ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ: ಅನ್ನದಾನೀಶ್ವರ ಸ್ವಾಮೀಜಿ

0
65

ಗದಗ: ಸಮಾಜದ ಅಭಿವೃದ್ದಿಗಾಗಿ ಲಿಂಗೈಕ್ಯ ಕೊಟ್ಟೂರೇಶ್ವರರು ಹಠತೊಟ್ಟು ಈ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ ಹಠಯೋಗಿಗಳಾದಂತೆ ಮಧ್ಯಪಾನ, ಧೂಮಪಾನವನ್ನು ತ್ಯಜಿಸಲು ಇಂದಿನ ಯುವ ಸಮೂಹ ಹಠ ತೊಡಬೇಕು ಎಂದು ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಗದಗ ತಾಲೂಕಿನ ಹರ್ಲಾಪೂರ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಲಿಂಗೈಕ್ಯರಾದ ಇರ್ವರ ಕೊಟ್ಟೂರೇಶ್ವರರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು ಮಧ್ಯ ಮತ್ತು ಧೂಮ ವ್ಯಸನಿಗಳಿಂದ ಸಮಾಜದಲ್ಲಿ ಅಶಾಂತಿ, ಅನೈತಿಕತೆ ಹೆಚ್ಚುತ್ತಿದೆ. ಆದ್ದರಿಂದ ೧೨ ಶತಮಾನದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು, ವೈಚಾರಿಕತೆಯನ್ನು ಲಿಂಗಧಾರಣೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಜಗಜ್ಯೊÃತಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾತನಾಡಿ ಬಸವಣ್ಣನವರ ಮಾನವೀಯ ಮೌಲ್ಯಗಳನ್ನುü ಬೀತ್ತರಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೊಟ್ಟೂರೇಶ್ವರರ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ. ದಾರಿ ತಪ್ಪುತ್ತಿರುವ ಇಂದಿನ ಯುವ ಜನಾಂಗ ಮಠಗಳ ಬಗ್ಗೆ ಗೌರವ ಅಭಿಮಾನಗಳನ್ನು ಇಟ್ಟುಕೊಂಡು ಹದಗೆಡುತ್ತಿರುವ ಸಂಭಂದಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ ಎಂದರು.
ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಪಕ ಡಾ. ಹೆಬ್ಬಾಲೆ ನಾಗೇಶ ಅವರು ಸನ್ಮಾನ ಸ್ವಿÃಕರಿಸಿ ಮಾತನಾಡಿ ೧೨ ಶತಮಾನದಲ್ಲಿ ಬಸವಣ್ಣನವರ ವೈಚಾರಿಕತೆ ಮತ್ತು,ಸಮಾನತೆಯ ಬಗ್ಗೆ ವಿವರಿಸುತ್ತಾ ಬಸವಣ್ಣನವರು ೧ ಲಕ್ಷಕ್ಕೂ ಅಧಿಕ ವಚನಗಳನ್ನು ರಚನೆ ಮಾಡಿದ್ದು ಈ ಸಮಾಜ ತಿದ್ದುವಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಜಗತ್ತಿನಲ್ಲಿಯ ೬೪೦೦ ಭಾಷೆಗಳ ಸಾಹಿತ್ಯಕ್ಕಿಂತ ನಮ್ಮ ದೇಶದ ಶರಣರ ವಚನಗಳ ಸಾಹಿತ್ಯವು ಮೇರು ಮಟ್ಟದಲ್ಲಿದ್ದು ಇವರ ವಚನಗಳು ಜಪಾನಿನನಲ್ಲಿಯೂ ಸಹ ತರ್ಜುಮೆಗೊಂಡಿವೆ.
೭ ನೇ ಶತಮಾನದಲ್ಲಿಯ ವೈಷ್ಣವ ಸಮಾಜದಲ್ಲಿ ಮೂಡನಂಬಿಕೆ ತುಂಬಿ ಸಮಾನತೆ ಎಂಬುದೇ ಇರಲಿಲ್ಲ. ಆದರೆ ೧೨ ನೇ ಶತಮಾನದಲ್ಲಿ ಬಸವಣ್ಣನವರ ವೈಚಾರಿಕ ಕ್ರಾಂತಿಯಿಂದ ಗಂಡು, ಹೆಣ್ಣೆನ ಸಮಾನತೆಯ ಜಾಗೃತಿ ಆರಂಭವಾಯಿತು. ವೇದ, ಉಪನಿಷತ್, ಕಾಯಕ, ಕವಿ, ನಾಡೋಜ,, ಗುರುಗಳಾಗಿ ತನ್ನಲ್ಲಿರುವ ಆತ್ಮ ಶುದ್ಧಿ ಮತ್ತು ಬಹಿರಂಗ ಶುದ್ದಿಯಿಂದ ಬಸವಣ್ಣವರು ಸಮಾಜಮುಖಿಯಾಗಿದ್ದರು ಎಂದರು. ೩೩೦ ಕೋಟಿ ದೇವತೆಗಳನ್ನು ಪೂಜಿಸುವ ನಾವು ಇಡಿ ಜಗತ್ತಿಗೆ ಆದ್ಯಾತ್ಮಕತೆಯಿಂದ ಮಾದರಿಯಾಗಿದ್ದೆÃವೆ. ಕರ್ನಾಟಕದಲ್ಲಿ ೬೪೦ ಜಾತ್ರೆಗಳು ಜರುಗುತ್ತವೆ. ಅವುಗಳಲೊಂದಾದ ಪುಟ್ಟ ಗ್ರಾಮ ಹರ್ಲಾಪೂರದಲ್ಲಿ ಕೊಟ್ಟೂರೇಶ್ವರ ಶ್ರಿÃಗಳು ಶಿವಾನುಭವ ಮತ್ತು ಜಾತ್ರೆಯ ಮೂಲಕ ಬಸವಣ್ಣನವರ ಸಮಾನತೆ ಮತ್ತು ವೈಚಾರಿಕತೆಯ ಬಗ್ಗೆ ಸಂಶೋದನೆ ನಡೆಸುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಪುರಾಣ ಪ್ರವಚನಕಾರ ಸದಾನಂದ ಶಾಸ್ತಿçಗಳು ಸೇರಿದ ಭಕ್ತರಿಗೆ ಮೇಣದ ಬತ್ತಿಯ ಹಚ್ಚು ಮೂಲಕ ಸಮಾಜದ ಸಂಭಂದಗಳನ್ನು ಗಟ್ಟಿಗೊಳಿಸುವ ಸಂಕಲ್ಪ ಮಾಡಿಸಿದರು. ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಕೊಟ್ಟೂರೇಶ್ವರ ಶ್ರಿÃಗಳು ಮಾತನಾಡಿದರು. ಶಿವಾನಂದ ದೇವರು, ಗುರುಲಿಂಗ ದೇವರು, ರವಿ ಮರಡಿ, ಅಶೋಕ ಬೂದಿಹಾಳ ಅವರು ವೇದಿಕೆಯಲ್ಲಿದ್ದರು.
ಕೆ.ಆರ್. ಕೋರಿ ಸ್ವಾಗತಿಸಿದರು. ವಿವೇಕಾನಂದ ದೇವರು ನಿರೂಪಿಸಿದರು. ಕೆ.ಬಿ.ಕೊಣ್ಣೂರು ವಂದಿಸಿದರು.

loading...