ರಸ್ತೆ ದರೋಡೆಯಲ್ಲಿ ಬಂಧಿತರಾದ ಆರೋಪಿಗಳು

0
31

ಅಂಕೋಲಾ : ರಾಷ್ಟಿçÃಯ ಹೆದ್ದಾರಿಯಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ಅವರಿಂದ ಹಣ ಹಾಗೂ ವಾಚ್‌ನ್ನು ದೋಚಿ ಅದೇ ಹಣದಿಂದ ಪಾರ್ಟಿ ಮಾಡಲು ಹೋಗಿ ಹೊಟೇಲ್‌ನಲ್ಲಿ ದಾಂಧಲೆ ನಡೆಸಿದ ತಂಡವನ್ನು ಪೋಲಿಸರು ಬಂಧಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ನರಸಿಂಹ ಬೊಮ್ಮಯ್ಯ ನಾಯಕ ಶಿರಗುಂಜಿ, ಯೋಗೇಶ ಕೃಷ್ಣಾ ನಾಯ್ಕ ಬೊಬ್ರುವಾಡ, ಪವನ ನಾಗೇಶ ನಾಯ್ಕ ಹನುಮಟ್ಟಾ, ಅಜಿತ್ ಭರತ್ ನಾಯ್ಕ ಬೇಲೇಕೇರಿ, ಗೋಪಾಲಕೃಷ್ಣ ಮುರಳಿ ಗೌಂಡರ ಕೋಟೆವಾಡ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆನ್ನಲಾದ ಅಕ್ಷಯ ಅಲಿಯಾಸ್ ಪಾಪು ಅಂಕೋಲಾ ಮತ್ತಿತರ ಆರೋಪಿಗಳು ಹಾಗೂ ಅವರು ಬಳಿಸಿದ ಬೊಲೋರೋ ವಾಹನದ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಸ್ತೆ ದರೋಡೆಯಲ್ಲಿ ಬಂಧಿತರಾದ ಆರೋಪಿಗಳು ಭಾನುವಾರ ಮಧ್ಯಾಹ್ನ ರಾಷ್ಟಿçÃಯ ಹೆದ್ದಾರಿ ಅಂಚಿನ ಲ್ಲಿರುವ ಪಿಕಾಕ್ ಬಾರ್ ಸರಾಯಿ ಕುಡಿದ ನಶೆಯಲ್ಲಿ ನಿಂತಿದಲ್ಲದೆ, ಅದೇ ವೇಳೆ ಮಳೆ ಬಂತು ಎಂಬ ಕಾರ ಣಕ್ಕೆ ಶಿವಮೊಗ್ಗದಿಂದ ಕಾರವಾರಕ್ಕೆ ತೆರಳುತ್ತಿದ್ದ ಬೈಕ್ ಸವಾರರು ರಾಷ್ಟಿçÃಯ ಹೆದ್ದಾರಿ ಅಂಚಿಗೆ ಬಂದು ನಿಂತಿ ದ್ದನ್ನು ಗಮನಿಸಿ ಅವರನ್ನು ಮುಖ್ಯ ಆರೋಪಿ ನರಸಿಂಹ ಬೊಮ್ಮಯ್ಯ ನಾಯಕ ತನ್ನಲ್ಲಿ ಅವರನ್ನು ಕರೆಸಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ, ಆರೋಪಿತರೆಲ್ಲರು ಬೈಕ್ ಸವಾರ ಶಿವಮೊಗ್ಗ ಜಿಲ್ಲೆಯ ನಿಯಾಜ್ ಭಾಷಾ ಬಾಬುಸಾಬ್ ಮತ್ತು ಈತನ ಜೊತೆಗಾರನ ಹಲ್ಲೆ ನಡೆಸಿ ದ್ದರು. ಆದರೂ ಬೈಕ್ ಸವಾರರು ಕಾರವಾರಕ್ಕೆ ತೆರಳಲು ಮುಂದಾದಾಗ ಅವರನ್ನು ಬೊಲೆರೂ ವಾಹನ ಮತ್ತು ಬೈಕ್‌ನಲ್ಲಿ ಬೆಂಬತ್ತಿದ ಆರೋಪಿಗಳು ವಿಠಲಘಾಟ ಬಳಿ ಅವರನ್ನು ತಡೆದು ತಮಗೆ ಪಾರ್ಟಿ ಮಾಡಲು ಹಣ ಕೊಡಿ ಎಂದು ಒತ್ತಾಯಿಸಿದಲ್ಲದೆ ಅವರು ಕೊಡಲು ಒಪ್ಪದಿದ್ದಾಗ ಮತ್ತೆ ಹಲ್ಲೆ ನಡೆಸಿ ೮ ಸಾವಿರ ರೂ. ನಗದು ಮತ್ತು ವಾಚನ್‌ನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿರುತ್ತಾರೆ. ಈ ಘಟನೆ ಕುರಿತು ನಿಯಾಜ್ ಭಾಷಾ ಬಾಬುಸಾಬ್ ಪೊಲೀಸರಿಗೆ ದೂರು ನೀಡಿದ್ದರು.
ರಾಷ್ಟಿçÃಯ ಹೆದ್ದಾರಿಯಲ್ಲಿ ಬೈಕ್ ಸವಾರರಿಂದ ಹಣ ದೋಚಿಕೊಂಡ ಬಂದ ಆರೋಪಿತರು, ಬಾಳೆಗುಳಿ-ಹುಬ್ಬಳ್ಳಿ ರಸ್ತೆಯಂಚಿಗಿರುವ ಬೊಗ್ರಿ ಬೈಲ್‌ನ ಕೊಂಕಣ ಸ್ಪೆöÊಸ್ ಹೊಟೇಲ್‌ನಲ್ಲಿ ಪಾರ್ಟಿ ಮುಗಿಸಿ, ಮೊದಲೇ ಕುಡಿದ ನಶೆಯಲ್ಲಿದ್ದರಿಂದ ಬಿಲ್ ಕೊಡುವ ವಿಚಾರದಲ್ಲಿ ಪರಸ್ಪರರ ನಡುವೆ ವಿವಾದವಾಗಿ, ಜಗಳವಾಗಿ ಮಾರ್ಪಟ್ಟು ಹೊಟೇಲ್‌ನಲ್ಲಿ ದಾಂಧಲೆ ಎಬ್ಬಿಸಿ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡಿದ್ದರಿಂದ ಹೋಟೇಲ್ ಮಾಲಕ ಉಮೇಶ ಬೋಜ ಹೆಗಡೆ ಈ ಆರೋಪಿತರ ಮೇಲೆ ಪೊಲೀಸ ದೂರು ನೀಡಿದ್ದಾರೆ.
ರಸ್ತೆ ದರೋಡೆ ನಡೆಸಿ, ಹೋಟೇಲ್‌ನಲ್ಲಿ ದಾಂಧಲೆ ನಡೆಸಿದ ಆರೋಪಿಗಳ ವಿರುದ್ದ ಪ್ರತ್ಯೆÃಕ ಎರಡು ಪ್ರಕರಣ ವನ್ನು ದಾಖಲಿಸಿಕೊಂಡು, ತಕ್ಷಣ ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ , ನ್ಯಾಯಾಲಯವು ಆರೋಪಿಗಳಿಗೆ ಹದಿನೈದು ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಡಿವೈಎಸ್ಪಿ ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ಸಿಪಿಐ ಬಿ. ಪ್ರಮೋದಕುಮಾರ, ಪಿ.ಎಸ್.ಐ ಶ್ರಿÃಧರ ಎಸ್., ಎ.ಎಸ್.ಐ. ಅಶೋಕ ತಳಗಪ್ಪನವರ್, ಹಿರಿಯ ಹವಲ್ದಾರ ಮೋಹನದಾಸ ಶೇಣ್ವಿ, ಸಿಬ್ಬಂದಿಗಳಾದ ಮದರಸಾಬ್ ಚಿಕ್ಕೆÃರಿ, ಆಶೀಪ್ ಕುಂಕೂರು, ಜಿ.ಬಿ.ರಾಣೆ, ಸಂತೋಷ ಆರ್.ಕೆ., ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ಸಂತೋಷ ನಾಯ್ಕ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಹಾಜರಿದ್ದರು.

loading...