ಉತ್ತರ ಕರ್ನಾಟಕ ಸಂಘಟನೆಯ ಸಾಧನೆ ಅಸಾಮಾನ್ಯ-ಸುಭಾಷಚಂದ್ರಗೌಡ ಪಾಟಿಲ್

0
25

ನವಲಗುಂದ: ಕಳೆದ ಮೂರು ವರ್ಷಗಳಲ್ಲಿ ಉತ್ತರ ಕರ್ನಾಟಕ ಪರಿವರ್ತನ ಸಮುದಾಯವು ಮಾಡಿರುವಂತಹ ಸಾಧನೆಯು ಅಸಾಮಾನ್ಯವಾಗಿದೆ ಎಂದು ರೈತಪರ ಹೋರಾಟಗಾರ ಸುಭಾಷಚಂದ್ರಗೌಡ ಪಾಟೀಲ್ ತಿಳಿಸಿದರು.
ನಗರದ ಶಾದಿ ಮಹಲಿನಲ್ಲಿ ಉತ್ತರ ಕರ್ನಾಟಕ ಪರಿವರ್ತನ ಸಮುದಾಯವು ಹಮ್ಮಿಕೂಂಡಿರುವಂತಹ ಕುರಿ ಸಾಕಾಣಿಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಸಂಘಟನೆಯು ನೂಂದವರ ಧ್ವನಿಯಾಗಿ ಸಮಾಜದಲ್ಲಿ ಹಲವಾರು ಕೆಲಸಗಳನ್ನು ಮಾಡುತ್ತಿದೆ, ಬಡ ಮಕ್ಕಳಿಗೆ ಉಚಿತವಾಗಿ ನೋಟಬುಕ್ ವಿತರಣೆ ಮಾಡುವುದಾಗಲಿ, ಸರ್ಕಾರದ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಇವತ್ತು ಕುರಿ ಸಾಕಾಣಿಕೆ ಕೇಂದ್ರವನ್ನು ಮಾಡುವ ಮೂಲಕ ಮತ್ತೂಂದು ಹೆಜ್ಜೆÃ ಮುಂದೆ ಇಟ್ಟಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಮಾತನಾಡಿ ಇವತ್ತು ಸಮಾಜ ಸೇವೆ ದೇವರ ಸೇವೆ ಎಂದು ನಮ್ಮ ಸಂಘಟನೆಯು ಕೆಲಸವನ್ನು ಮಾಡುತ್ತಿದೆ, ಊರಿನ ಹಿರಿಯರ ಸಹಕಾರ, ಸಂಘಟನೆಯ ಕಾರ್ಯಕರ್ತರ ಬೆಂಬಲದಿಂದ ನಮ್ಮ ಉತ್ತರ ಕರ್ನಾಟಕ ಪರಿವರ್ತನ ಸಮುದಾಯವು ಮೂರು ವರ್ಷವನ್ನು ಪೂರ್ಣಗೂಳಿಸಲು ಹೂರಟಿದೆ, ಇವತ್ತು ಕುರಿ ಸಾಕಾಣಿಕೆ ಕೇಂದ್ರವನ್ನು ತೆರೆದಿದ್ದೆÃವೆ, ಬರುವಂತಹ ಮುಂದಿನ ದಿನಮಾನಗಳಲ್ಲಿ ನಮ್ಮ ಸಂಘಟನೆಯು ಇನ್ನು ಹೆಚ್ಚಿನ ಸಾಮಾಜಿಕ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.

ಅಂಜುಮನ-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಅಬ್ಬಾಸಲಿ ದೇವರಿಡು ಮಾತನಾಡಿ ಉತ್ತರ ಕರ್ನಾಟಕ ಪರಿವರ್ತನ ಸಮುದಾಯವು ಇವತ್ತು ಸಮಾಜದಲ್ಲಿ ಪರಿವರ್ತನೆ ಮಾಡುವಂತಹ ಕೆಲಸವನ್ನು ಹಮ್ಮಿಕೂಂಡಿರುವುದು ಬಹಳ ಹೆಮ್ಮೆಯ ವಿಷಯ, ಇವತ್ತು ಬಡತನದಲ್ಲಿ ಶಾಲೆ ಕಲಿಯುತ್ತಿರುವಂತಹ ಮಕ್ಕಳಿಗೆ ನೋಟಬುಕ್ ಕೂಡಿಸುವುದಾಗಲಿ, ಬ್ಯಾಗ ಕೂಡಿಸುವುದಾಗಲಿ ಈ ಸಂಘಟನೆ ಮಾಡುತ್ತಾ ಬರುತ್ತಿದೆ. ಇವರ ಸಾಮಾಜಿಕ ಕಳಕಳಿಯು ಹಿಗೆಯೇ ಮುಂದುವರೆಯಲಿ ಎಂದು ಹಾರೈಸಿದರು.

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅಭಿಮಾನಿಗಳ ಬಳಗದ ಅಧ್ಯಕ್ಷ ರಿಯಾಜಅಹ್ಮದ ನಾಶೀಪುಡಿ ಮಾತನಾಡಿ ಇವತ್ತು ನಮ್ಮ ಆತ್ಮಿÃಯರಾಗಿರುವಂತಹ ಈ ಸಂಘಟನೆಯ ಅಧ್ಯಕ್ಷರು ಸಾಮಾಜಿಕ ಕಳಕಳಿಯನ್ನು ಹೂಂದಿದವರು, ದೀನದಲಿತ ಮಕ್ಕಳನ್ನು ಕಂಡರೆ ಅಪಾರ ಪ್ರಿÃತಿ ತೋರಿಸುವ ಇವರು ಪ್ರತಿ ವರ್ಷ ಜೂನ ತಿಂಗಳಲ್ಲಿ ಬಡ ಮಕ್ಕಳಿಗಾಗಿ ನೋಟಬುಕನ್ನು ವಿತರಿಸುವ ಮೂಲಕ ಶಿಕ್ಷಣ ಪ್ರೆÃಮಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಪುರಸಭೆ ಸದಸ್ಯರಾದ ಸುರೇಶ ಮೇಟಿ, ಬಶೀರಅಹ್ಮದ ಹುನಗುಂದ, ಮಕ್ತುಮಸಾಬ ಅಲ್ಲಿಬಾಯಿ, ಮೆಹಬೂಬಸಾಬ ಅಸಗಿ, ಸುಲೇಮಾನ ಮುಳಗುಂದ, ಮಾಬುಸಾಬ ಕೆರೂರ, ರಫಿಕ ಅಲ್ಲಿಬಾಯಿ, ಅಲ್ಲಾಸಾಬ ತಹಶೀಲ್ದಾರ, ಹುಸೇನಸಾಬ ಅಲ್ಲಿಬಾಯಿ, ಜೀವನಸಾಬ ಬೂದಿಹಾಳ, ಗಂಗಮ್ಮ ಹುಳಕಣ್ಣವರ, ಎಮ್.ಪೊಶೀದಾಬೇಗಂ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ನೂತನವಾಗಿ ಪುರಸಭೆಗೆ ಆಯ್ಕೆಯಾದ ಮೂರನೇ ವಾರ್ಡಿನ ಸುರೇಶ ಮೇಟಿಯವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಬಡ ಪ್ರತಿಭಾವಂತ ನೂರಾರು ಮಕ್ಕಳಿಗೆ ಉಚಿತವಾಗಿ ನೋಟಬುಕ್ ವಿತರಿಸಲಾಯಿತು.

loading...