ಬ್ರಾಹ್ಮಣ ಜನ್ಮ ಜಗತ್ತಿನ ಒಳಿತಿಗಾಗಿ: ಶ್ರಿÃಗಳು

0
30

ಜೋಯಿಡಾ: ಬ್ರಾಹ್ಮಣ ಜನ್ಮ ಬಂದಿದ್ದು ಸುಖೋಪ ಜೀವನ ಮಾಡಲು ಅಲ್ಲ. ಜಗತ್ತಿನ ಒಳಿತಿಗಾಗಿ ತಪಸನ್ನು ಮಾಡಲು ಬಂದಿದೆ ಏಂದು ಶ್ರಿÃಸ್ವರ್ಣದಲ್ಲಿ ಶ್ರಿÃಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಇತ್ತಿÃಚೆಗೆ ಅವರು ತಾಲೂಕಿನ ಗುಂದ ಚಾಪಖಂಡ ಭಾಗದ ಶಿಷ್ಯ ವೃಂದವನ್ನು ಉದ್ದೆÃಶಿಸಿ ಯರಮುಖದಲ್ಲಿ ಆರ್ಶಿವಚನ ನೀಡುತ್ತಾ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ಹಲವಾರು ಧರ್ಮಗಳು ಇದ್ದರು ಬ್ರಾಹ್ಮಣರ ಕೆಲಸ ಯಜ್ಞ ಯಾಗಾದಿಗಳನ್ನು ನಡೆಸುವುದು, ತಪಸ್ಸನ್ನು ಆಚರಿಸುವುದು, ಜಗತ್ತಿನ ಸರ್ವರ ಏಳಿಗೆಗಾಗಿ, ಒಳಿತಿಗಾಗಿ ಕೆಲಸ ಮಾಡುವುದಾಗಿದೆ.
ಬ್ರಾಹ್ಮಣ್ಯ ಇದು ಪರಂಪರೆಯಿಂದ ಬಂದಿದೆ, ಪರಂಪರೆಯಿಂದ ಬಂದ ಬ್ರಾಹ್ಮಣರು ನಡೆಸುವ ಯಜ್ನ ಯಾಗಾದಿಗಳಿಗೆ ತಪಸ್ಸಿಗೆ ಸಮಾಜಕ್ಕೆ ಒಳಿತನ್ನು ಮಾಡುವ ಶಕ್ತಿ ತುಂಬಾ ಇದೆ. ಹಾಗಾಗಿ ಹುಟ್ಟುವ ಮಕ್ಕಳಿಗೆ ತಾಯಿಯ ಗರ್ಭದಲ್ಲಿರುವಾಗಿಂದಲೇ ಸಂಸ್ಕಾರವನ್ನು ನೀಡುವ ಕೆಲಸ ಪಾಲಕರು ಮಾಡಬೇಕಗಿದೆ ಎಂದರು. ಟಿವಿ,ಮೊಬೈಲ್ ಬಳಕೆ ಕಡಿಮೆ ಮಾಡಿ. ಪೂಜೆಗಳನ್ನು ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಸಹಕರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಸೀಮಾ ಅಧ್ಯಕ್ಷ ವಿಭಾಕರ ದೇಸಾಯಿ,ಎನ್,ಎಸ್,ಎಸ್,ಸಂಘದ ನಿರ್ಧೇಶಕ ಏಸ್.ಟಿ.ದಾನಗೇರಿ, ಜಾಗ್ರತ ಪಡೆ ಅಧ್ಯಕ್ಷ ಶ್ರಿÃಧರ ಭಾಗ್ವತ, ಆರ್.ಎನ್.ಹೆಗಡೆ, ಡಿ.ಟಿ.ಹೆಗಡೆ ಇತರರು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಭಗವದ್ಗಿÃತಾ ಕಂಠಪಾಠದಲ್ಲಿ ರಾಜ್ಯಕ್ಕೆ ೩ನೇ ಸ್ಥಾನ ಪಡೆದುಕೊಂಡ ತಾಲೂಕಿನ ವಿದ್ಯಾರ್ಥಿನಿ ಚಾಪಖಂಡದ ಕುಮಾರಿ ಚೇತನಾ ರಾಘವೇಂದ್ರ ಭಾಗ್ವತ ಇವಳನ್ನು ಗೌರವಿಸಿದರು. ಗಾಯಕ ಗಣೇಶ ದೇಸಾಯಿ ಬೆಂಗಳೂರು ಇವರಿಂದ ಸಂಗೀತ ಸೇವೆ ನಡೆಯಿತು.
ವೇದಿಕೆಯಲ್ಲಿ ಮಾಜಿ ಉಪಕುಲಪತಿ ಪ್ರಮೋದ ಘಾಯಿ, ಡಾ.ಜಿ.ಎಮ್ ಹೆಗಡೆ, ಸಂಸ್ಕçತ ಪ್ರಾಧ್ಯಾಪಕ ಡಾ. ಅನಂತಮೂರ್ತಿ ಭಟ್ಟ, ಶಂಕರ ಭಟ್ಟ ಯಲ್ಲಾಪುರ ಇತರರು ಉಪಸ್ಥಿತರಿದ್ದರು.

loading...