ಶಿಥಿಲಾವಸ್ಥೆಯಲ್ಲಿರುವ ಮಾನಕಾಪುರ ಸರಕಾರಿ ಶಾಲೆ

0
50

ಆತಂಕದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು | ಹೊಸ ಕಟ್ಟಡ ಭಾಗ್ಯ ಯಾವಾಗ ?
ಮಾಲತೇಶ ಮಟಿಗೇರ
ಬೆಳಗಾವಿ: ಹಳೆಯ ಕೊಠಡಿಗಳ ಮೇಲ್ಛಾವಣಿಯಿಂದ ಕಾಂಕ್ರೀಟ್ ತುಂಡುಗಳು ಉದುರುತ್ತಿದ್ದು, ಯಾವುದೇ ಸಮಯದಲ್ಲಾದರೂ ಗೊಡೆಗಳು ಕುಸಿದು ಅನಾಹುತ ಸಂಭವಿಸುವ ಭಯದಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿತಿ ಇದೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಮಾನಕಾಪುರ ಎಂಬ ಗ್ರಾಮದಲ್ಲಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಯಾವ ಸಮಯದಲ್ಲಿಯೂ ಬಿಳುವ ಸ್ಥಿತಿಯಲ್ಲಿದೆ. ಇದರಿಂದ ಶಿಕ್ಷಕರು ಭಯದಲ್ಲಿಯೇ ಮಕ್ಕಳಿಗೆ ಪಾಠ ಮಾಡುವಂತಾಗಿದೆ.
ಮಾನಕಾಪುರ ಶಾಲೆಯಲ್ಲಿ ೧ ರಿಂದ ೭ ತರಗತಿಯವರೆಗೆ ಮಕ್ಕಳ ಶಿಕ್ಷಣ ಪಡೆಯುತ್ತಿದ್ದು, ಒಟ್ಟು ಮೂರು ಕೊಠಡಿಯಲ್ಲಿ ೧೩೦ ವಿದ್ಯಾರ್ಥಿಗಳ ಕಲಿಯುತ್ತಿದ್ದಾರೆ. ಆದರೆ ಇರುವ ಮೂರು ಕೊಠಡಿಗಳು ತುಂಬಾ ಶಿಥಿಲಾವಸ್ಥೆಯಲ್ಲಿದ್ದು, ಯಾವ ಕ್ಷಣವಾದರು ಕುಸಿದು ಬಿಳುವ ಸ್ಥಿತಿ ಇದೆ. ಇದರಿಂದ ಮಕ್ಕಳಿಗೆ ಯಾವ ಕ್ಷಣದಲ್ಲಿ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿ ಶಿಕ್ಷಕರಿದ್ದಾರೆ.
ತುಂಬಾ ಹಳೆಯ ಕಟ್ಟಡ : ಮಹಾರಾಷ್ಟçಕ್ಕೆ ೬ ಕಿ.ಮೀ ಅಂತರದಲ್ಲಿರುವ ಮಾನಕಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬಾ ಹಳೆಯ ಕಟ್ಟಡವಾವೆ. ಎರಡು ಕೊಠಡಿ ದುರಸ್ಥಿತಿ, ಇನ್ನೊಂದು ಪುನನಿರ್ಮಾಣ ಮಾಡುವ ಹಂತದಲ್ಲಿದ್ದು, ಭಯದಿಂದ ಮಕ್ಕಳನ್ನು ಹೊರಗಡೆ ಕೂಡಿಸಿ ಪಾಠ ಮಾಡುತ್ತಿದ್ದೆವೆ. ಈ ಬಗ್ಗೆ ಕಳೆದ ಬಾರಿಯೇ ಚಿಕ್ಕೊಡಿಯ ಡಿಡಿಪಿಐ ಹಾಗೂ ಬಿಇಓ ಅಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯನ್ನು ತಿಳಿಸಲಾಗಿದೆ ಎಂದು ತಮ್ಮ ಅಳಲು ತೊಂಡಿಕೊಂಡಿದ್ದಾರೆ.


