ಡಿಗ್ಗಿ ಆಸ್ಪತ್ರೆ ಕಟ್ಟಡಕ್ಕೆ ವೈದ್ಯಾಧಿಕಾರಿಗಳೇ ರೋಗಿಗಳ ಪರದಾಟ

0
21

ಜೋಯಿಡಾ: ಯುವ ಬ್ರಿಗೆಡ್ ಸಂಸ್ಥಾಪಕ, ತಮ್ಮ ವಾಕ್ಚಾತುರ್ಯದಿಂದ ದೇಶದ ಯುವಕರಲ್ಲಿ ರಾಷ್ಟಾçಭಿಮಾನವನ್ನು ಬಿತ್ತುವ ಮೂಲಕ ಯುವಕರ ಮನಸ್ಸನ್ನು ಗೆದ್ದ ಅಪ್ರತಿಮ ದೇಶಾಭಿಮಾನಿ ಚಕ್ರವರ್ತಿ ಸೂಲಿಬೆಲೆ ಇತ್ತಿಚೆಗೆ ಜೋಯಿಡಾ ತಾಲೂಕಿನ ಕುಗ್ರಾಮ ಡಿಗ್ಗಿ ಭಾಗಕ್ಕೆ ಭೇಟಿ ನೀಡಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಡಿಗ್ಗಿ ಭಾಗದ ಬೊಂಡೇಲಿ, ಡಿಗ್ಗಿ, ಶಿಶೈ,ದೂದಮಾಳಾ, ಮುಂತಾದ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಬೇಸರವ್ಯಕ್ತಿಪಡಿಸುತ್ತಾ, ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಜೊತೆಗಾರರೊಂದಿಗೆ ಹಂಚಿಕೊಳ್ಳುತ್ತಾ, ಜೋಯಿಡಾ ತಾಲೂಕು ಹಿಂದುಳಿದಿದೆ ಎಂದು ತಾನು ತಿಳಿದಿದ್ದೆ, ನಿಜ ಆದರೆ, ಮೂಲಸೌಕರ್ಯವೇ ಇಲ್ಲದೆ, ವೈದ್ಯಾಧಿಕಾರಿಗಳೂ ಇಲ್ಲದೇ ಇಷ್ಟೊಂದು ದುಸ್ಥರವಾಗಿ ಈ ದುರ್ಗಮ ಕಾಡಿನಲ್ಲಿ ಬದುಕುತ್ತಿದ್ದಾರೆನ್ನುವುದನ್ನು ನಾನು ಅರಿತಿಲ್ಲ ಎನ್ನುತ್ತಾ ಅಲ್ಲಿನ ಜನರ ಬದುಕನ್ನು ಕಂಡು ಮರುಕ ಪಟ್ಟರು.
ಜನಪ್ರತಿನಿದಿಗಳಿಗೆ ಮನವಿ:- ತಾಲೂಕಿನ ಶಾಸಕರು ಹಾಗೂ ಉಸ್ತುವಾರಿ ಸಚಿವ ಆರ್.ವಿ..ದೇಶಪಾಂಡೆ, ಸಂಸದರಾದ ಅನಂತಕುಮಾರ ಹೆಗಡೆಯವರಿಗೆ ತಾವು ಕಂಡ ಇಲ್ಲಿನ ಪರಿಸ್ಥಿತಿ ಕುರಿತು ತಮ್ಮ ಫೇಸ್‌ಬುಕ್ಕ ಜಾಲತಾಣದ ಮೂಲಕ ವಿವರಿಸುತ್ತಾ, ಡಿಗ್ಗಿ ಕುಗ್ರಾಮದ ಜನರ ಬದುಕು ತುಂಬಾ ಚಿಂತಾಜನಕವಾಗಿದೆ, ನೀವು ಹೊದ ಆಸ್ಪತ್ರೆಗಳನ್ನು ಉದ್ಘಾಟಿಸುವುದಕ್ಕಿಂತ ಇಂತಹ ಹಳ್ಳಿಯ ಆಸ್ಪತ್ರೆಗಳಿಗೆ ಉತ್ತಮ ವೈದ್ಯಾಧಿಕಾರಿಗಳನ್ನು ಕೊಡಿ, ಜನಸಂಚಾರಕ್ಕೆ ಸುಗಮ ರಸ್ತೆ ವ್ಯವಸ್ಥೆ ಮಾಡಿಕೊಡಿ. ಇಲ್ಲಿನ ಬಡ ಮಕ್ಕಳ ಶಿಕ್ಷಣಕ್ಕೆ ಸಹಕಾರ ಮಾಡಿ. ಯೋಗ್ಯ ವಾತಾವರಣ ಕಲ್ಪಿಸಿ. ಇದು ನಿಮ್ಮ ಕರ್ತವ್ಯ. ಇದಿಷ್ಟು ನಿಮ್ಮಿಂದ ಸಾಧ್ಯವಿಲ್ಲ ಎಂದರೆ ಇಂತಹ ಕಷ್ಟದಲ್ಲಿ ಬದುಕುವ ಜನಸಾಮಾನ್ಯರಿಗೆ, ಬಡವರಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ಮಾಡಲು ಸಮಾಜದಿಂದ ಸಹಾಯಹಸ್ತ ಕೇಳಬೇಕಾಗುತ್ತದೆ. ಆಗ ಜನಪ್ರತಿನಿದಿಗಳಾದ ನೀವು ಮುಜುಜರ ಪಡಬಾರದೆಂದು ವಿನಂತಿಸುತ್ತಾ, ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ವೈದ್ಯಾಧಿಕಾರಿಗಳಿಲ್ಲ : ಡಿಗ್ಗಿ ಭಾಗದ ಸುಮಾರು ೭-೮ ಹಳ್ಳಿಗಳನ್ನು ಸುತ್ತಾಡಿದ ಚಕ್ರವರ್ತಿ ಸೂಲಿಬೆಲೆ, ಈ ಭಾಗದ ಜನಜೀವನ ಬದುಕಿನ ಪರಿಸ್ಥಿತಿಯನ್ನು ವೀಕ್ಷಿಸಿದರು. ಡಿಗ್ಗಿ ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ಕಟ್ಟಡವಿದೆ ಆದರೆ ವೈದ್ಯಾಧಿಕಾರಿಗಳಿಲ್ಲ, ಇದರಿಂದಾಗಿ ಇಲ್ಲಿನ ಸುತ್ತಲ ಸುಮಾರು ೨೮ ಹಳ್ಳಿಗಳಿಗೆ ಅತ್ಯಗತ್ಯವಾಗಿ ಸಿಗಬೇಕಾದ ಆರೋಗ್ಯ ಸೇವೆ ಸಿಗುತ್ತಿಲ್ಲ. ಇಲ್ಲಿನ ಜನರು ಜೋಯಿಡಾ ಅಥವಾ ರಾಮನಗರ ಕೇಂದ್ರ ಸ್ಥಾನಕ್ಕೆ ಸುಮಾರು ೩೦ ರಿಂದ ೪೦ ಕಿ.ಮೀ.ದೂರ ಮಳೆಗಾಲದಲ್ಲಿ ಕ್ರಮಿಸಿ ಬರಬೇಕಾಗಿದ್ದು ತುಂಬಾ ಕಷ್ಟಕರ. ಸುಗಮ ರಸ್ತೆಗಳಿಲ್ಲ, ಸಾರಿಗೆ ಸಂಸ್ಥೆ ವಾಹನವಿಲ್ಲ, ಆಗೊಮ್ಮೆ ಈಗೊಮ್ಮೆ ಮಾಲಿಕರ ಅನುಕೂಲಕ್ಕೆ ಇರುವ ಖಾಸಗಿ ವಾಹನ ದೊರೆತರೆ ಕೊಂಚ ನಿರಾಳ, ಇಲ್ಲದಿದ್ದರೆ ಕಾಲ್ನಡಿಗೆಯೇ ಗತಿ. ಮಳೆಗಾಲದ ಸಂಚಾರ ದುಸ್ಥರವಾಗಿದ್ದು, ಅನಾರೋಗ್ಯಸ್ಥರ ಪರಿಸ್ಥಿತಿಯಂತೂ ಅಂiÉÆÃಮಯ. ಈ ಎಲ್ಲಾ ಪರಿಸ್ಥಿತಿಯನ್ನು ಸ್ವತಃ ಕಂಡು ಕೇಳಿದ ಚಕ್ರವರ್ತಿ ಸೂಲಿಬೆಲೆ ಈ ಭಾಗದ ಮೂಲ ಭೂತ ಸಮಸ್ಯೆ ನಿವಾರಣಗೆ ಏನಾದರು ಪರಿಹಾರ ಕಂಡುಕೊಳ್ಳಬೇಕೆಂಬ ಅಭಿಪ್ರಾಯ ಪಟ್ಟರು.
ಸೌಕರ್ಯ ಅಭಿವೃದ್ದಿಗೆ ಯುವ ಬ್ರಿಗೆಡ್ ಪ್ರಯತ್ನ:- ಡಿಗ್ಗಿ ಸುತ್ತಲ ಕುಗ್ರಾಮದ ಮೂಲ ಸೌಕರ್ಯ ಅಭಿವೃದ್ದಿ, ವೈದ್ಯಾಧಿಕಾರಿಗಳ ನೇಮಕ ಹಾಗೂ ಶಿಕ್ಷಣಕ್ಕೆ ಪ್ರೊÃತ್ಸಾಹ, ಸಹಕಾರ ನೀಡುವ ನಿಟ್ಟಿನಲ್ಲಿ ತಮ್ಮ ಯುವ ಬ್ರಿÃಗೆಡ್ ಸಮಾಜಮುಖಿಯಾಗಿ ಸಹಾಯ ಹಸ್ತಚಾಚುವ ಮನಸ್ಸು ಮಾಡಿದ್ದು, ಇಲ್ಲಿನ ಜನಪ್ರತಿನಿದಿಗಳು ಇಲ್ಲಿನ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ, ತಮ್ಮ ಯುವ ಬ್ರಿಗೆಡ್ ಮೂಲಕ ಸಮಾಜ ಜನರ ಸಹಾಯಹಸ್ತ ಕೇಳುವ ಮೂಲಕ ಈ ಭಾಗದ ಮೂಲ ಸೌಕರ್ಯ ಅಭಿವೃದ್ದಿಗೆ ಪ್ರಯತ್ನಿಸುವದಾಗಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಈ ಸಂದರ್ಭದಲ್ಲಿ ಯುವ ಬ್ರಿÃಗೆಡ್‌ನ ವಿಭಾಗ ಸಂಚಾಲಕರು, ಜಿಲ್ಲಾ ಸಂಚಾಲಕರುಗಳು ಹಾಗೂ ಗಣೇಶ ಹೆಗಡೆ, ಸ್ವಪ್ನೆÃಶ ಶೇಟ್ ಮತ್ತು ಸಂಗಡಿಗರು ಜೋತೆಯಲ್ಲಿದ್ದರು. ಜೋಯಡಾದ ಯುವ ಮುಂದಾಳು ಗಣೇಶ ಹೆಗಡೆ ಡಿಗ್ಗಿ ಭಾಗದ ವಿವಿಧ ಗ್ರಾಮಗಳ ಭೇಟಿಯಲ್ಲಿ ಜೊತೆಯಾಗಿ ಸಹಕರಿಸಿದರು.

loading...