ಏಕದಿನ ವಿಶ್ವಕಪ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

0
13

ಮ್ಯಾಂಚೆಸ್ಟರ್: ಐಸಿಸಿ ೨೦೧೯ ಏಕದಿನ ವಿಶ್ವಕಪ್‌ನಲ್ಲಿ ಗುರುವಾರ ನಡೆಯುತ್ತಿರವ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾವು ವೆಸ್ಟ್‌ಇಂಡೀಸ್ ಸವಾಲನ್ನು ಎದುರಿಸುತ್ತಿದೆ.
ಭಾರತ ಬ್ಯಾಟಿಂಗ್
ಮ್ಯಾಂಚೆಸ್ಟರ್‌ನ ಒಲ್ಡ್ ಟ್ರಾಫರ‍್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ವಿಜೇತ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಹಾಗಾಗಿ ಚೇತರಿಕೆಯ ಹಂತದಲ್ಲಿರುವ ಭುವನೇಶ್ವರ್‌ ಕುಮಾರ್‌ಗೆ ವಿಶ್ರಾಂತಿ ಸೂಚಿಸಲಾಗಿದೆ. ಅತ್ತ ವಿಂಡೀಸ್ ತಂಡದಲ್ಲಿ ಎರಡು ಬದಲಾವಣೆ ತರಲಾಗಿದ್ದು, ಸುನಿಲ್ ಅಬ್ರಿಸ್ ಹಾಗೂ ಫ್ಯಾಬಿಯನ್ ಅಲೆನ್ ತಂಡವನ್ನು ಸೇರಿಕೊಂಡಿದ್ದಾರೆ. ಇವರಿಗಾಗಿ ಎವಿನ್ ಲೆವಿಸ್ ಹಾಗೂ ಆಶ್ಲೆ ರ‍್ಸ್ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.

ಆಡುವ ಬಳಗ ಇಂತಿದೆ:

ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ರ‍್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ (ವಿ.ಕೀ), ಕೆ.ಎಲ್ ರಾಹುಲ್‌,ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹರ‍್ದಿಕ್‌ ಪಾಂಡ್ಯ, ವಿಜಯ್‌ ಶಂಕರ್

ವೆಸ್ಟ್‌ ಇಂಡೀಸ್‌:
ಜೇಸನ್‌ ಹೋಲ್ಡರ್ ‌(ನಾಯಕ), ಫ್ಯಾಬಿಯನ್‌ ಅಲ್ಲೆನ್‌, ಶಿಮ್ರಾನ್‌ ಹೆಟ್ಮೇರ್‌, ನಿಕೋಲಸ್‌ ಪೂರನ್‌, ಸುನೀಲ್‌ ಅಂಬ್ರೀಸ್‌‌, ಕರ‍್ಲೋಸ್‌ ಬ್ರಾಥ್‌ವೇಟ್‌, ಶೆಲ್ಡನ್‌ ಕಾಟ್ರೆಲ್‌, ಕ್ರಿಸ್‌ ಗೇಲ್‌, ಶಾಯ್‌ ಹೋಪ್‌, ಕೇಮರ್‌ ರೋಚ್, ಓಶೇನ್‌ ಥಾಮಸ್‌

loading...