಳ ಬವಿಷ್ಯದ ಹಿತದೃಷ್ಟಿಯಿಂದ ಏನೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತಂದಲ್ಲಿ ಅದಕ್ಕೆ ತಕ್ಷಣದಲ್ಲಿ ಸ್ಪಂದಿಸಿ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ಯಾವತ್ತೂ ಬದ್ದ ಎಂದು ಬರವಸೆ ನೀಡಿದರು. ಜಿ.ಪಂ ಸದಸ್ಯ ರವಿಗೌಡ ಪಾಟೀಲ, ತಾ.ಪಂ ಸದಸ್ಯ ಗಣಪತಿ ವಡ್ಡರ, ಕಾಲೇಜು ಅಭಿವೃದ್ದಿ ಸಮಿತಿ ನಿರ್ದೇಶಕ ಕೆ.ಸಿ ಥಾಮಸ, ಮಂಜುನಾಥ ಕಟಗಿ, ಫಕ್ಕಿÃರಸ್ವಾಮಿ ಗುಲ್ಯಾನವರ ಮುಂತಾದವರು ಉಪಸ್ಥಿತರಿದ್ದರು.

loading...