ಆರೋಗ್ಯ ಹದಗೆಟ್ಟಿದೆ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ : ಸಿ ಟಿ ರವಿ

0
25

ಬೆಂಗಳೂರು ಮುಖ್ಯಮಂತ್ರಿ ಅವರಿಗೆ ಆರೋಗ್ಯ ಸರಿಯಿಲ್ಲ. ನಿಮ್ಮ ಆರೋಗ್ಯದ ಕಾಳಜಿ ಹಾಗೂ ರಾಜ್ಯದ ಆರೋಗ್ಯದ ದೃಷ್ಟಿಯಿಂದ ತಾವು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸರಿಯಲ್ಲ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಬಿಜೆಪಿ ಹಿರಿಯ ನಾಯಕ ಸಿಟಿ ರವಿ ಒತ್ತಾಯಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯರ್ಮರಸ್ಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಗುತ್ತಿಗೆ ಕಾರ್ಮಿಕರು ಸಮಸ್ಯೆಯನ್ನು ಮುಖ್ಯಮಂತ್ರಿ ಬಳಿ ಹೇಳಿಕೊಳ್ಳಲು ಬಂದಾಗ ಮುಖ್ಯಮಂತ್ರಿಯಾಗಿ ಅವರನ್ನು ನಡೆಸಿಕೊಂಡ ರೀತಿ ಸರಿಯಲ್ಲ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಜೆಡಿಎಸ್ ಮುಖ್ಯಮಂತ್ರಿಯೋ? ಎಂದು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ನಿಮಗೆ ಮತ ಹಾಕಿದವರಿಗೆ ಮಾತ್ರ ತಾವು ಸ್ಪಂದಿಸುವುದಾದರೆ ಅದು ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಧೋರಣೆಯಾಗಲಿದೆ ಎಂದು ಆರೋಪಿಸಿದರು.
ಸಮಸ್ಯೆಗೆ ಸಿಲುಕಿದ ಜನರನ್ನು ಕೆರಳಿಸುವ ಜೊತೆಗೆ ನಿಮ್ಮ ಘನತೆ ಹಾಗೂ ಮುಖ್ಯಮಂತ್ರಿ ಸ್ಥಾನದ ಘನತೆಯನ್ನೂ ಕುಗ್ಗಿಸುತ್ತಿದ್ದೀರಿ. ಮುಖ್ಯಮಂತ್ರಿ ಅವರಿಗೆ ನೀಡಿರುವ ಸೌಲಭ್ಯಗಳನ್ನು ರಾಜ್ಯಪಾಲರು,ಮುಖ್ಯ ಕಾರ್ಯದರ್ಶಿ ಅವರು ತಕ್ಷಣದಿಂದಲೇ ಸ್ಥಗಿತಗೊಳಿಸಲಿ.ಮುಖ್ಯಮಂತ್ರಿ ಅವರಿಗೆ ಸಂವಿಧಾನದ ಹಕ್ಕು ನೀಡಿದ್ದು ಸರ್ಕಾರವೇ ಹೊರತು ಜೆಡಿಎಸ್ ಪಕ್ಷವಲ್ಲ ಎಂದರು.
ಮುಖ್ಯಮಂತ್ರಿಯವರು ತಾರತಮ್ಯ ಧೋರಣೆ ಮುಂದುವರೆಸುವುದಾದರೆ ಅದನ್ನು ಎದುರಿಸಲು ರಾಜ್ಯದ ಜನತೆ ಹಾಗೂ ಬಿಜೆಪಿ ಸಿದ್ದವಾಗಿದೆ. ನೀವು ಕೇವಲ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಆದರೆ ಯಾವ ಅರ್ಹತೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೀರಿ ಎಂದು ಸಿ ಟಿ ರವಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆರೋಗ್ಯ ಸರಿಯಿಲ್ಲ , ನಿಮ್ಮ ಆರೋಗ್ಯದ ಕಾಳಜಿ ಹಾಗೂ
ರಾಜ್ಯದ ಆರೋಗ್ಯದ ಕಾಳಜಿ ಎರಡೂ ದೃಷ್ಟಿಯಿಂದ ಮುಖ್ಯಮಂತ್ರಿಯಾಗಿ ತಾವು ಮುಂದುವರಿಯುವುದು ಸರಿಯಿಲ್ಲ ತಕ್ಷಣ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಏನು ಸಲಹೆ ನೀಡುತ್ತಾರೆ ಎಂಬುದನ್ನು ಕಾಯುತ್ತಿದ್ದೇನೆ ಎಂದು ಅವರು ವ್ಯಂಗ್ಯವಾಡಿದರು.
ಇದೇ ವೇಳೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ತಮಗೆ ವಂಚನೆ ಎಸಗಿದೆ. ಎಚ್.ಬಿ.ಆರ್. ಲೇಔಟಿನಲ್ಲಿ 2006ರಲ್ಲಿ ಸರ್ಕಾರದಿಂದ 50×80 ನಿವೇಶನವನ್ನು ಬಿಡಿಎ ನೀಡಿತ್ತು. ಬಿಡಿಎ ನಿವೇಶನ ವಿವಾದಿತ ನಿವೇಶನವಾಗಿದ್ದ ಹಿನ್ನಲೆಯಲ್ಲಿ 2016ರಲ್ಲಿ ಬದಲಿ ನಿವೇಶನ ನೀಡುವಂತೆ ಬಿಡಿಎಗೆ ಪತ್ರ ಬರೆದು ಮನವಿ ಮಾಡಿದ್ದೆ ಎಂದರು.

ಈ ನಡುವೆ 2018ರಲ್ಲಿ ತಮಗೆ ನೀಡಿದ್ದ ನಿವೇಶನವನ್ನು ಶಕುಂತಲಾ ದೇವಿ ಎಂಬುವರಿಗೆ ಬಿಡಿಎ ಹಂಚಿಕೆ ಮಾಡಿದೆ. ವಿಪರ್ಯಾಸವೆಂದರೆ ಶಕುಂತಲಾ ದೇವಿ ಅವರು ನಿವೇಶನವನ್ನು ಮಾರಾಟ ಮಾಡಿದ್ದಾರೆ. ಈಗ ನಿವೇಶನದಲ್ಲಿ ಹೊಸ ಮಾಲೀಕ ಕೊಳವೆ ಬಾವಿ ಕೊರೆಸುತ್ತಿದ್ದಾರೆ , ಈ ಬಗ್ಗೆ ಬಿಡಿಎ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಏನೂ ಕ್ರಮ ಕೈಗೊಂಡಿದ್ದಲ್ಲ.ಬಿಡಿಎಗೆ ಎಚ್ಚರಿಕೆ ನೀಡಿರುವ ಶಾಸಕ ಸಿ.ಟಿ.ರವಿ ತಕ್ಷಣ ಬದಲಿ ನಿವೇಶನ ಹಂಚಿಕೆ ಮಾಡಬೇಕು ಇಲ್ಲದಿದ್ದಲ್ಲಿ ಬಿಡಿಎ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

loading...