ನಾಳೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

0
24

ಹೊನ್ನಾವರ :ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ೨೦೧೯-೨೦ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಳದಿಪುರ ಗ್ರಾ.ಪಂ. ಆವರಣದಲ್ಲಿಜೂನ್ ೨೮ ರಂದು ಕುಮಟಾ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆಎಂದು ಕೃಷಿ ಅಧಿಕಾರಿ ಪುನೀತಾಎಸ್.ಬಿ. ತಿಳಿಸಿದರು.
ಇವರು ಹೊನ್ನಾವರ ಪಟ್ಟಣದ ಕೃಷಿ ಇಲಾಖಾ ಕಛೇರಿಯಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು. ರೈತರಿಗೆ ಪ್ರತಿ ವರ್ಷದಂತೆ ಕೃಷಿ ಮಾಹಿತಿಘಟಕದ ಪ್ರಚಾರ ಹಾಗೂ ಕೃಷಿ ವಸ್ತುಪ್ರದರ್ಶನ, ರೈತವಿಜ್ಞಾನಿಸಂವಾದಕಾರ್ಯಕ್ರಮತಾಲೂಕಿನ ವಿವಿಧಗ್ರಾಮ ಪಂಚಾಯತಿ ಹೋಬಳಿ ಮಟ್ಟದಲ್ಲಿ ಕೃಷಿ ಮಾಹಿತಿಘಟಕದ ಪ್ರಚಾರ ವಾಹನ ಸಂಚರಿಸಿದೆ. ೨೮ರಂದು ಬೆಳಿಗ್ಗೆ ಕಸಬಾ ಹೋಬಳಿಯ ಹಳದಿಪುರ, ಕರ್ಕಿ, ಹೊನ್ನಾವರ, ಹೊಸಾಕುಳಿ, ಸಾಲ್ಕೋಡ್, ಹಾಗೂ ೨೯ರಂದು ಕಡ್ಲೆ, ಚಂದಾವರ,ಕಡತೋಕಾ ನವಿಲಗೋಣ ಭಾಗಗಳಲ್ಲಿ ಸಂಚರಿಸಿ ರೈತರಿಗೆ ಮಾಹಿತಿ ನೀಡಲಿದೆ.

loading...