ಅಧಿಕಾರಿಗಳ ನಿರ್ಲಕ್ಷö್ಯ : ಅಪೂರ್ಣಗೊಂಡ ಬಸ್ ತಂಗುದಾಣ

0
17

ಕುಮಟಾ : ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಕೇರೆ ದಟ್ಟ ಕಾನನದಿಂದ ಆವೃತ್ತವಾದ ಕುಗ್ರಾಮ ಇದ್ದು, ಈ ಗ್ರಾಮ ಅರಣ್ಯದಿಂದ ಆವೃತ್ತವಾಗಿದ್ದರೂ ರಸ್ತೆ, ವಿದ್ಯುತ್, ದೂರವಾಣಿ ಸೇರಿದಂತೆ ಕೆಲವು ಮೂಲಭೂತ ಸೌರ್ಕಯಗಳನ್ನು ಇಲ್ಲಿನ ಜನ ಹೊಂದಿದ್ದಾರೆ. ಆದರೆ ಇಲ್ಲಿ ನಡೆಯುವ ಕಾಮಗಾರಿಗಳು ಅಪೂರ್ಣಗೊಂಡಿದರಿಂದ ಇಲ್ಲಿನ ಕಾಮಗಾರಿ ಆಟಕ್ಕುಂಟು ಲೆಕ್ಕಕ್ಕಿಲವೆಂಬತಾಗಿದೆ.
ನಾಗೂರು ಬ್ರಹ್ಮೂರು ರಸ್ತೆಯಿಂದ ಎಡಕ್ಕಿರುವ ಹೊನ್ನಕೇರೆ ರಸ್ತೆ ಬಸ್‌ಸ್ಟಾö್ಯಂಡವರೆಗೆ ಒಟ್ಟು ೪೫೦ ಮೀಟರನಷ್ಟಿದೆ. ಅದರಲ್ಲಿ ೧೬೦ ಮೀಟರ ರಸ್ತೆ ಆಗಿದೆ. ಇದರ ನಂತರ ೧೦೦ ಮೀಟರ ರಸ್ತೆಗೆ ಜಲ್ಲಿ ಹಾಕಿ ರೊಲ್ ಮಾಡಿದ್ದು, ಈ ರಸ್ತೆ ಹಾಗೆಯೇ ಬಿಟ್ಟು ಅದರ ಮುಂದಿನದು ಸಿಮೆಂಟ್ ಕಾಂಕ್ರಿÃಟ್ ರಸ್ತೆ ನಿರ್ಮಾಣವಾಗಿದೆ. ಹಾಗೆಯೇ ಮುಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಹೊನ್ನಕೇರೆಯಿಂದ ಗೌರವಸ್ಕಿಯವರೆಗಿನ ಮೂರುವರೆ ಕಿ.ಮೀ. ರಸ್ತೆಯನ್ನು ೧೮.೨೦ ಲಕ್ಷ ರೂ ನಲ್ಲಿ ನಿರ್ಮಿಸಲಾಗಿದೆ. ಒಟ್ಟಾರೆ ಬಿಟ್ಟು ೧೦೦ ಮೀಟರ ರಸ್ತೆ ಮಾತ್ರ ಡಾಂಬರೀಕರಣದ ಭಾಗ್ಯ ಕಾಣದೇ ಹಾಗೇಯೇ ಉಳಿದುಕೊಂಡಿದೆ.
ರಸ್ತೆಗೆ ಹಾಕಲಾದ ಜಲ್ಲಿ ಎದ್ದು ಬಂದಿದ್ದು ನಿತ್ಯ ಸಂಚರಿಸುವ ಈ ಭಾಗದ ಗ್ರಾಮಸ್ಥರು ಕಾಲ್ನಡಿಗೆಯಲ್ಲಿ ನಡೆಯುವಾಗ ಹಾಗೂ ವಾಹನದಲ್ಲಿ ಓಡಾಡುವಾಗ ನಿತ್ಯ ಕಿರಿಕಿರಿ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಂತೆ ಇಲ್ಲಿನ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪದೇ ಪದೇ ಗಮನಕ್ಕೆ ತಂದರೂ ಇನ್ನುವರೆಗೂ ಯಾವುದೇ ಪ್ರಯೋಜನವಾಗದೆ ನಿತ್ಯ ರಸ್ತೆ ಸಮಸ್ಯಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಷ್ಟಕ್ಕೂ ಕೊನ್ನಕೇರೆಯ ೧೦೦ ಮೀ ರಸ್ತೆ ಕಾಮಗಾರಿ ಅಪೂರ್ಣವಾಗಲು ಕಾರರ‍್ಯಾರು? ಯಾವ ಕಾರಣಕ್ಕಾಗಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಈ ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದ ಹಣ ಎಲ್ಲಿ ಸೋರಿಕೆಯಾಗಿದೆ ಎಂಬುದು ಬಹಿರಂಗವಾಗಬೇಕಿದೆ.