ರಾಜ್ಯದ ಪಾಲಕರನ್ನೆÃ ಬೆಚ್ಚಿ ಬಿಳಿಸಿದ ಸುದ್ದಿ: ಕಳೆದ ೩ ಮೂರು ವರ್ಷಗಳ ಹಿಂದೆ ಯಮಕನಮರಡಿ ಕ್ಷೆÃತ್ರದಲ್ಲಿ ಸರಕಾರಿ ಶಾಲೆಯ ಕಟ್ಟಡ ಕುಸಿದು ಬಾಲಕಿ ಸಾವನ್ನಪಿದಳು. ಇಂತ ದೊಡ್ಡ ಅನಾಹುತ ಸಂಭವಿಸಿದರು ಸಹ ಜಿಲ್ಲಾಡಳಿತ ಮಾತ್ರ ಸರಕಾರಿ ಶಾಲೆಯ ದುರಸ್ಥಿಗೆ ಮಾತ್ರ ಮುಂದಾಗದಿರುವುದು ದುರ್ದೈವದ ಸಂಗತಿ.
ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಬಡಕುಟುಂಬದ ಮಗುವೊಂದು ಸರಕಾರ ಮಾಡಿದ ನಿರ್ಲಕ್ಷö್ಯದಿಂದಾಗಿ ಅಮಾಯಕ ಬಾಲಕಿ ಕೊನೆ ಉಸಿರೆಳೆಯಿತು. ಅಂದು ಇಡೀ ರಾಜ್ಯದ ಪಾಲಕರನ್ನೆÃ ಬೆಚ್ಚಿ ಬಿಳಿಸುವಂತಾಗಿತ್ತು. ಅಂದಿನಿಂದಲೇ ಜಿಲ್ಲಾಡಳಿತ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿ ದುರಸ್ಥಿ ಮಾಡುವ ಕೆಲಸ ಕೈಗೊಳ್ಳಬೇಕಾಗಿತ್ತು. ಆದರೆ ಇಲ್ಲಿಯವರೆಗೂ ಸಹ ಜಿಲ್ಲೆಯಲ್ಲಿನ ಸರಕಾರಿ ಶಾಲೆಗಳು ಮಾತ್ರ ಹೊಸ ರೂಪ ಪಡೆಯದೆ ಇರುವುದು ದುಃಖಕರ ಸಂಗತಿ.


ಒಟ್ಟಾರೆಯಾಗಿ ಇನ್ನಾದರು ಸರಕಾರ ಹಾಗೂ ಜಿಲ್ಲಾಡಳಿತ ಯಮಕನರಡಿ ಕ್ಷೆÃತ್ರದಲ್ಲಿಯಂತಹ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತು, ದುರಸ್ಥಿ ಹಾಗೂ ಪುನನಿರ್ಮಾಣ ಮಾಡಬೇಕಾಗಿದೆ.
========ಬಾಕ್ಸ್=========
ಪ್ರಭಾವಿ ರಾಜಕಾಣಿಗಳ ಒತ್ತಡಕ್ಕೆ ಮಣಿದರಾ ಅಧಿಕಾರಿಗಳು
ತಾಲೂಕಿನ ಮಾನಕಾಪುರ ಎಂಬ ಗ್ರಾಮದಲ್ಲಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದು. ಮಕ್ಕಳು ಬಿಳುವ ಕಟ್ಟಡದ ಹೊರಾಂಗಣದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಇನ್ನೂ ಮಳೆಗಾಲ ಆರಂಭಗೊಂಡಿದ್ದು, ನಿರಂತರ ಮಳೆಯಾದರೆ ಮಳೆಯಲ್ಲಿಯೇ ಕುಳಿತು ಕೊಳ್ಳುವ ಸ್ಥಿತಿ ಇದೆ. ಆದರೆ ಅಧಿಕಾರಿಗಳನ್ನು ಕೇಳಿದರೆ ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಿರುವುದು ನೊಡಿದರೆ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದರಾ ಎಂಬ ಸತ್ಯವನ್ನು ಮರೆಮಾಚುತ್ತಿರುವುದು ಸತ್ಯ ಸಂಗತಿಯಾಗಿದೆ.
=========ಬಾಕ್ಸ್===========
ಹಳೆ ಕಟ್ಟಡ ವಿರುವುದರಿಂದ ವಿದ್ಯಾರ್ಥಿಗಳನ್ನು ಕೂಡಿಸಲು ಬೇರೆ ವ್ಯವಸ್ಥೆ ಮಾಡಲಾಗಿದೆ. ಹೊಸ ಕಟ್ಟಡಗಳನ್ನು ಕಟ್ಟಲಾಗುತ್ತಿದ್ದು, ಅವುಗಳಲ್ಲಿ ಎರಡು ಹೊಸ ಕಟ್ಟಡಗಳನ್ನು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಗುತ್ತದೆ. ಇನ್ನೆÃನು ಒಂದುವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ.
ಕೆ.ರಾಮನಗೌಡ
ಚಿಕ್ಕೊÃಡಿ ಬಿಇಓ

loading...