ಬಿರುಕು ಬಿಟ್ಟ ಕುಂಡಲ ಸಂಪರ್ಕ ಸೇತುವೆ : ಜನರಲ್ಲಿ ಆತಂಕ

0
25

ಜೋಯಿಡಾ: ತಾಲೂಕಿನ ಕಾತೇಲಿ ಗ್ರಾ.ಪಂ. ವ್ಯಾಪ್ತಿಯ ಕುಂಡಲ್ ಗ್ರಾಮಕ್ಕೆ ಸಂಪರ್ಕ ನೀಡಲು ನಿರ್ಮಿಸಿದ ನೂತನ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿರುಕು ಬಿಟ್ಟಿದೆ. ಈ ಬಗ್ಗೆ ಕುಂಡಲ್ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ದ ಆಕಕ್ರೊÃಶ ವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ತÀರಾಟೆಗೆ ತೆದುಕೊಂಡು, ಕೂಡಲೆ ಸೇತುವೆ ಸರಿಪಡಿಸಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದ್ದಾರೆ.
ಕುಂಡಲ-ಕುಂಬಾರವಾಡಾ ಸಂಪರ್ಕದ ಈ ಸೇತುಗೆ ಕುಂಡಲ್ ಗ್ರಾಮಸ್ಥರ ಬÀಹುದಿನದ ಕನಸಿನ ಸೇತುವೆಯಾಗಿತ್ತು. ೪೦ ಲಕ್ಷ ರೂಪಾಯಿ ಅನುದಾನದ ಈ ಸೇತುವೆ ಕಾಮಗಾರಿಯನ್ನು ಗುತ್ತಿಗೆದಾರ ಎನ್.ಎಸ್.ನಾಯ್ಕ ಎನ್ನುವಾತ ಪಡೆದಿದ್ದು, ಉಪಗುತ್ತಿಗೆಯನ್ನು ಸ್ಥಳೀಯ ಒಬ್ಬರಿಗೆ ನೀಡಿದ್ದ ಎನ್ನಲಾಗಿದೆ. ಇದರ ಪರಿಣಾಮ ಕಾಮಗಾರಿ ಕಳೆಯಿಂದಾಗಿ ಈ ಸೇತುವೆ ಮಳೆಗಾಲದ ಆರಂಭದಲ್ಲೆÃ ಕುಸಿತ ಕಂಡಿದ್ದು, ಬಿರುಕು ಬಿಟ್ಟು ಸಂಚಾರಕ್ಕೆ ಅಪಾಯಕರವಾಗಿ ಮಾರ್ಪಟ್ಟಿದೆ. ಇತ್ತಿಚಿನ ಕೆಲ ತಿಂಗಳ ಹಿಂದಷ್ಟೆÃ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯಿಂದ ಉದ್ಘಾಟನೆ ಕಂಡ ಈ ಸೇತವೆ ಮೇಲೆ ಸರಿಯಾಗಿ ಇನ್ನೂ ಯಾವುದೇ ಬೃಹತ್ ವಾಹನ ಸಂಚರಿಸಲಿಲ್ಲ. ಇನ್ನೂ ಮುಂಗಾರು ಮಳೆ ಕೂಡಾ ಸರಿಯಾಗಿ ಆರಂಬಗೊಂಡಿಲ್ಲ. ಕಳೆದ ಒಂದುವಾರದಿಂದ ಆಗಾಗ ಬಿದ್ದ ಅಕಾಲಿಕ ಮಳೆಗೆ ಸೇತುವೆಯ ಮಣ್ಣು ಕುಸಿದು ಸೇತುವೆ ಬಿರುಕು ಬಿಟ್ಟಿದೆ ಎಂದರೆ, ಕಾಮಗಾರಿ ಎಷ್ಟು ಕಳಪೆಯಾಗಿರ ಬಹುದೆಂದು ಉಹಿಸಬಹುದಾಗಿದೆ ಎಂದ ಗ್ರಾಮಸ್ಥರು ಜೋಯಿಡಾ ಲೋಕೋಪಯೋಗಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಥರಾಟೆಗೆ ತೆಗೆದುಕೊಂಡು ಕಾಮಗಾರಿ ವಿರುದ್ದ ಆಕ್ರೊÃಶ ವ್ಯಕ್ತಪಡಿಸಿದರು.
ಈ ಕಾಮಗಾರಿಯ ಗುತ್ತಿಗೆದಾರರ ಮೇಲೆ ಕ್ರಮಕೈಗೊಂಡು, ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದ ಗ್ರಾಮಸ್ಥರು, ಕೂಡಲೆ ಸೇತುವೆ ದುರಸ್ಥಿಮಾಡಿಕೊಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ. ಕಚೇರಿಯಲ್ಲಿದ್ದ ಸಹಾಯಕ ಅಭಿಯಂತರ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ಕೂಡಲೇ ದುರಸ್ಥಿಕಾರ್ಯ ಮಾಡಿಸಿಕೊಡಲಾಗುವುದೆಂದು ಆಸ್ವಾಸನೆ ನೀಡಿದರೆನ್ನಲಾಗಿದೆ. ಈ ಸದರ್ಭದಲ್ಲಿ ಪ್ರಮುಖರಾದ ಆಕಾಶ ಅನಸ್ಕರ, ಮಂಜೂ ವೇಳಿಪ, ಮಧು, ರಮೇಶ ವೇಳಿಪ ಹಾಗೂ ಜೋಯಿಡಾ ಕಾಳಿ ಬ್ರಿಗೆಡ್ ಮುಖ್ಯ ಸಂಚಾಲಕ ರವಿ ರೆಡ್ಕರ್ ಮತ್ತಿತರರು ಉಪಸ್ಥಿತರಿದ್ದರು.

loading...