೨೦೧೮-೧೯ ನೇ ಸಾಲಿನ ಜಿಪಂ ೨ ಕೋಟಿ ಅನುದಾಡಿಯಲ್ಲಿ ೧.೫೦ ಲಕ್ಷ ರೂ ನಲ್ಲಿ ನಿರ್ಮಾಣವಾದ ಯುವಕ ಸಂಘದ ಕಟ್ಟಡ ಕಾಮಗಾರಿಯು ಅರ್ಧಕ್ಕೆ ನಿಂತಿದೆ. ಇಲ್ಲಿನ ಯುವಕ ಸಂಘಕ್ಕೆ ಅತಿ ಅಗತ್ಯವಾಗಿ ಬೇಕಾದ ಕಟ್ಟಡ ಇದಾಗಿದ್ದು, ಪೂರ್ಣಗೊಳ್ಳದೇ ಇರುವದರಿಂದ ಯುವಕರು ಹಮ್ಮಿಕೊಳ್ಳುವ ಕಾರ್ಯಕ್ರಮ ಇಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಯುವಕ ಸಂಘದ ಕಟ್ಟಡದ ಸನಿಹವೇ ಸರಕಾರಿ ಹಿ ಪ್ರಾ ಶಾಲೆ ಇದ್ದು, ಈ ಕಟ್ಟಡ ಪೂರ್ಣಗೊಂಡರೆ ಮಕ್ಕಳ ಪ್ರತಿಭೆ ಪ್ರಜ್ವಲಿಸುವ ಕಾರ್ಯಕ್ರಮಗಳು ಇಲ್ಲಿ ನಡೆಸಲು ತುಂಬಾ ಅನುಕೂಲವಾಗುತ್ತಿತ್ತು ಎಂದು ಪಾಲಕರ ಅಭಿಪ್ರಾಯವಾಗಿದೆ.
ಅಲ್ಲದೇ ಅದೇ ರೀತಿ ಈ ಕಟ್ಟಡದ ಸನಿಹವೇ ಸರಕಾರಿ ಬಾವಿಯೊಂದು ಮಂಜೂರಾಗಿದು,್ದ ಕಳೆದು ಎರಡು ತಿಂಗಳುಗಳಿಂದ ಬಾವಿ ಕೆಲಸ ಆರಂಭವಾಗಿ ಅದು ಅರ್ಧಕ್ಕೆ ನಿಂತಿದೆ. ಬಾವಿಗೆ ಹಾಕಲು ರಿಂಗ್‌ಗಳನ್ನು ಮಾಡಿಸಲಾಗಿದ್ದರೂ ಬಾವಿಯ ಕೆಲಸ ಪೂರ್ಣವಾಗದ ಕಾರಣ ಬಾವಿಗೆ ಹಾಕಲು ತಯಾರಿಸಿಡಲಾದ ರಿಂಗ್‌ಗಳು ಹಾಗೆಯೇ ಉಳಿದುಕೊಂಡಿದೆ.
ಸರಕಾರಿ ಕಾಮಕಾರಿಗಳು ಹೆಚ್ಚೆಚ್ಚು ಕುಗ್ರಾಮದಲ್ಲಿಯೇ ನಡೆಯುತ್ತಿದ್ದು, ಇಲ್ಲಿನ ಮುಗ್ಧ ಜನತೆ ಕಾಮಗಾರಿ ಕುರಿತು ಚಕಾರವೆತ್ತದಿರುವ ಕಾರಣ ಕಾಮಗಾರಿ ಹೇಗೆ ನಡೆದರೂ ಬಿಲ್ ಸಲೀಸಾಗಿ ಪಾಸ್ ಮಾಡಿ ಕೊಳ್ಳಬಹುದೆಂಬ ಮಾತುಗಳು ಸಾರ್ವತ್ರಿಕವಾಗಿ ಕೇಳಿಬರುತ್ತಿವೆ. ಹಾಗಾಗಿಯೇ ಸರಕಾರದ ಬಹಳಷ್ಟು ಯೋಜನೆಗಳು ಕುಗ್ರಾಮದ ಜನರಿಗೆ ತಲುಪದೇ ಸರಕಾರದ ನಿರೀಕ್ಷೆಗಳು ಹುಸಿಯಾಗ ತೊಡಗಿವೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಇಂತಹ ಅಪೂರ್ಣ ಕಾಮಗಾರಿ ನಡೆಸುವವರ ವಿರುದ್ಧ ಕಠಿಣಕ್ರಮ ಜರುಗಿಸಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಯಾಗಲೂ ದಿಟ್ಟ ಹೆಜ್ಜೆ ಇಡಬೇಕಾಗಿದೆ.

loading...